ವೀರಮಂಗಲ ಪಿಎಂಶ್ರೀ ಶಾಲೆಗೆ ಅತ್ಯುತ್ತಮ ಶಾಲೆ ಪ್ರಶಸ್ತಿ

New Project (10)
Published on

ಪುತ್ತೂರು ಗ್ರಾಮಾಂತರ: ಪಿಎಂಶ್ರೀ ಕಾರ್ಯಚಟುವಟಿಕೆಗಳಲ್ಲಿ ಉತ್ತಮ ಸಾಧನೆ ಮಾಡಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಆಯ್ಕೆಗೊಂಡ ವೀರಮಂಗಲದ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಅಖಿಲ ಭಾರತೀಯ ಮಂಡಪಮ್ ನವದೆಹಲಿ ಭಾರತೀಯ ಶಿಕ್ಷಾ ಸಮಾಗಮದಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರದಾನ್ ಮಂಗಳವಾರ ಅತ್ಯುತ್ತಮ ಪಿಎಂಶ್ರೀ ಶಾಲೆಯೆಂದು ದೇಶಕ್ಕೆ ಸಮರ್ಪಣೆ ಮಾಡಿದರು.

ಕೇಂದ್ರ ರಾಜ್ಯಶಿಕ್ಷಣ ಸಚಿವ ಡಾ.ಸುಕಾಂತ್ ಮಜೂಂಬ್ದಾರ್, ಕೇಂದ್ರ ರಾಜ್ಯ ಶಿಕ್ಷಣ ಸಚಿವ ಜಯಂತ್ ಚೌಧರಿ, ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ಅಶೋಕ್ ಕುಮಾರ್ ರೈ ಉಪಸ್ಥಿತಿಯಲ್ಲಿ ನಡೆದ ಕಾರ‌್ಯಕ್ರಮವನ್ನು ಶಾಲೆಯಲ್ಲಿ ನೇರಪ್ರಸಾರ ಮಾಡಲು ಬೃಹತ್ ಪರದೆಯ ವ್ಯವಸ್ಥೆ ಮಾಡಲಾಗಿತ್ತು.

ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್., ಸಮಗ್ರ ಶಿಕ್ಷಣ ಕರ್ನಾಟಕ ಜಿಲ್ಲಾ ಸಹಾಯಕ ಉಪಯೋಜನಾ ಸಮನ್ವಯಾಧಿಕಾರಿ ಶೋಭಾ, ಕ್ಷೇತ್ರ ಶಿಕ್ಷಣ ಸಂಯೋಜಕ ಹರಿಪ್ರಸಾದ್, ನರಿಮೊಗರು ಸಿಆರ್‌ಪಿ ಪರಮೇಶ್ವರಿ ಉಪಸ್ಥಿತರಿದ್ದರು.

ಮುಖ್ಯಶಿಕ್ಷಕ ತಾರಾನಾಥ ಪಿ.ಕಾರ್ಯಕ್ರಮ ಸಂಯೋಜಿಸಿದ್ದರು. ಶಿಕ್ಷಕರಾದ ಹರಿಣಾಕ್ಷಿ, ಶೋಭಾ, ಶ್ರೀಲತಾ, ಹೇಮಾವತಿ, ಕವಿತಾ, ಶಿಲ್ಪರಾಣಿ, ಸೌಮ್ಯಾ, ಸವಿತಾ, ಸಂಚನಾ, ಹಿಮತ್, ನಾರಾಯಣ ಆಚಾರ್ಯ, ಎಸ್‌ಡಿಎಂಸಿ ಅಧ್ಯಕ್ಷ ರವಿಚಂದ್ರ ಮತ್ತು ಎಸ್‌ಡಿಎಂಸಿ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net