ಅಜಯ್​ ದೇವಗನ್​​ಗೆ ನಮಸ್ಕಾರ ಮಾಡ್ಲಿಲವೆಂದು ಸಿನಿಮಾದಿಂದ ಹಿರಿಯ ನಟ ಔಟ್​; ಆದ್ರೆ ನಿರ್ಮಾಪಕ ಹೇಳಿದ್ದೆ ಬೇರೆ

Vijay Devgn
Published on

ಮುಂಬೈ: ಶೂಟಿಂಗ್​ ಸೆಟ್​​ಗೆ ಭೇಟಿ ನೀಡಿದಾಗ ಹೀರೋಗೆ ನಮಸ್ಕಾರ ಮಾಡಲಿಲ್ಲ ಎಂಬ ಕಾರಣಕ್ಕೆ ಸಹ ನಟನನ್ನು ಚಿತ್ರದಿಂದ ತೆಗೆದು ಹಾಕಿರುವ ಘಟನೆ ಬಾಲಿವುಡ್​ನಲ್ಲಿ ನಡೆದಿದ. ಅಜಯ್​ ದೇವಗನ್​ ನಟನೆಯ ಸನ್​ ಆಫ್​ ಸರ್ದಾರ್​-2 ಚಿತ್ರದ ಸೆಟ್​​ನಲ್ಲಿ ಈ ಘಟನೆ ನಡೆದಿದ್ದು, ಬಾಲಿವುಡ್​ನ ಹಿರಿಯ ನಟ ವಿಜಯ್​ ರಾಝ್​​ರನ್ನು ಸಿನಿಮಾದಿಂದ ತೆಗೆದುಹಾಕಲಾಗಿದೆ. ಈ ವಿಚಾರ ಹೊಸ ಚರ್ಚೆಗೆ ನಾಂದಿ ಹಾಡಿದ್ದು, ನಮಸ್ಕಾರ ಮಾಡಿಲ್ಲ ಎಂಬ ಕಾರಣಕ್ಕೆ ಅವರಿಗೆ ಗೇಟ್​ ಪಾಸ್​ ನೀಡಿದ್ದು ಹಲವರಲ್ಲಿ ಅಚ್ಚರಿ ಮೂಡಿಸಿದೆ.

2011ರಲ್ಲಿ ಬಿಡುಗಡೆಯಾಗಿದ್ದ ಸನ್​ ಆಫ್​ ಸರ್ದಾರ್​ ಚಿತ್ರದ ಮುಂದುಬರೆದ ಭಾಗ ಇದಾಗಿದ್ದು, ಬಹುನಿರೀಕ್ಷಿತ ಚಿತ್ರದಲ್ಲಿ ಅಜಯ್​ ದೇವಗನ್​ ನಾಯಕನಾಗಿ ನಟಿಸುತ್ತಿದ್ದಾರೆ. ಯುನೈಟೆಡ್​ ಕಿಂಗ್​ಡಮ್​​ನಲ್ಲಿ ಚಿತ್ರದ ಶೂಟಿಂಗ್​ ಭರದಿಂದ ಸಾಗಿದ್ದು, ಸೆಟ್​​ನಲ್ಲಿ ಆದ ಒಂದು ಸಣ್ಣ ಭಿನ್ನಾಭಿಪ್ರಾದಿಂದ ಹಿರಿಯ ನಟನನ್ನು ತೆಗೆದು ಹಾಕಲಾಗಿದೆ. ಈ ಬಗ್ಗೆ ನಟ ವಿಜಯ್​ ರಾಝ್​ ಒಂದು ರೀತಿಯ ಹೇಳಿಕೆ ನೀಡಿದರೆ, ನಿರ್ಮಾಪಕ ಕುಮಾರ್​ ಪಾಠಕ್​ ಮತ್ತೊಂದು ರೀತಿಯ ಹೇಳಿಕೆ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ನಟ ವಿಜಯ್​ ರಾಝ್​, ನಾನು ವ್ಯಾನಿಟಿ ವ್ಯಾನ್​ನಿಂದ ಹೊರಬಂದು ನೋಡಿದಾಗ ಅಜಯ್​ ದೇವಗನ್​ ಅವರು 25 ಮೀಟರ್​ ದೂರದಲ್ಲಿ ನಿಂತಿದ್ದರು. ಅವರು ಬ್ಯುಸಿ ಇದ್ದರು ಎಂಬ ಕಾರಣಕ್ಕಾಗಿ ನಾನು ಅವರನ್ನು ಮಾತನಾಡಿಸಿಲ್ಲ. 30 ನಿಮಿಷಗಳ ಬಳಿಕ ನಿರ್ಮಾಪಕರು ಬಂದು ನಿಮ್ಮನ್ನು ಸಿನಿಮಾದಿಂದ ತೆಗೆದುಹಾಕಿದ್ದೇವೆ ಅಂತ ತಿಳಿಸಿದರು.

