

ಮೂಲ್ಕಿ: ಹಿಂದು ಸವಾಜದಲ್ಲಿ ಸಂಟನೆಯ ಅವಶ್ಯಕತೆ ಇದೆ. ಯುವ ಜನಾಂಗ ಹಿಂದು ಸಂಸ್ಕಾರ ಮೈಗೂಡಿಸುವುದರೊಂದಿಗೆ ಜೀವನದಲ್ಲಿ ಮುಂದುವರಿಯಬೇಕಾಗಿದೆ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.
ವಿಶ್ವ ಹಿಂದು ಪರಿಷತ್ ಬಜರಂಗದಳ ಮೂಲ್ಕಿ ಪ್ರಖಂಡ ನೇತೃತ್ವದಲ್ಲಿ ಕಾರ್ನಾಡು ಹರಿಹರ ದೇವಸ್ಥಾನದ ಸಭಾಂಗಣದಲ್ಲಿ ವಿಶ್ವ ಹಿಂದು ಪರಿಷತ್ತಿನ ಸ್ಥಾಪನಾ ದಿನಾಚರಣೆ ಅಂಗವಾಗಿ 60ನೇ ಷಷ್ಠಿಪೂರ್ತಿ ಸವಾರೋಪ ಸವಾರಂಭದಲ್ಲಿ ಆಶೀರ್ವಚನ ನೀಡಿದರು.
ಮೂಲ್ಕಿ ಸೀಮೆಯ ಅರಸ ದುಗ್ಗಣ್ಣ ಸಾವಂತ ಅಧ್ಯಕ್ಷತೆ ವಹಿಸಿದ್ದರು. ವಿಶ್ವ ಹಿಂದು ಪರಿಷತ್ತಿನ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ದಿಕ್ಸೂಚಿ ಭಾಷಣ ವಾಡಿದರು. ವಿದ್ಯಾಧರ ಶೆಟ್ಟಿ ಕೋಲ್ನಾಡು ಗುತ್ತು, ಮಂಗಳೂರು ವಿಭಾಗ ಸಂಪರ್ಕ ಪ್ರಮುಖ್ ವಾಲತಿ ಚಂದ್ರಶೇಖರ್, ರಾಷ್ಟ್ರ ಪ್ರಶಸ್ತಿ ವಿಜೇತ ನಿವೃತ್ತ ಮುಖ್ಯಶಿಕ್ಷಕ ಶಂಕರ್, ತೋಕೂರು ರಾಮಕೃಷ್ಣ ಪೂಂಜ, ಐಟಿಐ ನಿವೃತ್ತ ಪ್ರಾಂಶುಪಾಲ ವೈ.ಎನ್.ಸಾಲ್ಯಾನ್, ವಿಶ್ವ ಹಿಂದು ಪರಿಷತ್ತಿನ ಮೂಲ್ಕಿ ಪ್ರಖಂಡದ ಸಹ ಕಾರ್ಯದರ್ಶಿ ಅಶೋಕ್ ಕೆಮ್ಮಡೆ, ಕಾರ್ಯದರ್ಶಿ ಶ್ಯಾಮ್ ಸುಂದರ್ ಶೆಟ್ಟಿ, ಕೀರ್ತನ್ ಕೆರೆಕಾಡ್ ಮತ್ತಿತರರಿದ್ದರು.