ಸಿಡಿಯಲ್ಲಿರುವ ಹುಡುಗಿಗೆ ಈಗಾಗಲೇ ರಕ್ಷಣೆ ಸಿಕ್ಕಿದೆ: ಯಾರಿಂದ ಎಂಬುದನ್ನು ಎಚ್​ಡಿಕೆ ಹೇಳಿದ್ರು ನೋಡಿ..

kumaraswamy
kumaraswamy
Published on

ಮೈಸೂರು : ರಾಜ್ಯದಲ್ಲಿ ಭಾರೀ ಸದ್ದು ಮಾಡಿರುವ ಸಿಡಿ ಪ್ರಕರಣದ ಕುರಿತು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ

''ಸಿಡಿಯಲ್ಲಿ ಇದ್ದಾಳೆ ಎನ್ನಲಾದ ಆ ಹೆಣ್ಣು ಮಗಳಿಗೆ ಯಾರಿಂದ ರಕ್ಷಣೆ ಸಿಗಬೇಕಿದೆಯೋ, ಅವರಿಂದ ಸಿಕ್ಕಿದೆ. ಸರ್ಕಾರಕ್ಕೆ ಆ ಯುವತಿ ಟ್ರೇಸ್ ಆಗದೇ ಇದ್ದರೂ, ಆ ಯುವತಿಗೆ ಸಿಗಬೇಕಾದ ರಕ್ಷಣೆ ಕೆಲವರಿಂದ ಸಿಕ್ಕಿದೆ‌‌. ಸರ್ಕಾರದ ಒಳಗಿನವರೋ, ಸರ್ಕಾರದ ವಿರುದ್ದ ಇರುವವರೋ ಯಾರೋ ಆ ಯುವತಿಗೆ ಈಗಾಗಲೇ ರಕ್ಷಣೆ ಕೊಟ್ಟಿದ್ದಾರೆ'' ಎಂದು ಹೇಳಿದ್ದಾರೆ.

''ಸರ್ಕಾರದ ಒಳಗೆ ಇದ್ದವರೇ ಆ ಯುವತಿಗೆ ರಕ್ಷಣೆ ಕೊಟ್ಟು ಇಟ್ಟುಕೊಂಡಿದ್ದಾರೋ ಗೊತ್ತಿಲ್ಲ. ಈ ಮನುಷ್ಯನ ಸ್ಪೀಡ್ ಗೆ (ರಮೇಶ್ ಜಾರಕಿಹೊಳಿ) ಬ್ರೇಕ್ ಹಾಕಲು ಸರ್ಕಾರದ ಒಳಗೆ ಇದ್ದವರೇ ಆ ಯುವತಿಗೆ ರಕ್ಷಣೆ ಕೊಡುತ್ತಿದ್ದಾರೋ ಗೊತ್ತಿಲ್ಲ. ಒಟ್ಟಿನಲ್ಲಿ ಆ ಯುವತಿಗೆ ಯಾರೋ ಕೆಲವರಿಂದ ರಕ್ಷಣೆಯಂತೂ ಇದ್ದೇ ಇದೆ'' ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

''ಡಿ ಕೆ ಶಿವಕುಮಾರ್ ಹೆಸರನ್ನು ಈ ಪ್ರಕರಣದಲ್ಲಿ ಯಾರಾದರೂ ಹೇಳಿದ್ದಾರಾ ಎಂದು ಪ್ರಶ್ನಿಸಿದ ಎಚ್​ಡಿಕೆ, ಈ ರಾಜ್ಯದಲ್ಲಿ ಮಹಾ ನಾಯಕರು ಬಹಳ ಜನ ಇದ್ದಾರೆ. ಬಿಜೆಪಿ ಒಳಗೆ ಒಬ್ಬ ಮಹಾನಾಯಕರು ಬೆಳೆಯುತ್ತಿದ್ದಾರೆ. ಅಂತಹದರಲ್ಲಿ ಡಿ ಕೆ ಶಿವಕುಮಾರ್ ಏಕೆ ತಮ್ಮ ಹೆಸರನ್ನು ತಾವೇ ಈ ಪ್ರಕರಣದಲ್ಲಿ ಸಿಲುಕಿಸಿಕೊಂಡರೋ ಗೊತ್ತಿಲ್ಲ‌‌. ಅವರು ಪ್ರಬುದ್ಧ ರಾಜಕಾರಣಿ. ಅವರು ನನಗಿಂತಲೂ ಪ್ರಬುದ್ಧ ರಾಜಕಾರಣಿ. ಅವರು ದುಡುಕಿ ಏಕೆ ಈ ರೀತಿ ಅವರ ಹೆಸರನ್ನು ಅವರೇ ಪ್ರಕರಣದಲ್ಲಿ ಸಿಲುಕಿಸಿಕೊಳ್ಳುತ್ತಿದ್ದಾರೋ ಗೊತ್ತಿಲ್ಲ'' ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net