

ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಜಿಲ್ಲೆಯ ಸಮಗ್ರ ಅಭಿವೃದ್ಧಿ ಸಾಕಾರಗೊಳಿಸಲು ರಾಜಕೀಯ, ಧರ್ಮವನ್ನು ಮೀರಿದ ಸಾಮಾನ್ಯ ವೇದಿಕೆ ರೂಪುಗೊಳ್ಳಬೇಕು ಎಂದು ಜಿಪಂ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ತಿಳಿಸಿದ್ದಾರೆ.
ಎರಡನೇ ಪಿಣರಾಯಿ ವಿಜಯನ್ ಸರ್ಕಾರದ ನಾಲ್ಕನೇ ವಾರ್ಷಿಕೋತ್ಸವದ ರಾಜ್ಯಮಟ್ಟದ ಉದ್ಘಾಟನಾ ಸಮಾರಂಭ ಅಭಿಯಾನದ ಅಂಗವಾಗಿ ಕಾಸರಗೋಡು ಜಿಲ್ಲಾ ವಾರ್ತಾ ಮತ್ತು ಮಾಹಿತಿ ಕಚೇರಿ ವತತಿಯಿಂದ ಕಾಸರಗೋಡು ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಆಯೋಜಿಸಲಾದ ‘ಕಾಸರಗೋಡು ಜಿಲ್ಲೆ 40 ವರ್ಷಗಳ ಸಮಗ್ರ ಅಭಿವೃದ್ಧಿಗಾಗಿ ವಿಚಾರ ಸಂಕಿರಣ’ ಉದ್ಘಾಟಿಸಿ ಮಾತನಾಡಿದರು.
ಕಾಸರಗೋಡಿನ ಇತಿಹಾಸ, ಸಂಸ್ಕೃತಿ ಕುರಿತು ಪ್ರಾಧ್ಯಾಪಕ ಸಿ.ಬಾಲನ್, ಕಾಸರಗೋಡಿನ ಕೃಷಿ ಸಂಸ್ಕೃತಿ ವಿಷಯದಲ್ಲಿ ಡಾ.ಸಿ.ತಂಬಾನ್, ಸ್ಥಳೀಯಾಡಳಿತ ಮತ್ತು ಅಭಿವೃದ್ಧಿ ಕುರಿತು ಡಾ.ಸಿ.ತಂಬಾನ್, ನವ ಕೇರಳ, ಕಾಸರಗೋಡು ವಿಷಯದ ಕುರಿತು ಪಪ್ಪನ್ ಕುಟ್ಟಮತ್, ನವ ಕೇರಳ ಕಾಸರಗೋಡು ವಿಷಯದ ಬಗ್ಗೆ ಯೋಜನೆ ಜಿಲ್ಲಾ ಸಂಯೋಜಕ ಕೆ.ಬಾಲಕೃಷ್ಣನ್ ಪ್ರಬಂಧ ಮಂಡಿಸಿದರು. ಡಾ.ವಿ.ಪಿ.ಪಿ.ಮುಸ್ತಫಾ ಸಮನ್ವಯಕಾರರಾಗಿದ್ದರು. ಪ್ರೆಸ್ಕ್ಲಬ್ ಅಧ್ಯಕ್ಷ ಶಿಜು ಕಣ್ಣನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಾರ್ತಾ ಮತ್ತು ಮಾಹಿತಿ ಅಧಿಕಾರಿ ಎಂ.ಮಧುಸೂದನನ್ ಸ್ವಾಗತಿಸಿದರು. ದಿಲ್ನಾ ವಂದಿಸಿದರು.