VIDEO| ಡಿಜೆ ಹಳ್ಳಿ ಠಾಣೆಗೆ ಬೆಂಕಿ ಹಚ್ಚುವ ಮುನ್ನ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ!

912718
Published on

ಬೆಂಗಳೂರು: ದೇಶದ ಗಮನಸೆಳೆದ ಡಿಜೆ ಹಳ್ಳಿ ಗಲಭೆಯ ವೇಳೆ ದುಷ್ಕರ್ಮಿಗಳು ಆಗಮಿಸಿದ ರೀತಿ ಸ್ಥಳೀಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಪೊಲೀಸ್ ಠಾಣೆಗೆ ಬೆಂಕಿ ಹಚ್ಚುವ ಮೊದಲೇ ಅವರು ರಸ್ತೆಯುದ್ದಕ್ಕೂ ದಾಂಧಲೆ ನಡೆಸುತ್ತಲೇ ಬಂದಿದ್ದಾರೆ. ಇದರ ಸಿಸಿಟಿವಿ ದೃಶ್ಯಾವಳಿಗಳು ಈಗ ಬಹಿರಂಗವಾಗಿದೆ.

ಪೊಲೀಸ್ ಠಾಣೆಗೆ ಸಮೀಪವಿರುವ ಅಂಗಡಿಯೊಂದರ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಗಳು ಈಗ ಇನ್ನಷ್ಟು ಆರೋಪಿಗಳ ಸುಳಿವನ್ನು ನೀಡಿದೆ. 30-40 ಜನರ ಗುಂಪು ರಸ್ತೆಯಲ್ಲಿ ದಾಂಧಲೆ ನಡೆಸುತ್ತಿರುವ ದೃಶ್ಯಗಳಿವೆ. ಅವರ ಕಣ್ಣಿಗೆ ಸಿಸಿಟಿವಿ ಕ್ಯಾಮೆರಾ ಕಾಣಿಸಿದ ಕೂಡಲೇ ಅದನ್ನು ಪುಡಿ ಮಾಡುತ್ತಿರುವುದೂ ಅದರಲ್ಲಿ ದಾಖಲಾಗಿದೆ.

ಅನೇಕ ವಾಹನಗಳನ್ನು ಅವರು ಹಾನಿಗೊಳಿಸಿದ್ದು, ಎಲ್ಲರ ಕೈಗಳಲ್ಲೂ ಮರದ ತುಂಡು, ರಾಡ್​ಗಳಂತಹ ವಸ್ತುಗಳು ಕಾಣುತ್ತಿವೆ. ಪೂರ್ಣ ವಿವರಗಳಿಗೆ ಮೇಲಿನ ವಿಡಿಯೋವನ್ನು ವೀಕ್ಷಿಸಿ. (ದಿಗ್ವಿಜಯ ನ್ಯೂಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net