VIDEO | ಭಾರ ಎತ್ತೋದಂದ್ರೆ ಏಳರ ಪೋರಿಗೆ ಬಲು ಸಲೀಸು !

1006544
Published on

ಒಟ್ಟಾವಾ: ಈಕೆಯ ವಯಸ್ಸು ಏಳು ವರ್ಷ ಅಷ್ಟೇ. ಭಾರ ಎತ್ತುವುದೆಂದರೆ ಬಲು ಸಲೀಸು ಈಕೆಗೆ. ದೊಡ್ಡವರು ಎತ್ತುವ ಭಾರವನ್ನು ಈಕೆ ನಾಜೂಕಾಗಿ ಎತ್ತಿ ಭೇಷ್ ಅನ್ನಿಸಿಕೊಂಡಿದ್ದಾಳೆ. ಭಾರ ಎತ್ತುವ ಶೈಲಿಗಳ ಪೈಕಿ ಡೆಡ್​ಲಿಫ್ಟ್​, ಸ್ನ್ಯಾಚ್​, ಕ್ಲೀನ್ ಆ್ಯಂಡ್ ಜರ್ಕ್​, ಸ್ಕ್ವಾಟ್​ಗಳಲ್ಲಿ ತನ್ನ ಪ್ರತಿಭೆ ತೋರಿಸಿ ಮೆಚ್ಚುಗೆ ಪಡೆದುಕೊಂಡಿದ್ದಾಳೆ.

ಕೆನಡಾದ ಈ ಪುಟಾಣಿ ವೇಟ್​ಲಿಫ್ಟರ್​ ಹೆಸರು ರೋರಿ ವ್ಯಾನ್​. 4 ಅಡಿ ಉದ್ದ ಇರುವ ಈಕೆ ಈಗ 80 ಕಿಲೋ ಡೆಡ್​ಲಿಫ್ಟ್​, 32 ಕಿಲೋ ಸ್ನ್ಯಾಚ್​, 42 ಕಿಲೋ ಕ್ಲೀನ್ ಆ್ಯಂಡ್ ಜರ್ಕ್ ವೇಟ್​ಲಿಫ್ಟಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾಳೆ. ಇಷ್ಟಾಗ್ಯೂ ನೀವು ಇಂಪ್ರೆಸ್ ಆಗಿಲ್ಲ ಅನ್ನೋದಾದರೆ, 61 ಕಿಲೋ ಸ್ಕ್ಯಾಟ್ ಕೂಡ ಮಾಡಿ ತೋರಿಸ್ತಾಳೆ ಈಕೆ.

ಐದನೇ ಹುಟ್ಟುಹಬ್ಬದ ದಿನ ವೇಟ್​ ಲಿಫ್ಟಿಂಗ್ ತರಬೇತಿ ಪಡೆಯಲಾರಂಭಿಸಿದ ಈಕೆ ಎರಡು ವರ್ಷದ ಅವಧಿಯಲ್ಲಿ ಉತ್ತಮ ಸಾಧನೆ ತೋರಿದ್ದಾಳೆ. ಕಳೆದ ವಾರ ಅಮೆರಿಕದಲ್ಲಿ ನಡೆದ ವೇಟ್​ಲಿಫ್ಟಿಂಗ್​ನಲ್ಲಿ 30 ಕಿಲೋ ವಿಭಾಗದಲ್ಲಿ ಅಂಡರ್ 11, ಅಂಡರ್ 13 ಯೂತ್ ನ್ಯಾಷನಲ್​ ಚಾಂಪಿಯನ್​ ಆಗಿದ್ದಳು. ಸದ್ಯದ ಮಟ್ಟಿಗೆ ವೇಟ್​ ಲಿಫ್ಟಿಂಗ್ ಇತಿಹಾಸದಲ್ಲಿ ಏಳು ವರ್ಷದ ಬಾಲಕ/ಬಾಲಕಿಯರ ಪೈಕಿ ಈಕೆಯೇ ಬಲಿಷ್ಠ ವೇಟ್​ಲಿಫ್ಟರ್​ ಎಂದು ಈಕೆಯ ತಂದೆ ಕಾವನ್​ ವ್ಯಾನ್​ ಹೇಳಿದ್ದಾರೆ. (ಏಜೆನ್ಸೀಸ್​)

ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net