ರೈಲಿನಲ್ಲಿ ಜನರೊಂದಿಗೆ ಮೇಕೆಯ ಪ್ರಯಾಣ; Viral Video ನೋಡಿ ನೆಟ್ಟಿಗರು ಹೀಗೇಳಿದ್ದೇಕೆ?

Untitled design - 2025-02-05T121139.725 (1)
Published on

ರೈಲುಗಳು ಮತ್ತು ಬಸ್​ಗಳಲ್ಲಿ ಜಗಳ, ಡ್ಯಾನ್ಸ್​​ ಅಥವಾ ರೀಲ್ಸ್​​ ಮಾಡುವ ಹಲವು ವಿಡಿಯೋಗಳನ್ನು ನಾವು ಸಾಮಾಜಿಕ ಜಾಲತಾಣದಲ್ಲಿ ನೋಡುತ್ತಿರುತ್ತೇವೆ. ಎಷ್ಟೋ ಬಾರಿ ಸೀಟಿಗಾಗಿ ರೈಲಿನಲ್ಲಿ ಕುಸ್ತಿ ಮಾಡಲು ಜನರು ಸಿದ್ಧರಿರುತ್ತಾರೆ. ಸದ್ಯ ವಿಡಿಯೋವೊಂದ ಜಾಲತಾಣದಲ್ಲಿ ವೈರಲ್(Viral Video)​​ ಆಗುತ್ತಿದ್ದು, ಅದನ್ನು ನೋಡಿದರೆ ಇಲ್ಲಿ ಏನು ಬೇಕಾದರೂ ನಿಜವಾಗಿಯೂ ಸಾಧ್ಯವಾಗುತ್ತ ಎಂದು ಎನ್ನಿಸುವುದಂತೂ ಸತ್ಯ.

ವಿಡಿಯೋ ವೈರಲ್​ ಆಗಲು ಕಾರಣ ಒಂದು ಮೇಕೆ. ವೈರಲ್ ಆಗಿರುವ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ತನ್ನ ಮೇಕೆಯೊಂದಿಗೆ ರೈಲು ಕೋಚ್‌ನಲ್ಲಿ ಪ್ರಯಾಣಿಸುತ್ತಿರುವುದನ್ನು ನೀವು ನೋಡಬಹುದು. ಅದನ್ನು ಬೋಗಿಯಲ್ಲಿ ಕಿಟಕಿಯ ಬಳಿ ಕಟ್ಟಲಾಗಿದೆ ಮತ್ತು ಮೇಕೆ ಅಲ್ಲಿ ಆರಾಮವಾಗಿ ನಿಂತಿದೆ. ಕುತೂಹಲಕಾರಿಯಾಗಿ ಇನ್ನೂ ಅನೇಕ ಜನರು ಬೋಗಿಯಲ್ಲಿ ನಿಂತು ಪ್ರಯಾಣಿಸುತ್ತಿರುವುದನ್ನು ಕಾಣಬಹುದು.

ಮೇಕೆ ಹತ್ತಿರದಲ್ಲಿ ಕೆಲವರು ಆರಾಮವಾಗಿ ನಿದ್ರಿಸುತ್ತಿದ್ದರೆ. ಇನ್ನು ಕೆಲವರು ಮೇಕೆಯ ವಿಡಿಯೋಗಳನ್ನು ಮಾಡುತ್ತಿರುವುದು ಕಂಡುಬಂದಿದೆ. ಈ ವಿಡಿಯೋ ಆಘಾತಕಾರಿಯಾಗಿದೆ ಏಕೆಂದರೆ ರೈಲಿನಲ್ಲಿ ಪ್ರಾಣಿಗಳೊಂದಿಗೆ ಪ್ರಯಾಣಿಸಲು ಕೆಲವು ನಿಯಮಗಳಿವೆ. ಉದಾಹರಣೆಗೆ ಪ್ರಾಣಿಗಳ ಫಿಟ್‌ನೆಸ್ ಮತ್ತು ಲಸಿಕೆ ಪ್ರಮಾಣಪತ್ರಗಳನ್ನು ಸಲ್ಲಿಸಬೇಕು. ಹಾಗೂ ಸಾಕುಪ್ರಾಣಿಗಳು ಪ್ರಥಮ ದರ್ಜೆಯ ಎಸಿಯಲ್ಲಿ ಮಾತ್ರ ಪ್ರಯಾಣಿಸಲು ಅವಕಾಶವಿದೆ.

ಈ ವಿಡಿಯೋವನ್ನು ಇದುವರೆಗೂ 7.8 ಮಿಲಿಯನ್ ಮಂದಿ ವೀಕ್ಷಿಸಿದ್ದು ಹಲವರು ಪ್ರತಿಕ್ರಿಯಿಸಿದ್ದಾರೆ. ನಾಯಿ ಮತ್ತು ಬೆಕ್ಕನ್ನು ಕರೆದುಕೊಂಡು ಹೋಗಲು ಸಾಧ್ಯವಾದರೆ ಮೇಕೆಯನ್ನು ಏಕೆ ಕರೆದುಕೊಂಡು ಹೋಗಬಾರದು, ಜನರು ಎಮ್ಮೆ ಮತ್ತು ಮೇಕೆಗಳಂತೆ ಹೋಗುತ್ತಿದ್ದಾರೆ, ಅವರು ವಿಭಿನ್ನ ರೀತಿಯ ಮೋಜನ್ನು ಮಾಡುತ್ತಿದ್ದಾರೆ, ಮೇಕೆ ಕೂಡ ನಾನು ಬಡವರ ನಡುವೆ ಬಂದಿದ್ದೇನೆಯೇ ಎಂದು ಆಶ್ಚರ್ಯ ಪಡುತ್ತಿರಬೇಕು, ಅದು ನಾಯಿಯಾಗಿದ್ದರೆ ಚೆನ್ನಾಗಿ ಕಾಣುತ್ತಿತ್ತು ಎಂದು ಕಾಮೆಂಟ್​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net