ಅಧ್ಯಕ್ಷರಾಗಿ ವೆಂಕಟೇಶ್ ಆಚಾರ್ಯ ಆಯ್ಕೆ

kota
Published on

ಕೋಟ: ಇಲ್ಲಿನ ಶ್ರೀ ವಿರಾಡ್ವಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಂಘದ ಅಂಗ ಸಂಸ್ಥೆ ವಿಶ್ವಕರ್ಮ ಕಲಾವೃಂದದ ಅಧ್ಯಕ್ಷರಾಗಿ ವೆಂಕಟೇಶ್ ಆಚಾರ್ಯ ಪಾರಂಪಳ್ಳಿ ಮರು ಆಯ್ಕೆಯಾದರು. ಗೌರವಾಧ್ಯಕ್ಷರಾಗಿ ಸುಬ್ರಾಯ ಆಚಾರ್ಯ ಮಣೂರು, ಉಪಾಧ್ಯಕ್ಷರಾಗಿ ಚೇಂಪಿ ದಿನೇಶ್ ಆಚಾರ್ಯ, ಕಾರ್ಯದರ್ಶಿಯಾಗಿ ನಾಗರಾಜ್ ಆಚಾರ್ಯ ಪಾರಂಪಳ್ಳಿ, ಜತೆ ಕಾರ್ಯದರ್ಶಿಯಾಗಿ ನಾಗೇಂದ್ರ ಆಚಾರ್ಯ ಚಿತ್ರಪಾಡಿ, ಕೋಶಾಧಿಕಾರಿಯಾಗಿ ಪದ್ಮನಾಭ ಆಚಾರ್ಯ ಬನ್ನಾಡಿ, ಕಲಾ ಕಾರ್ಯದರ್ಶಿಯಾಗಿ ಚಂದ್ರ ಆಚಾರ್ಯ, ಜತೆ ಕಲಾ ಕಾರ್ಯದರ್ಶಿಯಾಗಿ ಶ್ರೀಪತಿ ಆಚಾರ್ಯ ಕಾರ್ಕಡ ನೇಮಕಗೊಂಡರು. ಕ್ರೀಡಾ ಕಾರ್ಯದರ್ಶಿಯಾಗಿ ಪ್ರಶಾಂತ್ ಆಚಾರ್ಯ ಕಾರ್ಕಡ, ಜತೆ ಕ್ರೀಡಾ ಕಾರ್ಯದರ್ಶಿಯಾಗಿ ಅಶೋಕ್ ಆಚಾರ್ಯ ಪಾರಂಪಳ್ಳಿ, ಆದರ್ಶ ಆಚಾರ್ಯ ಬನ್ನಾಡಿ ಆಯ್ಕೆಯಾದರು. ಬಳಿಕ ಸಂಘದ ವ್ಯಾಪ್ತಿಯ ಎಲ್ಲ ಗ್ರಾಮಗಳಿಗೂ ಸದಸ್ಯರ ಆಯ್ಕೆ par ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net