ಐದು ಭಾಷೆಗಳಲ್ಲಿ 'ವಿಜಯಾನಂದ' ಟ್ರೈಲರ್ ಬಿಡುಗಡೆ!

Vijayananda Trailer 2
Published on

ಬೆಂಗಳೂರು: ಡಾ. ವಿಜಯ ಸಂಕೇಶ್ವರ ಅವರ ಜೀವನವನ್ನಾಧರಿಸಿ ನಿರ್ಮಾಣವಾಗಿರುವ 'ವಿಜಯಾನಂದ' ಚಿತ್ರದ ಟ್ರೇಲರ್​ ಐದು ಭಾಷೆಗಳಲ್ಲಿ ಇಂದು ಬಿಡುಗಡೆಯಾಗಿದೆ.

'ವಿಜಯಾನಂದ' ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ಒರಾಯನ್​ ಮಾಲ್​ನ ಪಿವಿಆರ್​ ಮಲ್ಟಿಪ್ಲೆಕ್ಸ್​ನಲ್ಲಿ ನಡೆಯುತ್ತಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಡಾ.ಕೆ. ಸುಧಾಕರ್​ ಮುಂತಾದ ಗಣ್ಯರು ಭಾಗವಹಿಸಿ ಟ್ರೈಲರ್​ ಬಿಡುಗಡೆ ಮಾಡಿದ್ದಾರೆ.

ಈ ಕಾರ್ಯಕ್ರಮದಲ್ಲಿ 'ವಿಜಯಾನಂದ' ಚಿತ್ರತಂಡದವರ ಜತೆಗೆ ಕನ್ನಡ ಚಿತ್ರಂಗದ ಹಲವು ಗಣ್ಯರು ಭಾಗವಹಿಸಿದ್ದು, ಬೇರೆ ಭಾಷೆಗಳ 200ಕ್ಕೂ ಹೆಚ್ಚು ಪತ್ರಕರ್ತರು ಭಾಗಿಯಾಗಿರುವುದು ವಿಶೇಷ.

ಈ ಟ್ರೈಲರ್​ನಲ್ಲಿ ವಿಜಯ ಸಂಕೇಶ್ವರ ಅವರ ಸಾಹಸಗಾಥೆ ಮತ್ತು ಯಶೋಗಾಥೆ ಅನಾವರಣಗೊಂಡಿದೆ. ಒಂದು ಟ್ರಕ್ ನಿಂದ ಶುರುಮಾಡಿ, ಅತೀ ದೊಡ್ಡ ಲಾಜಿಸ್ಟಿಕ್ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು ಹೇಗೆ, ಪತ್ರಿಕೋದ್ಯಮದಲ್ಲಿ ನಂಬರ್ ಒನ್ ಆಗಿದ್ದು ಹೇಗೆ, ಕಲ್ಲುಮುಳ್ಳಿನ‌ ಹಾದಿಯಲ್ಲಿ ಸಾಗಿ ಸಾಮ್ರಾಜ್ಯ ನಿರ್ಮಿಸಿದ ಪರಿ ಬಿಗ್ ಸ್ಕ್ರೀನ್ ಮೇಲೆ ಅನಾವರಣಗೊಂಡಿದೆ.

'ವಿಜಯಾನಂದ' ಚಿತ್ರದ ಟ್ರೈಲರ್​ ಯೂಟ್ಯೂಬ್​ನ ಆನಂದ್​ ಆಡಿಯೋ ಚಾನಲ್​ನಲ್ಲಿ ಬಿಡುಗಡೆಯಾಗಿದ್ದು, ಈ ಟ್ರೈಲರ್​ಗೆ ಪ್ರೇಕ್ಷಕರಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net