ವಿನಯಾ ವಿನೋದ ನಾಯ್ಕ ಅವರಿಗೆ ಲಯನ್ಸ್‌ ಕ್ಲಬ್‌ನ ಶ್ರೇಷ್ಠ ಅಧ್ಯಕ್ಷೆ ಪ್ರಶಸ್ತಿ

Layans-club-News
Published on

ಕಾರವಾರ: ಇಲ್ಲಿನ ಲಯನ್ಸ್‌ ಕ್ಲಬ್‌ನ ನಿಕಟಪೂರ್ವ ಅಧ್ಯಕ್ಷೆ ವಿನಯಾ ವಿನೋದ ನಾಯ್ಕ ಅವರಿಗೆ ಶ್ರೀಷ್ಠ ಅಧ್ಯಕ್ಷೆ ಪ್ರಶಸ್ತಿ ಲಭಿಸಿದೆ.
ಇತ್ತೀಚೆಗೆ ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ನಡೆದ ಲಯನ್ಸ್‌ ಜಿಲ್ಲೆಯ 317 -ಬಿ ದ 2022-23 ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ನಿಕಟಪೂರ್ವ ಲಯನ್ಸ್‌ ಜಿಲ್ಲಾ ಗವರ್ನರ್‌ ಸಗ್ಗಲಾ ಸಂಯ ಯಲಮಾಲಿ ಅವರು ವಿಜೇತರಿಗೆ ಪ್ರಶಸ್ತಿ ಪ್ರಧಾನ ಮಾಡಿದರು. ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಸಾಮಾಜಿಕ, ಪರಿಸರ ಹಾಗೂ ವಿವಿಧ ಆರೋಗ್ಯ ಕ್ಷೇತ್ರದಲ್ಲಿ ಮಾಡಿದ ಸೇವೆಯನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗುತ್ತದೆ.
ಇದನ್ನೂ ಓದಿ:ನೌಕಾನೆಲೆಯಲ್ಲಿ ಟಗ್ ಗೆ ಬೆಂಕಿ
ಇದೇ ಸಂದರ್ಭದಲ್ಲಿ ಕೆ.ಎಸ್‌.ಕಿನ್ನರಕರ್‌ ಅವರಿಗೆ ಅತ್ಯುತ್ತಮ ಕಾರ್ಯದರ್ಶಿ, ಆರ್‌.ವಿ.ಭಟ್‌ ಅವರಿಗೆ ಅತ್ಯುತ್ತಮ ಕೋಶಾಧ್ಯಕ್ಷ, ಅತ್ಯುತ್ತಮ ಡಿಸ್ಟ್ರಿಕ್ಟ್‌ ಚೇರ್‌ ಪರ್ಸನ್‌ ಪ್ರಶಸ್ತಿಯನ್ನು ವಿನೋದ ನಾಯ್ಕ ಅವರಿಗೆ, ಶಶಿನಂದ ಮಾಸೂರಕರ್‌ ಅವರಿಗೆ ಅತ್ಯುತ್ತಮ ಜೋನ್‌ ಚೇರ್‌ ಪರ್ಸನ್‌, ಡಿಸ್ಟ್ರಿಕ್ಟ್‌ ಚೇರ್‌ ಪರ್ಸನ್‌ ಪ್ರಶಸ್ತಯನ್ನು ಐಶ್ವರ್ಯ ಮಾಸೂರಕರ್‌, ಲಕ್ಷ್ಮೀಕಾಂತ ಪ್ರಭು, ಪ್ರೀತಮ್‌ ಮಾಸೂರಕರ್‌, ಅನಿರುದ್ಧ ಹಳದೀಪುರಕರ್‌, ಅವರಿಗೆ ನೀಡಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net