More

    VIDEO| ‘ಇದಪ್ಪಾ ನಿಜವಾದ ಕ್ರಿಕೆಟ್​ !’ ಮೈಕೆಲ್ ವಾಘನ್ ಶೇರ್​ ಮಾಡಿದ ವಿಡಿಯೋ ನೋಡಿ

    ಲಂಡನ್: ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯಗಳನ್ನು ಆಗಾಗ್ಗೆ ಹಂಚಿಕೊಳ್ಳುವ ಮಾಜಿ ಇಂಗ್ಲೆಂಡ್ ನಾಯಕ ಮೈಕೆಲ್ ವಾಘನ್ ಟ್ವಿಟರ್‌ನಲ್ಲಿ ನಗುತರಿಸುವ ಕ್ರಿಕೆಟ್ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಯುರೋಪಿಯನ್ ಕ್ರಿಕೆಟ್ ಸರಣಿಯ ಪಂದ್ಯವೊಂದರಲ್ಲಿ ನಡೆದ ಕೆಲವು ವಿಲಕ್ಷಣ ಫೀಲ್ಡಿಂಗ್ ಪ್ರಯತ್ನಗಳನ್ನು ಈ ವಿಡಿಯೋ ತೋರಿಸುತ್ತದೆ.

    ವರ್ಮ್‌ಡೊ ಸಿಸಿ ಆಟಗಾರರು ಗೊಂದಲ ಪಟ್ಟುಕೊಂಡು ಚೆಂಡನ್ನು ಮತ್ತೆ ಮತ್ತೆ ಬಿಟ್ಟು, ಸ್ಟಾಕ್‌ಹೋಮ್ ಸೂಪರ್ ಕಿಂಗ್ಸ್ ಬ್ಯಾಟ್ಸ್‌ಮನ್‌ಗಳಿಗೆ ನಾಲ್ಕು ರನ್‌ಗಳನ್ನು ಪಡೆಯುವ ಅವಕಾಶ ನೀಡುವ ಈ ಪ್ರಸಂಗ ಕ್ರಿಕೆಟ್​​ ಅಭಿಮಾನಿಗಳಲ್ಲಿ ನಗೆ ಉಕ್ಕಿಸಿದೆ. ಈ ತಮಾಷೆಯ ವೀಡಿಯೋಗೆ ಬಲಗೈ ಆರಂಭಿಕ ಬ್ಯಾಟ್ಸ್‌ಮನ್ ಆಗಿದ್ದ ವಾಘನ್, “ನೌ ದಿಸ್​ ಈಸ್​ ಪ್ರಾಪರ್​ ಕ್ರಿಕೆಟ್​ !!” (ಸರಿಯಾದ ಕ್ರಿಕೆಟ್​ ಅಂದರೆ ಇದು ನೋಡಿ) ಎನ್ನುವ ಶೀರ್ಷಿಕೆ ಕೊಟ್ಟು ವ್ಯಂಗ್ಯ ಮಾಡಿದ್ದಾರೆ! ನೀವೂ ಆ ವಿಡಿಯೋ ನೋಡಿ –

    ಈ ವೀಡಿಯೊವನ್ನು ಅವರ ಅಭಿಮಾನಿಗಳು ಉತ್ತಮವಾಗಿ ಸ್ವೀಕರಿಸಿದ್ದಾರೆ, ಅನೇಕರು ವೀಡಿಯೋದಲ್ಲಿ ಕಾಣುವ ವಿಭಿನ್ನ ತಮಾಷೆಯ ಅಂಶಗಳನ್ನು ಎತ್ತಿತೋರಿಸಿದ್ದಾರೆ. ಫೀಲ್ಡರ್​​ಗಳು ಚೆಂಡನ್ನು ಹೇಗೆ ಹೇಗೋ ಎಸೆಯುತ್ತಿದ್ದರೆ ರನ್ ಪಡೆಯುತ್ತಿರುವ ಬ್ಯಾಟ್ಸ್​ಮನ್​ಗಳು ಕೂಡ ತಮ್ಮದೇ ಸವಾಲುಗಳನ್ನು ಎದುರಿಸುವುದನ್ನು ಕಾಣಬಹುದು. ಏಕೆಂದರೆ ರನ್ನರ್​ ಓಡುತ್ತಾ ಇರಬೇಕಾದರೆ ಅವನ ಪ್ಯಾಡ್ ಉದುರಿಹೋಗುತ್ತದೆ!

    ಇದನ್ನು ಗಮನಿಸಿದ ಅಭಿಮಾನಿಯೊಬ್ಬರು, “ನೀವು ಪ್ರತಿ ಬಾರಿ ನೋಡಿದಾಗಲೂ ಹೊಸದೊಂದು ಅಂಶವನ್ನು ಗುರುತಿಸಬಹುದು, ನನ್ನ ನೆಚ್ಚಿನ ಭಾಗವೆಂದರೆ ನಾನ್​ಸ್ಟ್ರೈಕರ್​ ಕೊನೆಯ ಎರಡು ರನ್​ಗಳನ್ನು ತೊಡರಿಕೊಂಡು ಓಡುವುದು… ಏಕೆಂದರೆ ಅವನ ಪ್ಯಾಡ್ ಉದುರಿಹೋಗಲಿದೆ” ಎಂದು ಟ್ವೀಟ್ ಮಾಡಿದ್ದಾರೆ. (ಏಜೆನ್ಸೀಸ್)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

     

    ಮಮತಾ ಬ್ಯಾನರ್ಜಿಗೆ ಏಟು ಬಿದ್ದಿದ್ದು ಹೇಗೆ ? ಘಟನೆ ಒಂದು, ಕಥೆಗಳು ಹಲವು !

    ಹೆಚ್ಚಿದ ಕರೊನಾ : ಮದುವೆ ಸಮಾರಂಭಗಳಿಗೆ ಪೊಲೀಸರಾಗಲಿದ್ದಾರೆ ವಿಶೇಷ ಅತಿಥಿಗಳು !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts