

ಕಳೆದ ಕೆಲವು ವರ್ಷಗಳಲ್ಲಿ ಸಂಗೀತ ಸಮಾರಂಭಗಳ ಟ್ರೆಂಡ್ ಎಷ್ಟು ಹೆಚ್ಚಾಗಿದೆ ಎಂದರೆ, ಮದುವೆಗಳ ನೃತ್ಯ ವಿಡಿಯೋಗಳು ಹೆಚ್ಚಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಕೆಲವೊಮ್ಮೆ ಜನರು ವಧು-ವರರ ಡ್ಯಾನ್ಸ್ ಇಷ್ಟಪಡುತ್ತಾರೆ ಮತ್ತೆ ಕೆಲವೊಮ್ಮೆ ಅಜ್ಜಿಯರ ಉತ್ಸಾಹಭರಿತ ಪ್ರದರ್ಶನ ಎಲ್ಲರ ಹೃದಯವನ್ನು ಗೆಲ್ಲುತ್ತದೆ.
ವೈರಲ್ ವಿಡಿಯೋದಲ್ಲಿ ಮದುವೆ ಸಮಾರಂಭದಲ್ಲಿ ವಧುವಿನ ಪಾಲಕರು ತಮ್ಮ ಅದ್ಭುತ ನೃತ್ಯದ ಮೂಲಕ ಎಲ್ಲರ ಗಮನ ಸೆಳೆದರು. 'ಕುಡಿ ಗುಜರಾತ್ ದಿ' ಹಾಡಿಗೆ ಹೆಜ್ಜೆ ಹಾಕಿದ್ದಾರೆ. ವಧುವಿನ ತಾಯಿ ಸುಂದರವಾದ ನೀಲಿ ಲೆಹೆಂಗಾದಲ್ಲಿ, ತಂದೆ ಕಪ್ಪು ಬಣ್ಣದ ಶೇರ್ವಾನಿಯಲ್ಲಿ ಅದ್ಭುತವಾಗಿ ನೃತ್ಯ ಮಾಡುತ್ತಿರುವುದನ್ನು ನೋಡಬಹುದು. ಅವರ ನೃತ್ಯದ ಹೆಜ್ಜೆಗಳು ಅವರ ವಯಸ್ಸನ್ನು ಊಹಿಸುವುದು ಕಷ್ಟ ಎನ್ನಿಸುವಂತಿದೆ ಡ್ಯಾನ್ಸ್.
ಈ ವಿಡಿಯೋವನ್ನು ಇದುವರೆಗೂ 9 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಅನೇಕರು ಪ್ರತಿಕ್ರಿಯಿಸಿದ್ದಾರೆ. ಅವರು 20ರ ಹರೆಯದಲ್ಲಿ ಹೇಗಿರುತ್ತಾರೆ ಎಂದು ನನಗೆ ಆಶ್ಚರ್ಯವಾಗುತ್ತದೆ?, ನಿಮ್ಮ ಕುಟುಂಬ ನನಗೆ ಇಷ್ಟವಾಯಿತು, ನೀವು ಅದ್ಭುತ! ಎಂದು ಕಾಮೆಂಟ್ ಮಾಡಿದ್ದಾರೆ.