ತಳ್ಳುಗಾಡಿಯಲ್ಲಿ ಬೈಕ್ ಶವಯಾತ್ರೆ

vjp-2-2
Published on

ವಿಜಯಪುರ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಇಂಧನ ದರ ನೀತಿ ಖಂಡಿಸಿ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಬೈಕ್ ಶವ ಯಾತ್ರೆ ನಡೆಸಿದರು.

ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಜಿಲ್ಲಾಡಳಿತ ಕಚೇರಿವರೆಗೆ ಯಾತ್ರೆ ನಡೆಯಿತು. ತಳ್ಳುಗಾಡಿಯಲ್ಲಿ ಬೈಕ್ ಇಟ್ಟು, ಮಂಡಕ್ಕಿ ಎಸೆದು, ಹಲಗೆ ಬಾರಿಸಿ ಭಾವಪೂರ್ಣ ಶೃದ್ಧಾಂಜಲಿ ಕೋರಲಾಯಿತು. ಬಳಿಕ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ವೇದಿಕೆಯ ಜಿಲ್ಲಾಧ್ಯಕ್ಷ ಶಕ್ತಿಕುಮಾರ ಉಕುಮನಾಳ ಮಾತನಾಡಿ, ಕೇಂದ್ರ ಸರ್ಕಾರ 2021 ರ ಬಜೆಟ್ ಮಂಡನೆಯ ಪ್ರಕಾರ ಡಿಸೆಲ್, ಪೆಟ್ರೋಲ್, ಇಲೆಕ್ಟ್ರಾನಿಕ್ ವಸ್ತುಗಳು ಮತ್ತು ದಿನ ನಿತ್ಯ ಬಳಕೆಯ ವಸ್ತುಗಳಾದ ಅಡುಗೆ ಎಣ್ಣೆ, ತೊಗರಿ, ಬೇಳೆ, ಸಕ್ಕರೆ ಮತ್ತಿತರ ವಸ್ತುಗಳ ಬೆಲೆ ಹೆಚ್ಚಿಸಿದೆ. ಆ ಮೂಲಕ ಬಡವರಿಗೆ ಗಾಯದ ಮೇಲೆ ಬರೆ ಎಳೆದಿದೆ ಎಂದು ಆರೋಪಿಸಿದರು.

ಗೊಬ್ಬರ, ಔಷಧ ಬೀಜಗಳು ಮತ್ತು ವಾಹನದ ಬಿಡಿಭಾಗಗಳ ದರ ಹೆಚ್ಚಿಸಿ ಸರ್ಕಾರ ದುರಾಳಿತ ನಡೆಸುತ್ತಿದೆ. ಈ ಕೂಡಲೇ ಎಲ್ಲ ಅಗತ್ಯ ವಸ್ತುಗಳ ಬೆಲೆ ಇಳಿಸಬೇಕೆಂದು ಮನವಿ ಮಾಡಿದರು.

ಮೀನಾಕ್ಷಿ ಅರವಿಂದ, ಸುಜಾತಾ ಶಿಂಧೆ, ಪ್ರೇಮ ಚಲವಾದಿ, ಸೈಯ್ಯದ ಬಂಡಿ, ಪರಶುರಾಮ ಚ. ವಿಜಾಪುರ, ಮಹೇಶ ಬಂಡಿವಡ್ಡರ, ಪಕ್ಕು ಪಾಟೀಲ, ಸಾಗರ ಸೌದಿ, ಸಂಗಮೇಶ ದೊಡ್ಡಮನಿ, ಸಂತೋಷ ಭಾವಿಕಟ್ಟಿ, ಮನಸೂರ ಅಲಿ, ಪ್ರಜ್ವಲ ತೋಟದ, ಬೀರು ಪೂಜಾರಿ, ಶ್ರೀಕಾಂತ ನಾಯ್ಕೋಡಿ, ಆನಂದ ಶಹಾಪುರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net