ಉಪರಾಷ್ಟ್ರಪತಿ ಚುನಾವಣೆ; ಸಿ.ಪಿ.ರಾಧಕೃಷ್ಣನ್ ವಿರುದ್ಧ ತಿರುಚಿ ಶಿವ ಅಭ್ಯರ್ಥಿಯಾಗುವ ಸಾಧ್ಯತೆ | Tiruchi Siva

photo (38)
Published on

Tiruchi Siva: ಮುಂದಿನ ತಿಂಗಳು ನಡೆಯಲಿರುವ ಉಪರಾಷ್ಟ್ರಪತಿ ಚುನಾವಣೆಗೆ ಎನ್​​ಡಿಎ ಒಕ್ಕೂಟ ತಮಿಳುನಾಡು ಮೂಲದ ಗವರ್ನರ್ ಸಿ.ಪಿ.ರಾಧಕೃಷ್ಣನ್ ಅವರನ್ನು ಅಭ್ಯರ್ಥಿ ಮಾಡಿದ ಹಿನ್ನೆಲೆ, ವಿಪಕ್ಷಗಳ ಮೈತ್ರಿಕೂಟ ಇಂಡಿಯಾ ಒಕ್ಕೂಟದಿಂದ ಅದೇ ತಮಿಳುನಾಡು ಮೂಲದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಯೋಜನೆ ರೂಪಿಸಿವೆ ಎಂದು ಸೋಮವಾರ(ಆಗಸ್ಟ್ 18) ವರದಿಯಾಗಿದೆ

ಪ್ರಾದೇಶಿಕ ರಾಜಕೀಯದ ಪ್ರಶ್ನೆ ಎದುರಾಗಬಹುದಾದ ಸಂಭವ ಹಿನ್ನೆಲೆ ಇಂಡಿಯಾ ಒಕ್ಕೂಟವು ಡಿಎಂಕೆ ರಾಜ್ಯಸಭಾ ಸದಸ್ಯ ತಿರುಚಿ ಶಿವ ಅವರನ್ನು ತಮ್ಮ ಅಭ್ಯರ್ಥಿಯಾಗಿ ಆಯ್ಕೆ ಮಾಡುವ ಸಾಧ್ಯತೆ ಇದೆ ಎಂದು ವರದಿಗಳು ಉಲ್ಲೇಖಿಸಿವೆ. ನಿನ್ನೆ ಬಿಜೆಪಿ ಮೈತ್ರಿಕೂಟ ತಮಿಳುನಾಡು ಮೂಲದ ಮಹಾರಾಷ್ಟ್ರ ರಾಜ್ಯಪಾಲ ಸಿ.ಪಿ.ರಾಧಕೃಷ್ಣನ್ ಅವರನ್ನು ತಮ್ಮ ಅಭ್ಯರ್ಥಿ ಎಂದು ಘೋಷಿಸಿತ್ತು.

ಆರೋಗ್ಯದ ನೆಪ ಹೇಳಿ ಉಪರಾಷ್ಟ್ರಪತಿ ಸ್ಥಾನಕ್ಕೆ ಜಗದೀಪ್ ಧನಕರ್ ಜು. 21ರಂದು ರಾಜೀನಾಮೆ ನೀಡಿದ್ದರು. ಈ ಹಿನ್ನೆಲೆ ಆ ಸ್ಥಾನಕ್ಕೆ ಮುಂದಿನ ತಿಂಗಳು ಚುನಾವಣೆ ನಡೆಯಲಿದೆ. ವಿಪಕ್ಷಗಳು ತಿರುಚಿ ಶಿವರನ್ನು ಆಯ್ಕೆ ಮಾಡುವ ಮೂಲಕ ಬಿಜೆಪಿ ಹೂಡಿರುವ ತನ್ನ ಅಭ್ಯರ್ಥಿ ತಮಿಳುನಾಡಿನವರು ಎಂಬ ಭಾವನೆಗೆ ಟಕ್ಕರ್ ಕೊಡಲು ಆಯ್ಕೆ ಮಾಡುತ್ತಿವೆ.

ಜೊತೆಗೆ ತಿರುಚಿ ಶಿವ ದೇಶದ ದಲಿತ ಪ್ರಮುಖ ನಾಯಕರಲ್ಲಿ ಒಬ್ಬರು ಎನ್ನಲಾಗಿದ್ದು ಇದು ವಿಪಕ್ಷಗಳಿಗೆ ಮತ್ತಷ್ಟು, ತಮ್ಮ ಸಾಮಾಜಿಕ ನ್ಯಾಯ ಪ್ರತಿಪಾದನೆಗೆ ಸಹಾಯಕವಾಗಲಿದೆ ಎನ್ನಲಾಗಿದೆ.

ಸಿ.ಪಿ.ರಾಧಕೃಷ್ಣನ್ ಆಯ್ಕೆಗೆ ಪ್ರತಿಕ್ರಿಯಿಸಿರುವ ತಮಿಳುನಾಡಿನ ಡಿಎಂಕೆ ಪಕ್ಷ,  ಇದೊಂದು ರೀತಿ ಚುನಾವಣಾ ಪ್ರಚಾರದ ಭಾಗವಾಗಿ ಆಯ್ಕೆ ಮಾಡಿದ್ದಾರೆ. ತಮಿಳಿಗನೊಬ್ಬನನ್ನು ಆಯ್ಕೆ ಮಾಡುವುದು ತಮಿಳುನಾಡು ಪರವಾಗೋದಿಲ್ಲ ಎಂದು ಹೇಳಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net