ರಾಷ್ಟ್ರಮಟ್ಟದ ಖೋ ಖೋ ಪಂದ್ಯಾಟಕ್ಕೆ ವಿವೇಕಾನಂದ ತಂಡ

PTR_13 OCT_6
Published on


ಪುತ್ತೂರು: ಹರಿಯಾಣದ ಸೋನಿಪತ್ ಗೋಹನ ಗೀತಾ ವಿದ್ಯಾ ಮಂದಿರದಲ್ಲಿ ವಿದ್ಯಾಭಾರತಿಯಲ್ಲಿರುವ ರಾಷ್ಟ್ರಮಟ್ಟದ ಖೋ ಖೋ ಪಂದ್ಯಾಟಕ್ಕೆ ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ತಂಡ ಆಯ್ಕೆಯಾಗಿದೆ.

ತಂಡದಲ್ಲಿ ದ್ವಿತೀಯ ಪಿಯುಸಿಯ ಜಿಷ್ಣು ಪ್ರಕಾಶ್ ಎ, ಬಿ. ಗುರುಕಿರಣ್ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳಾದ ವನಿಶ್, ಚಿಂತನ್ ಪಿ, ಭವಿಷ್ ಜಿ, ಸೃಜನ್, ತರುಣ್ ಬಿ.ಎಸ್, ಮಿಥುನ್ ಶೆಟ್ಟಿ ಎಸ್.ಎಲ್, ತೇಜಸ್‌ಪಿ.ಕೆ, ಮನ್ವಿತ್ ಬಿ.ಎಲ್, ಗೌತಮ್ ವಿ. ಅಂಚನ್, ಪ್ರೇಕ್ಷಿತ್ ಶೆಟ್ಟಿ ಎಂ ಭಾಗವಹಿಸಲಿದ್ದಾರೆ. ವಿದ್ಯಾರ್ಥಿಗಳು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್, ಡಾ. ಜ್ಯೋತಿ ಮತ್ತು ಯತೀಶ್ ನೇತೃತ್ವದಲ್ಲಿ ಮಾರ್ಗದರ್ಶನ ಪಡೆದಿರುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net