More

    ಅಶ್ಲೀಲ ಸಿಡಿ ಪ್ರಕರಣ: ‘ಸಂತ್ರಸ್ತ’ ಯುವತಿಯಿಂದಾಗಿ ಕಣ್ಣೀರಿಡುತ್ತಿರುವ ಪಿಜಿ ಮಾಲೀಕರು!

    ಬೆಂಗಳೂರು: ರಾಜ್ಯಾದ್ಯಂತ ಭಾರಿ ಸಂಚಲನ ಮೂಡಿಸಿರುವ ಮಾಜಿ ಸಚಿವರದ್ದು ಎನ್ನಲಾದ ಅಶ್ಲೀಲ ಸಿಡಿ ಪ್ರಕರಣದ ಎಸ್​ಐಟಿ ತನಿಖೆ ಚುರುಕು ಪಡೆದುಕೊಂಡಿದೆ. ಆರೋಪಿಗಳು ಮತ್ತು ‘ಸಂತ್ರಸ್ತ’ ಯುವತಿಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಇದರ ನಡುವೆ ‘ಸಂತ್ರಸ್ತ’ ಯುವತಿಯ ಮನೆ ಮಾಲಿಕರು ಕಣ್ಣೀರಿಡುವಂತಹ ಸ್ಥಿತಿ ನಿರ್ಮಾಣವಾಗಿದೆ.

    ‘ಸಂತ್ರಸ್ತ’ ಯುವತಿ ವಾಸವಿದ್ದ ಆರ್ ಟಿ ನಗರದ ಮನೆ ಮಾಲೀಕರು ಯುವತಿ ಮಾಡಿದ ತಪ್ಪಿನಿಂದಾಗಿ ಕಣ್ಣೀರಿಡುತ್ತಿದ್ದಾರೆ. ಅದಕ್ಕೆ ಕಾರಣ ಪಿಜಿಯಲ್ಲಿ ವಾಸವಿದ್ದ ಉಳಿದವರು ಸಹ ಮನೆ ಖಾಲಿ ಮಾಡುತ್ತೇವೆ ಎಂದು ತಾಕೀತು ಮಾಡುತ್ತಿದ್ದಾರೆ. ಇದರಿಂದ ಉಂಟಾಗುವ ಆರ್ಥಿಕ ನಷ್ಟದ ಭೀತಿಯಿಂದಾಗಿ ಮಾಲೀಕರು ಚಿಂತೆಗೀಡಾಗಿದ್ದಾರೆ.

    ಇದನ್ನೂ ಓದಿರಿ: ಈಗ ನಟ-ನಟಿಯರು ಹೊರಬಂದಿದ್ದಾರೆ, ಮುಂದೆ ನಿರ್ಮಾಪಕ-ನಿರ್ದೇಶಕ ಹೊರಬರಲಿದ್ದಾರೆ: ರಮೇಶ್ ಜಾರಕಿಹೊಳಿ

    ಸಿಡಿ ವಿಚಾರ ಭಾರಿ ಸಂಚಲನ ಮೂಡಿಸಿದ ಬೆನ್ನಲ್ಲೇ ಕಟ್ಟಡದ ಉಳಿದ ಯುವತಿಯರಿಗೂ ಇದರಿಂದ ಮುಜುಗರ ಉಂಟಾಗಿದೆ. ಹೀಗಾಗಿ ಪಿಜಿ ತೊರೆಯುವ ನಿರ್ಧಾರಕ್ಕೆ ಬಂದಿದ್ದು, ಶೀಘ್ರವೇ ಮನೆ ಖಾಲಿ ಮಾಡುತ್ತೇವೆಂದು ಪಟ್ಟು ಹಿಡಿದಿರುವುದಾಗಿ ಮೂಲಗಳಿಂದ ಮಾಹಿತಿ ತಿಳಿದುಬಂದಿದೆ.

    ಯುವತಿಗೆ ನೋಟಿಸ್​ ಜಾರಿ
    ಇನ್ನು ಶೀಘ್ರದಲ್ಲೇ ತನಿಖಾಧಿಕಾರಿ ಮುಂದೆ ಹಾಜರಾಗುವಂತೆ ಯುವತಿಯ ಮನೆ, ಪಿಜಿ ಹಾಗೂ ಸ್ನೇಹಿತರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ಬಸವನ ಬಾಗೇವಾಡಿಯ ಆಕೆಯ ಮನೆಗೆ, ಸಂಬಂಧಿಕರಿಗೆ ಮತ್ತು ಸ್ನೇಹಿತರಿಗೆ ಪೊಲೀಸರು ನೋಟಿಸ್ ತಲುಪಿಸಿದ್ದಾರೆ. ಯುವತಿಗೆ ಶೀಘ್ರದಲ್ಲೇ ವಿಚಾರಣೆಗೆ ಹಾಜರಾಗುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. (ದಿಗ್ವಿಜಯ ನ್ಯೂಸ್​)

    ಜಾರಕಿಹೊಳಿ ಸಿಡಿ ಪ್ರಕರಣ: ‘ಸಂತ್ರಸ್ತ’ ಯುವತಿಯ ನೆರವಿಗೆ ಧಾವಿಸಿದ ರಾಜ್ಯ ಮಹಿಳಾ ಆಯೋಗ

    ಆಕೆಯ ವಿಡಿಯೋ ನಾನು ನೋಡಿಲ್ಲ, ಅದರ ಹಿಂದೆಯೂ ಷಡ್ಯಂತ್ರವಿದೆ: ರಮೇಶ್ ಜಾರಕಿಹೊಳಿ

    ಜಾರಕಿಹೊಳಿ ಸಿಡಿ ಪ್ರಕರಣ: ‘ಸಂತ್ರಸ್ತ’ ಯುವತಿಯ ನೆರವಿಗೆ ಧಾವಿಸಿದ ರಾಜ್ಯ ಮಹಿಳಾ ಆಯೋಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts