VIDEO| ಬ್ಯಾಸ್ಕೆಟ್​ಬಾಲ್​ ಕೋರ್ಟ್​​ನಲ್ಲಿ ಫುಟ್​ಬಾಲ್​ ಆಡಿದ ಸಂಜು ಸ್ಯಾಮ್ಸನ್​

Sanju Samson
Published on

ತಿರುವನಂತಪುರಂ: ಭಾರತ ಕ್ರಿಕೆಟ್​ ಯುವ ವಿಕೆಟ್​ ಕೀಪರ್​, ಬ್ಯಾಟ್ಸ್​​ಮನ್​ ಸಂಜು ಸ್ಯಾಮ್ಸನ್​ ರೆಸ್ಟ್​ ಮೂಡ್​ನಲ್ಲಿದ್ದು, ಮುಂಬರುವ ಬಾಂಗ್ಲಾದೇಶ ವಿರುದ್ಧದ ಟೂರ್ನಿಗೆ ಸಜ್ಜಾಗುತ್ತಿದ್ದಾರೆ. ಇದರ ನಡುವೆಯೇ ಅವರು ಸ್ಥಳೀಯರೊಂದಿಗೆ ಫುಟ್​ಬಾಲ್​ ಆಡುತ್ತಿರುವ ದೃಶ್ಯ ಕಂಡು ಬಂದಿದದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ.

ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ಪರ ಕಣಕ್ಕಿಳಿದಿದ್ದ ಸಂಜು ಸ್ಯಾಮ್ಸನ್​ ನಿರೀಕ್ಷಿತ ಪ್ರದರ್ಶನವನ್ನು ನೀಡಿರಲಿಲ್ಲ. ಮುಂಬರುವ ಬಾಂಗ್ಲಾದೇಶ ವಿರುದ್ಧದ ಸರಣಿಗೆ ತಯಾರಿ ನಡೆಸುತ್ತಿದದ್ದಾರೆ. ಇದಕ್ಕೂ ಮುನ್ನ ಅವರು ತಮ್ಮ ಮನೆ ಬಳಿ ಬ್ಯಾಸ್ಕೆಟ್​​ ಬಾಲ್​ ಕೋರ್ಟ್​ನಲ್ಲಿ ಫುಟ್​ಬಾಲ್​ ಆಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಇತ್ತ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು ಪರ-ವಿರೋಧದ ಚರ್ಚೆ ನಡೆಯುತ್ತಿದೆ. ಕೆಲವರು ಸಂಜು ಅವರ ನಡೆಯನ್ನು ಪ್ರಶಂಶಿಸಿದರೆ ಹಲವರು ಮೈದಾನದ ವ್ಯತ್ಯಾಸ ತಿಳಿಯದೆ ಆಟವಾಡುತ್ತಿರುವುನ್ನು ನೋಡಿ ಕಿಡಿಕಾರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net