ಹಗ್ಗ ಜಗ್ಗಾಟದಲ್ಲಿ ಚೀನಾ ಸೈನಿಕರ ವಿರುದ್ಧ ಗೆದ್ದ ಭಾರತೀಯ ಸೈನಿಕರು

solders
Published on

ನವದೆಹಲಿ: ಭಾರತ ಮತ್ತು ಚೀನಾ ಸೈನಿಕರ ನಡುವೆ ನಿರಂತರ ಸ್ಪರ್ಧೆ ಇರುತ್ತದೆ ಎಂಬುದನ್ನು ಹೇಳಬೇಕಾಗಿಲ್ಲ. ಇದೇ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ನಡೆದ ಹಗ್ಗ ಜಗ್ಗಾಟದಲ್ಲಿ ಭಾರತೀಯ ಯೋಧರು ಚೀನಾ ಸೈನಿಕರನ್ನು ಸೋಲಿಸಿದ್ದಾರೆ.

ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಯ ಅಡಿಯಲ್ಲಿ ಆಫ್ರಿಕಾದ ಸುಡಾನ್‌ನಲ್ಲಿ ನಿಯೋಜಿಸಲ್ಪಟ್ಟಿದ್ದು ಭಾರತೀಯ ಸೈನಿಕರು ಮತ್ತು ಚೀನಾದ ಸೈನಿಕರ ನಡುವೆ ಹಗ್ಗ ಜಗ್ಗಾಟದ ಆಟ ನಡೆಯಿತು. ಇದರಲ್ಲಿ ಭಾರತೀಯ ಸೈನಿಕರು ಚೀನಾ ವಿರುದ್ಧ ಗೆದ್ದರು.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಉಭಯ ದೇಶಗಳ ಸೈನಿಕರ ನಡುವೆ ಹಗ್ಗ ಜಗ್ಗಾಟದ ಆಟ ನಡೆಯುತ್ತಿದೆ. ಈ ಆಟವನ್ನು ಮೇ 28 ರಂದು ಆಡಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ವಿಡಿಯೊದಲ್ಲಿ, ವಿಜೇತ ಭಾರತ ತಂಡದ ಸೈನಿಕರು ಸಂಭ್ರಮಿಸುತ್ತಿರುವುದನ್ನು ಕಾಣಬಹುದು.

ಭಾರತ-ಫ್ರಾನ್ಸ್ ಜಂಟಿ ಮಿಲಿಟರಿ ಅಭ್ಯಾಸದ ಏಳನೇ ಆವೃತ್ತಿಯು ಮೇಘಾಲಯದ ಉಮ್ರೋಯ್ ಜಂಟಿ ತರಬೇತಿ ಕೇಂದ್ರದಲ್ಲಿ ಸೋಮವಾರ ಮುಕ್ತಾಯಗೊಂಡಿತು. ಇದು ಭಾರತ ಮತ್ತು ಫ್ರಾನ್ಸ್ ಎರಡರಲ್ಲೂ ನಡೆಸುವ ದ್ವೈವಾರ್ಷಿಕ ತರಬೇತಿ ಕಾರ್ಯಕ್ರಮವಾಗಿದೆ. ಈ ಹಿಂದೆ ತರಬೇತಿ ನವೆಂಬರ್ 2021 ರಲ್ಲಿ ಫ್ರಾನ್ಸ್‌ನಲ್ಲಿ ನಡೆಸಲಾಗಿತ್ತು. ರಜಪೂತ್ ರೆಜಿಮೆಂಟ್‌ನ 22 ನೇ ಬೆಟಾಲಿಯನ್‌ನಿಂದ 90 ಸಿಬ್ಬಂದಿ ಭಾರತೀಯ ಸೇನೆಯನ್ನು ಪ್ರತಿನಿಧಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net