ಮುತ್ತಯ್ಯ ಮುರಳೀಧರನ್​ ಬಯೋಪಿಕ್​ನಿಂದ ಹೊರ ನಡೆದ ವಿಜಯ್​ ಸೇತುಪತಿ

800 - Vijay Sethupathi
Published on

ಚೆನ್ನೈ: ಮುತ್ತಯ್ಯ ಮುರಳೀಧರನ್​ ಕುರಿತಾದ '800' ಎಂಬ ಬಯೋಪಿಕ್​ ಸಾಕಷ್ಟು ವಿವಾದ ಹುಟ್ಟುಹಾಕುತ್ತಿರುವ ವಿಷಯ ಗೊತ್ತೇ ಇದೆ. ಇದೀಗ ಆ ಚಿತ್ರದಿಂದ ನಟ ವಿಜಯ್​ ಸೇತುಪತಿ ಹೊರನಡೆದಿದ್ದು, ಆ ಜಾಗಕ್ಕೆ ಯಾರು ಬರುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ.

ಪ್ರತಿಭಟಿಸಿರಲಿಲ್ಲವಂತೆ. ಕನಿಷ್ಠ ಪಕ್ಷ ಆ ವಿಷಯದ ಕುರಿತಾದ ಒಮ್ಮೆಯೂ ಮಾತನಾಡಿರಲಿಲ್ಲವಂತೆ. ಹೀಗಿರುವಾಗ ಅಂಥವರ ಬಗ್ಗೆ ಸಿನಿಮಾ ಆಗುತ್ತಿರುವುದು ಮತ್ತು ಮುತ್ತಯ್ಯನ ಪಾತ್ರದಲ್ಲಿ ವಿಜಯ್​ ಸೇತುಪತಿ ಕಾಣಿಸಿಕೊಂಡಿರುವುದು ಹಲವರಿಗೆ ಬೇಸರವಾಗಿದೆ. ಅದೇ ಕಾರಣಕ್ಕೆ, ವಿಜಯ್​ ಸೇತುಪತಿ ಕುರಿತಾಗಿ ಆಕ್ರೋಶ ಹೆಚ್ಚಾಗಿದೆ.

ಅಷ್ಟೇ ಆಗಿದ್ದರೆ ಪರವಾಗಿಲ್ಲ. ಸೋಷಿಯಲ್​ ಮೀಡಿಯಾದಲ್ಲಿ ಶೇಮ್​ ಆನ್​ ವಿಜಯ್​ ಸೇತುಪತಿ ಎಂಬ ಅಭಿಯಾನವೇ ಶುರುವಾಗಿತ್ತು. ಜತೆಗೆ, ಈ ಚಿತ್ರದಲ್ಲಿ ವಿಜಯ್​ ಸೇತುಪತಿ ಅವರು ನಟಿಸಬಾರದು, ಒಂದು ಪಕ್ಷ ನಟಿಸಿದರೂ ತಾವ್ಯಾರೂ ನೋಡುವುದಿಲ್ಲ ಎಂಬ ಕೂಗು ಅಭಿಮಾನಿಗಳಿಂದ ಕೇಳಿ ಬಂದಿತ್ತು. ಕೊನೆಗೆ ಅಷ್ಟೆಲ್ಲಾ ರಾದ್ಧಾಂತವಾದ ಮೇಲೆ, ವಿಜಯ್​ ಸೇತುಪತಿ ಚಿತ್ರದಿಂದ ಹೊರಕ್ಕೆ ಬಂದಿದ್ದಾರೆ.

ವಿಜಯ್ ಸೇತುಪತಿ ಚಿತ್ರದಲ್ಲಿ ನಟಿಸುತ್ತಿಲ್ಲ ಎಂದ ಮಾತ್ರಕ್ಕೆ ಚಿತ್ರವೇ ನಿಂತು ಹೋಗಿದೆ ಅಂತಲ್ಲ. ಯಾವಾಗ ಗಲಾಟೆಗಳು ಹೆಚ್ಚಾದವೋ, ಆಗ ಸ್ವತಃ ಮುತ್ತಯ್ಯ ಅವರೇ ವಿಜಯ್​ ಸೇತುಪತಿಗೆ ಚಿತ್ರ ಬಿಡುವಂತೆ ಹೇಳಿದ್ದಾರೆ. ಮುತ್ತಯ್ಯ ಮಾತಿಗೆ ಮಣೆ ಹಾಕಿರುವ ಸೇತುಪತಿ, ಚಿತ್ರತಂಡದಿಂದ ಹೊರನಡೆದಿದ್ದು, ಈಗ ಬೇರೆ ನಟನನ್ನು ಇಟ್ಟುಕೊಂಡು ಚಿತ್ರ ಮುಂದುವರೆಸುವ ಯೋಚನೆ ಚಿತ್ರತಂಡಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net