ಕ್ಯಾರೆಟ್​​ನಲ್ಲಿರುವ ಮಣ್ಣನ್ನು ತೊಳೆಯಲು ರೈತರೊಬ್ಬರ ವಿಶಿಷ್ಟ ಟ್ರಿಕ್​​; Viral Video ನೋಡಿ ನೆಟ್ಟಿಗರು ಹೇಳಿದ್ದು ಹೀಗೆ..

Untitled design (18)
Published on

ಕೃಷಿ ಮಾಡುವುದು ಸುಲಭದ ಕೆಲಸವಲ್ಲ. ರೈತರು ಹೊಲದಲ್ಲಿ ಬಿತ್ತನೆ ಮಾಡುವುದರಿಂದ ಹಿಡಿದು ಅದರಲ್ಲಿ ಬೆಳೆಗಳು ಅಥವಾ ತರಕಾರಿಗಳನ್ನು ಬೆಳೆಯುವವರೆಗೆ ಮತ್ತು ಅವುಗಳನ್ನು ಕೊಯ್ಲು ಮಾಡುವವರೆಗೆ ದೀರ್ಘ ಪ್ರಕ್ರಿಯೆಯ ಮೂಲಕ ಹೋಗಬೇಕಾಗುತ್ತದೆ. ಬೆಳೆಗಳ ಹೊರತಾಗಿ ನೆಲದಡಿಯಲ್ಲಿ ಬೆಳೆಯುವ ತರಕಾರಿಗಳ ಬಗ್ಗೆ ಹೇಳುವುದಾದರೆ, ಕ್ಯಾರೆಟ್, ಬೀಟ್ರೂಟ್, ಆಲೂಗಡ್ಡೆ, ಮೂಲಂಗಿ ಮತ್ತು ಇತರ ತರಕಾರಿಗಳನ್ನು ಮಣ್ಣಿನಿಂದ ಹೊರತೆಗೆಯುವಾಗ ಅವುಗಳಿಗೆ ಅಂಟಿಕೊಂಡಿರುವ ಬಹಳಷ್ಟು ಮಣ್ಣನ್ನು ಹೋಗಲಾಡಿಸುವುದು ಬಹಳ ಕಷ್ಟ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral Video)​ ಆಗಿದೆ.

ರೈತರೊಬ್ಬರು ಕ್ಯಾರೆಟ್​ ಅನ್ನು ಸ್ವಚ್ಛಗೊಳಿಸುವ ವಿಧಾನವು ವೈರಲ್​ ಆಗಿದೆ. ವೈರಲ್ ವಿಡಿಯೋದಲ್ಲಿ ಕ್ಯಾರೆಟ್‌ಗಳಿಂದ ತುಂಬಿದ ಸ್ಟ್ಯಾಂಡ್‌ನಲ್ಲಿ ಡ್ರಮ್ ಅನ್ನು ಇರಿಸಲಾಗಿದೆ, ನೀವು ಅದನ್ನು ನೋಡಬಹುದು. ಡ್ರಮ್​ ಅನ್ನು ಮಧ್ಯದಲ್ಲಿ ಬಾಗಿಲಾಕಾರದಲ್ಲಿ ಕತ್ತರಿಸಲಾಗಿದೆ ಮತ್ತು ಅದರಿಂದ ಕ್ಯಾರೆಟ್‌ಗೆ ನೀರು ಸೇರಿಸಲಾಗುತ್ತದೆ. ನಂತರ ಓಪನ್​ ಮಾಡಿರುವುದನ್ನು ಕ್ಲೋಸ್​ ಮಾಡಲಾಗುತ್ತದೆ. ಬಳಿಕ ಅದನ್ನು ಡ್ರಮ್​ಗೆ ಕನೆಕ್ಟ್​ ಮಾಡಿರುವ ಒಂದು ಕಂಬಿಯಿಂದ ತಿರುಗಿಸಲಾಗುತ್ತದೆ. ಚೆನ್ನಾಗಿ ತಿರುಗಿಸುವುದರಿಂದ ಕ್ಯಾರೆಟ್ ಸ್ವಚ್ಛವಾಗಿರುತ್ತದೆ. ತೊಳೆದ ನಂತರ ಅದನ್ನು ತೆಗೆಯುವುದು ಸಹ ತುಂಬಾ ಸುಲಭ. ಒಟ್ಟಾರೆಯಾಗಿ ಈ ವಿಧಾನದಿಂದು ಮಣ್ಣಿರುವ ಕ್ಯಾರೆಟ್​​ ಅನ್ನು ತೊಳೆಯುವುದು ಸುಲಭ ಎಂದು ತೋರಿಸಲಾಗಿದೆ.

‘ಕ್ಯಾರೆಟ್ ತೊಳೆಯಲು ದೇಸಿ ಜುಗಾಡ್’ ಎಂದು ಶೀರ್ಷಿಕೆ ನೀಡಿ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಇದುವರೆಗೂ ಈ ವೈರಲ್​ ವಿಡಿಯೋವನ್ನು 34 ಮಿಲಿಯನ್​ಗಿಂತಲೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಬ್ರದರ್​​ ನಾನು ಕೂಡ ಈ ಯಂತ್ರವನ್ನು ಖರೀದಿಸಬೇಕು ನೀವು ಅದನ್ನು ಎಷ್ಟು ಬೆಲೆಗೆ ಮಾರಾಟ ಮಾಡುತ್ತೀರಿ?, 20 ವರ್ಷಗಳ ಹಿಂದೆಯೂ ನಾವು ಕ್ಯಾರೆಟ್‌ಗಳನ್ನು ಹೀಗೆಯೇ ತೊಳೆದಿದ್ದೇವೆ, ಚರಂಡಿಯಲ್ಲಿ ತೊಳೆದ ಕ್ಯಾರೆಟ್ ತಿನ್ನುವುದಕ್ಕಿಂತ ಇದು ಉತ್ತಮ ಎಂದು ಕಾಮೆಂಟ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net