ವೆಂಕಟರಮಣ ಸಂಸ್ಥೆಗಳ ಸ್ಥಾಪನಾ ದಿನಾಚರಣೆ

gan (4)
Published on

ಗಂಗೊಳ್ಳಿ: ಇಲ್ಲಿನ ಶ್ರೀ ವೆಂಕಟರಮಣ ಸಮೂಹ ಶಿಕ್ಷಣ ಸಂಸ್ಥೆಗಳ 39ನೇ ಸ್ಥಾಪನಾ ದಿನವನ್ನು ಇತ್ತೀಚೆಗೆ ಆಚರಿಸಲಾಯಿತು. ಎಸ್‌ಎಸ್‌ಎಲ್‌ಸಿಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಬೆಳ್ಳಿ ಲೋಟವನ್ನು ನೆನಪಿನ ಕಾಣಿಕೆಯಾಗಿ ನೀಡಲಾಯಿತು.

600ಕ್ಕಿಂತ ಅಧಿಕ ಅಂಕ ಪಡೆದವರು ಹಾಗೂ ಡಿಸ್ಟಿಂಕ್ಷನ್ ಪಡೆದ ವಿದ್ಯಾರ್ಥಿಗಳಿಗೆ ಬೆಳ್ಳಿ ನಾಣ್ಯ ನೀಡಿ ಪ್ರೋತ್ಸಾಹಿಸಲಾಯಿತು. ಜತೆಗೆ ಪಿಯುಸಿ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಕೆ.ರಾಮಕೃಷ್ಣ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಡಯಟ್‌ನ ಪ್ರಾಂಶುಪಾಲ ಡಾ.ಅಶೋಕ್ ಕಾಮತ್, ಚಿನ್ಮಯಿ ಆಸ್ಪತ್ರೆಯ ಸುಮಾ ಉಮೇಶ್ ಪುತ್ರನ್, ಕೆ. ರಾಧಾಕೃಷ್ಣ ಶೆಣೈ ಹಾಗೂ ಕೆ.ಲಕ್ಷ್ಮೀನಾರಾಯಣ ಶೆಣೈ, ಸುಜಯ್ ಕೋಟೆಗಾರ ಉಪಸ್ಥಿತರಿದ್ದರು.

ಸಂದೀಪ್ ಗಾಣಿಗ ಸ್ವಾಗತಿಸಿದರು. ಪ್ರಮೀಳಾ ಡಿಸೋಜ ವಂದಿಸಿದರು. ದಿವ್ಯಾಪ್ರೀತಿ ನಜರತ್ ಹಾಗೂ ಸೌಮ್ಯಾ ನಾವಡ ಕಾರ್ಯಕ್ರಮ ನಿರೂಪಿಸಿದರು. ಕೃಷ್ಣ ಅಡಿಗ, ರೇಷ್ಮಾ ಡಿಸೋಜ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net