ವೇದಿಕೆ ಮೇಲೆ ಅಪ್ಪುವನ್ನು ನೆನೆದ ಡಾ. ವಿಜಯ ಸಂಕೇಶ್ವರ…

New Project (20)
Published on

ಬೆಂಗಳೂರು: ಬಹುನಿರೀಕ್ಷಿತ ‘ವಿಜಯಾನಂದ’ ಸಿನಿಮಾದ ಟ್ರೈಲರ್ ಅನ್ನು ಇಂದು ಬಿಡುಗಡೆ ಮಾಡಲಾಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಐದು ಭಾಷೆಗಳಲ್ಲಿ ಟ್ರೈಲರ್ ಬಿಡುಗಡೆ ಮಾಡಿದರು.

ಈ ಸಮಾರಂಭದಲ್ಲಿ ಭಾಗವಹಿಸಿದ್ದ ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರು ತಮ್ಮ ಭಾಷಣದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರನ್ನು ನೆನಪಿಸಿಕೊಂಡರು.

‘‘ಪುನೀತ್ ರಾಜ್‌ಕುಮಾರ್ ಅವರು ತುಂಬಾ ವಿಶೇಷ ವ್ಯಕ್ತಿ. ಯಾಕೆ ಅಂದ್ರೆ ಅವರ ಪುಣ್ಯತಿಥಿಯ ದಿನ ಲಕ್ಷಾಂತರ ಜನ ಸೇರಿದ್ದರು. ಇದನ್ನು ನೋಡಿದಾಗ ಅವರು ಇನ್ನೂ ಬದುಕಿದ್ದಾರೆ ಅಂತ ಅನಿಸಿತು. ಈಗಲೂ ಜನರು ಅಪ್ಪು ಅವರನ್ನು ಯಾಕೆ ನೆನಸಿಕೊಳ್ಳುತ್ತಾರೆ. ಇದಕ್ಕೆ ಕಾರಣ- ಅವರು ಮಾಡಿದ ಕೆಲಸ ಮತ್ತು ಸಮಾಜಕ್ಕೆ ಅವರು ಕೊಟ್ಟ ಕೊಡುಗೆ’’ ಎಂದು ಡಾ. ವಿಜಯ ಸಂಕೇಶ್ವರ ಭಾವುಕರಾಗಿ ನುಡಿದರು.

‘‘ನಮ್ಮ ವಿಜಯಾನಂದ ಸಿನಿಮಾದ ಕೆಲಸ ಶುರುವಾಗಿ ಕೆಲವೇ ದಿನಗಳಿಗೆ ಅಪ್ಪು ಅವರನ್ನು ನಾವು ಕಳೆದುಕೊಂಡಿದ್ದು ತುಂಬಾ ಬೇಸರ ತಂದಿತು’’ ಎಂದು ಅವರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net