ಟೊಮೆಟೊ ಕೂಡ ಸದ್ಯ ಟ್ರೆಂಡಿಂಗ್ ತರಕಾರಿಯಾಗಿದೆ. ಅದರ ಚಟ್ನಿ ತಯಾರಿಸುವುದರಿಂದ ಹಿಡಿದು ತರಕಾರಿ ಗ್ರೇವಿ ತಯಾರಿಸುವವರೆಗೆ ಬಳಸಲಾಗುತ್ತದೆ. ಅಡುಗೆಮನೆಯಲ್ಲಿ ಟೊಮೆಟೊ ಇಲ್ಲಿದದ್ದರೆ ಯಾವುದೆ ಅಡುಗೆ ಸಂಪೂರ್ಣ ಆಗುವುದಿಲ್ಲ. ನೆಟ್ಟಿಗರು ಸಹ ಪ್ರತಿದಿನ ಟೊಮೆಟೊ ಮೇಲೆ ಮಾಡಿದ ‘ಆಹಾ ಟೊಮೆಟೊ’ ಹಾಡಿನ ರೀಲ್‌ಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಆದರೆ ಈ ಬಾರಿ ವೈರಲ್ ಆಗಿರುವ ಪೋಸ್ಟ್(Viral Post) ವಿಭಿನ್ನವಾಗಿದೆ.
ಇದನ್ನು ಓದಿ: ಪಾಕಿಸ್ತಾನದಲ್ಲಿ ಬಣ್ಣಗಳ ಹಬ್ಬ ‘ಹೋಳಿ’ ಆಚರಣೆ; Viral Video ನೋಡಿ ನೆಟ್ಟಿಗರು ಹೇಳಿದ್ದು ಹೀಗೆ..
ರೆಡ್ಡಿಟ್ ಬಳಕೆದಾರರು ಆನ್‌ಲೈನ್‌ನಲ್ಲಿ 12 ಟೊಮೆಟೊಗಳನ್ನು ಆರ್ಡರ್ ಮಾಡಿರುವುದಾಗಿ ತಿಳಿಸಿದ್ದಾರೆ. ಆದರೆ ವಿತರಣಾ ಅಪ್ಲಿಕೇಶನ್ನಿಂದ ಬಂದಿರುವ ಟೊಮೆಟೊ ನೋಡಿ ಆಶ್ಚರ್ಯಪಟ್ಟಿದ್ದಾರೆ. ಏಕೆಂದರೆ 12 ಟೊಮೆಟೊ ಬೇಕೆಂದು ಆರ್ಡರ್ ಮಾಡಿದ್ದರೆ, ನನಗೆ ತಲಾ 6 ಟೊಮೆಟೊಗಳ 12 ಗೊಂಚಲುಗಳು ಬಂದಿವೆ. ನನ್ನ ಬಳಿ ಈಗ 72 ಟೊಮೆಟೊಗಳಿವೆ ಮತ್ತು ನಾಳೆ ನಾನು 2 ವಾರಗಳ ಕಾಲ ದೇಶವನ್ನು ತೊರೆಯುತ್ತಿದ್ದೇನೆ ಎಂದು ಮಾಡಿರುವ ಪೋಸ್ಟ್ನಲ್ಲಿ ತಿಳಿಸಿದ್ದಾರೆ. ಆ ವ್ಯಕ್ತಿಯ ಕಾಳಜಿಯನ್ನು ನೋಡಿ ಕಾಮೆಂಟ್ ವಿಭಾಗದಲ್ಲಿರುವ ಬಳಕೆದಾರರು ಅವರಿಗೆ ವಿವಿಧ ಪರಿಹಾರಗಳನ್ನು ಸೂಚಿಸಿದ್ದಾರೆ.
ಈ ವೈರಲ್ ಪೋಸ್ಟ್ ಅನ್ನು ಇದುವರೆಗೂ 76 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಹಲವರು ಪ್ರತಿಕ್ರಿಯಿಸಿದ್ದಾರೆ. ಓ ದೇವರೇ..ನೀವು ಹೊಸ ಗಣಿತದ ಸಮಸ್ಯೆಯಾಗಿದ್ದೀರಿ, ಒಂದೇ ದಿನದಲ್ಲಿ 12 ಟೊಮೆಟೊಗಳನ್ನು ಏನು ಮಾಡಲಿದ್ದೀರಿ, 12 ಟೊಮೆಟೊಗಳನ್ನು ಏಕೆ ಆರ್ಡರ್ ಮಾಡಬೇಕು ಎಂದು ಕಾಮೆಂಟ್ ಮಾಡಿದ್ದಾರೆ.
ತಾಜ್ ಮಹಲ್ ಅನ್ನು ಕಾರ್ಮಿಕರು ಹೇಗೆ ನಿರ್ಮಿಸಿರಬಹುದು; ಕಲ್ಪನೆಗೆ ದೃಶ್ಯ ರೂಪ ಕೊಟ್ಟಿರುವ AI Video Viral