Vijay Devgn

ನನ್ನಿಂದ ಆದ ಏಕೈಕ ತಪ್ಪು ಎಂದರೆ ಅಜಯ್​ ದೇವಗನ್​ ಅವರನ್ನು ಮಾತನಾಡಿಸಿ ನಮಸ್ಕಾರ ಮಾಡದೇ ಇರುವುದು. ಚಿತ್ರತಂಡದ ಬೇರೆ ಯಾರನ್ನೂ ನಾನು ಭೇಟಿ ಮಾಡಿಲ್ಲ. ಅಜಯ್​ ದೇವಗನ್​ಗೆ ನಮಸ್ಕಾರ ಮಾಡಿಲ್ಲದ ಕಾರಣ, ಶೂಟಿಂಗ್​ ಸೆಟ್​ಗೆ ಬಂದು 30 ನಿಮಿಷಗಳ ಬಳಿಕ ನನ್ನನ್ನು ತೆಗೆದುಹಾಕಿದರು. ಇವರೆಲ್ಲ ತುಂಬ ಪ್ರಭಾವಿ ವ್ಯಕ್ತಿಗಳು ಎಂದು ನಟ ವಿಜಯ್​ ರಾಝ್​ ಹೇಳಿದ್ದಾರೆ.

ನಟ ವಿಜಯ್​ ರಾಝ್​ ಆರೋಪಕ್ಕೆ ಪ್ರತಿಕ್ರಿಯಿಸಿರುವ ನಿರ್ಮಾಪಕ ಕುಮಾರ್​ ಪಾಠಕ್​, ಶೂಟಿಂಗ್​ ಸೆಟ್​ನಲ್ಲಿ ನಟ ವಿಜಯ್​ ರಾಝ್​ ದುರ್ವತನೆ ತೋರಿದ್ದು, ಅವರ ಸಹಾಯಕ ಹೋಟೆಲ್​​ ಸಿಬ್ಬಂದಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ವಿಚಾರ ನಮ್ಮ ಗಮನಕ್ಕೆ ಬಂದ ಕೂಡಲೇ ಅವರನ್ನು ನಮ್ಮ ಸಿನಿಮಾದಿಂದ ತೆಗೆದು ಹಾಕಲಾಗಿದೆ. ಇದಲ್ಲದೆ ಅವರು ಶೂಟಿಂಗ್​ ಸೆಟ್​ನಲ್ಲಿ ಬೇಡಿಕೆಗಳನ್ನು ಇಡುತ್ತಿದ್ದರು. ಈ ಕಾರಣಕ್ಕಾಗಿಯೇ ನಾಬು ಅವರನ್ನು ಸಿನಿಮಾದಿಂದ ತೆಗೆದುಹಾಕಿದ್ದೇವೆ ಎಂದು ನಿರ್ಮಾಪಕ ಕುಮಾರ್​ ಪಾಠಕ್​ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net