VIDEO: ಮದುವೆ ಆಗ್ತಿಲ್ಲ ಯಾಕೆ ಅನ್ನೋ ಚಿಂತೆಯೇ? ಕಾರಣ ಹೀಗೂ ಇರಬಹುದು ಗಮನಿಸಿ..

921799
Published on

ಬೆಂಗಳೂರು: ಯಾಕೆ ನಂಗಿನ್ನೂ ಮದುವೆ ಆಗ್ತಿಲ್ಲ ಎಂಬ ಚಿಂತೆ ಅನೇಕರದ್ದು. ಇದು ಸಮಾಜದ ದೊಡ್ಡ ಸಮಸ್ಯೆ. ಅನೇಕ ವಿವಾಹಾಪೇಕ್ಷಿತರಿಗೆ ಮದುವೆ ಆಗದೇ ಇರುವುದಕ್ಕೆ ಅನೇಕ ಕಾರಣಗಳಿರುತ್ತವೆ. ಗ್ರಹಗತಿಗಳಿಂದ ಹಿಡಿದು ಅವರ ಸ್ಥಿತಿಗತಿ ಎಲ್ಲವೂ ಮುಖ್ಯವಾಗಿರುತ್ತದೆ. ಈ ವಿಚಾರವಾಗಿ ವಿಸ್ತೃತವಾದ ಮಾಹಿತಿಯನ್ನು ವೇದಬ್ರಹ್ಮ ಶ್ರೀದೇವದತ್ತ ಶರ್ಮ ಅವರು ದಿಗ್ವಿಜಯ24X7 ನ್ಯೂಸ್ ನಲ್ಲಿ ವಿವರ ನೀಡಿದ್ದಾರೆ.

ವಿವಾಹಾಪೇಕ್ಷಿತರು ಈಗಾಗಲೇ ಅನೇಕ ಜ್ಯೋತಿಷಿಗಳನ್ನು ಕಂಡು ಪರಿಹಾರ ಕಾರ್ಯಗಳನ್ನು ಮಾಡಿರುತ್ತಾರೆ. ದೇವಾಲಯಗಳಿಗೂ ಹೋಗಿ ಸೇವೆ ಸಲ್ಲಿಸಿರುತ್ತಾರೆ. ಆದರೂ ಸಕಾಲದಲ್ಲಿ ವಿವಾಹವಾಗುತ್ತಿಲ್ಲ ಎಂಬ ಸಮಸ್ಯೆಯೂ ಅನೇಕರದ್ದು. ಅಂಥವರು ಏನು ಮಾಡಬಹುದು ಎಂಬ ಪ್ರಶ್ನೆಯೂ ಅನೇಕರನ್ನು ಕಾಡಬಹುದು. ಇಂತಹ ಸಂದರ್ಭದಲ್ಲಿ ಅಷ್ಟಮಂಗಲ ಪ್ರಶ್ನೆ ಮೂಲಕ ಸಮಸ್ಯೆಗೆ ಪರಿಹಾರ ಕಾಣಬಹುದು ಎಂಬುದನ್ನು ಶ್ರೀದೇವದತ್ತ ಶರ್ಮಾ ವಿವರಿಸಿದ್ದಾರೆ.

ವಿವಾಹದ ವಿಚಾರಕ್ಕೆ ನಿರ್ದಿಷ್ಟವಾಗಿ ರಾಶಿ, ನಕ್ಷತ್ರಗಳ ಬಗ್ಗೆ ಹೇಳೋದಕ್ಕೆ ಆಗಲ್ಲ. ಆದಾಗ್ಯೂ ಸಾಮಾನ್ಯವಾಗಿ ಮೂಲಾ, ಜ್ಯೇಷ್ಠಾ, ವಿಶಾಖಾ, ಆಶ್ಲೇಷಾ ನಕ್ಷತ್ರಗಳು ವಿವಾಹಕ್ಕೆ ಸಂಬಂಧಿಸಿ ಕಷ್ಟ ತರುವಂಥವು. ವಿವಾಹಕ್ಕೆ ಹೊರತಾಗಿ ಬೇರೆ ವಿಷಯಗಳಿಗೆ ಈ ನಕ್ಷತ್ರಗಳಿಂದ ಸಮಸ್ಯೆ ಇಲ್ಲ ಎಂದ ಶರ್ಮ ಅವರು ಮಾತುಗಳನ್ನು ಪೂರ್ತಿಯಾಗಿ ವೀಕ್ಷಿಸುವುದಕ್ಕೆ ಮೇಲಿನ ವಿಡಿಯೋ ಕ್ಲಿಕ್ಕಿಸಿ. (ದಿಗ್ವಿಜಯ ನ್ಯೂಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net