ಪ್ರಿಯತಮೆಗೆ ಕ್ಷಮೆಕೇಳಲು ರಸ್ತೆಯಲ್ಲಿ ಹೋರ್ಡಿಂಗ್​​​ ಹಾಕಿದ ಯುವಕ; Viral Video ನೋಡಿದ್ರೆ ನಗುವುದು ಗ್ಯಾರಂಟಿ

Untitled design (33)
Published on

ನವದೆಹಲಿ: ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಹಲವು ವಿಷಯಗಳು ವೈರಲ್​ ಆಗುತ್ತಿರುತ್ತವೆ. ಕೆಲವೊಂದು ಮಾಹಿತಿ ನೀಡುವಂತವಾದರೆ ಮತ್ತೆ ಕೆಲವು ಅನವಶ್ಯಕ ಎನ್ನಿಸುತ್ತದೆ. ಇನ್ನೂ ಕೆಲವು ವಿಡಿಯೋದಲ್ಲಿನ ವಿಚಾರಗಳನ್ನು ನೋಡಿದರೆ ಸಾಕು ನಗುವನ್ನು ತಡೆಯಲಾಗುವುದಿಲ್ಲ, ಅಷ್ಟು ಫನ್ನಿಯಾಗಿರುತ್ತದೆ. ಅಂತಹದ್ದೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.(Viral Video)

ಈ ಇಂಟರ್​ನೆಟ್​​ ಯುಗದಲ್ಲಿ ಪ್ರೀತಿ ಎಂಬುದು ಇವರಿಗೆ ಎಂದು ಸೀಮಿತವಾಗಿಲ್ಲ. ಯಾರು ಬೇಕಾದರೂ ಪ್ರೀತಿಸುತ್ತಾರೆ ಅಷ್ಟೇ ಬೇಗನೆ ಅವಾಯ್ಡ್​ ಅಥವಾ ಬ್ಲಾಕ್​ ಕೂಡ ಮಾಡುತ್ತಾರೆ. ಆದರೆ ಈ ವೈರಲ್​ ವಿಡಿಯೋದಲ್ಲಿ ತೋರಿಸಿರುವಂತೆ ವಿಷಯವನ್ನು ಚಿಕ್ಕವಯಸ್ಸಿನ ಮಕ್ಕಳು ಮಾಡುತ್ತಾರೆ ಎಂದು ಹೇಳಲು ಆಗುವುದಿಲ್ಲ.

ವೈರಲ್​ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ತನ್ನ ಗೆಳತಿಯ ಮನವೊಲಿಸಲು ಅನೇಕ ಪೋಸ್ಟರ್‌ಗಳನ್ನು ರಸ್ತೆಯಲ್ಲಿ ಹಾಕಿದ್ದಾನೆ. ವಿಡಿಯೋ ಮಾಡುತ್ತಿರುವ ವ್ಯಕ್ತಿಯೂ ಅದನ್ನು ಓದಿ ಮೋಜು ಮಾಡುತ್ತಿರುವುದು ಕಂಡು ಬರುತ್ತದೆ. ಪ್ರತಿ ಹೋರ್ಡಿಂಗ್​ನಲ್ಲಿಯೂ 'ಕ್ಷಮಿಸು ಬೇಬು' ಎಂದು ಬರೆಯಲಾಗಿದೆ. ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳು ಇದನ್ನು ಮಾಡುತ್ತಾರೆ ಎಂದು ಹೇಳುವುದು ಕಷ್ಟ. ಗರ್ಲ್​​ಫ್ರೆಂಡ್​​ಗೆ ಕ್ಷಮಿಸು ಎಂದು ಹೇಳಲು ಹುಡುಗನೊಬ್ಬ ದಾರಿ ಮಧ್ಯದ ಡಿವೈಡರ್ ಮೇಲಿರುವ ಪಿಲ್ಲರ್​​ಗಳ ಮೇಲೆ ಹಲವು ಪೋಸ್ಟರ್​​​ಗಳನ್ನು ಹಾಕಿದ್ದಾನೆ ಎಂಬುದು ಸ್ಪಷ್ಟವಾಗುತ್ತದೆ.

ಸುಮಾರು 33 ಸೆಕೆಂಡಗಳ ಈ ವಿಡಿಯೋವನ್ನು ಇದುವರೆಗೂ 89 ಸಾವಿರ ಮಂದಿ ವೀಕ್ಷಿಸಿದ್ದು, ಅನೇಕರು ಪ್ರತಿಕ್ರಿಯಿಸಿದ್ದಾರೆ.ಹೋರ್ಡಿಂಗ್​ ಹಾಕುವುದನ್ನು ನಿರ್ಬಂಧಿಸಲಾಗಿದೆ ಎಂದು ತೋರುತ್ತದೆ, ತೆಗೆದುಬಿಡು ಅಣ್ಣ ಬಾಬುಗಳೆಲ್ಲ ಸೇರಿ ಒಪ್ಪುತ್ತಾರೆ ಎಂದು ಕಾಮೆಂಟ್​ ಮಾಡಿದ್ದಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net