ಭಾರತೀಯ ಜ್ಞಾನ ಪರಂಪರೆಯತ್ತ ಅಸಡ್ಡೆ – ಶೈಕ್ಷಣಿಕ ಕಾರ್ಯಾಗಾರದಲ್ಲಿ ಕೃಷ್ಣಪ್ರಸಾದ್ ಕೆ.ಎನ್. ಬೇಸರ

ಭಾರತೀಯ ಜ್ಞಾನ ಪರಂಪರೆಯು ಅತ್ಯಂತ ಹೆಚ್ಚು ಅವಜ್ಞೆಗೊಳಗಾಗಿದೆ ಮತ್ತು ನಮ್ಮವರಿಂದಲೇ ನಿರಾಕರಿಸಲ್ಪಟ್ಟಿದೆ. ಅಧರ್ಮವನ್ನು ಧರ್ಮ ಎಂದು ಬಿಂಬಿಸುವ ಕೆಲಸಗಳು ನಡೆಯುತ್ತಿವೆ. ಇದರಿಂದಾಗಿ ನಾವು ಕಳೆದುಕೊಂಡದ್ದು ಅಪಾರ ಎಂದು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಕಾರ್ಯನಿರ್ವಹಣಾಽಕಾರಿ ಕೃಷ್ಣಪ್ರಸಾದ್ ಕೆ.ಎನ್. ಹೇಳಿದರು.

blank

ವಿವೇಕಾನಂದ ವಿದ್ಯಾವರ್ಧಕ ಸಂಘ ಮತ್ತು ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಭಾರತೀಯ ಜ್ಞಾನ ಪರಂಪರೆ ಪರಿಚಯ ಮತ್ತು ಅವಲೋಕನ ಶೈಕ್ಷಣಿಕ ಕಾರ್ಯಾಗಾರದಲ್ಲಿ ಮಾತನಾಡಿದರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕಿ ಡಾ.ಸುಧಾ ಎಸ್.ರಾವ್ ಅಧ್ಯಕ್ಷತೆ ವಹಿಸಿದ್ದರು. ಎರಡು ದಿನಗಳ ಕಾಲ ನಡೆದ ಕಾರ್ಯಾಗಾರದಲ್ಲಿ ಪ್ರಾಚೀನ ಭಾರತದ ವೇದಗ್ರಂಥ, ತತ್ವಶಾಸ್ತ್ರಗಳ ವ್ಯಾಪ್ತಿ ಮತ್ತು ಪ್ರಾಮುಖ್ಯತೆ, ಸಾಂಪ್ರದಾಯಿಕ ಜ್ಞಾನ ಮತ್ತು ಪಾಶ್ಚಿಮಾತ್ಯ ಜ್ಞಾನದ ಅವಲೋಕನ, ಪ್ರಾಚೀನ ಭಾರತದ ಭಾಷಾ ಶಾಸ್ತ್ರ, ಸಂಖ್ಯೆ ಮತ್ತು ಮಾಪನ, ಕಲೆ, ಕರಕುಶಲತೆ ಮತ್ತು ವ್ಯಾಪಾರ, ಪ್ರಾಚೀನ ಭಾರತದ ಗಣಿತಶಾಸ್ತ್ರ, ರಸಾಯನ ಶಾಸ್ತ್ರ ಮತ್ತು ಭೌತಶಾಸ್ತಗಳ ಪರಿಚಯ ಮತ್ತು ಅವಲೋಕನ, ಪ್ರಾಚೀನ ಭಾರತದ ಖಗೋಳ ಶಾಸ್ತ್ರ, ಜೋತಿಷ್ಯ ಶಾಸ್ತ್ರ ಹಾಗೂ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ, ಪ್ರಾಚೀನ ಭಾರತದ ನಗರ ಯೋಜನೆಗಳು ಮತ್ತು ವಾಸ್ತುಶಿಲ್ಪ, ಕೃಷಿ, ಸಾರ್ವಜನಿಕ ಆಡಳಿತ ವ್ಯವಸ್ಥೆ, ಪ್ರಾಚೀನ ಭಾರತದ ಆರೋಗ್ಯ, ಸ್ವಾಸ್ಥ್ಯ ಮತ್ತು ಮನೋವಿಜ್ಞಾನ, ಔಷಧ ಪದ್ಧತಿ ಹಾಗೂ ಸುಸ್ಥಿರ ಅಭಿವೃದ್ಧಿಯ ಗುರಿಗಳು ಹೀಗೆ ಆರು ಅವಽಗಳಲ್ಲಿ ವಿಚಾರ ಮಂಡಣೆಯಾಯಿತು.

ಮಕ್ಕಳಿಗೆ ಜ್ಞಾನ ಪರಂಪರೆ ಬೋಧನೆ
ಸಮಾರೋಪ ಸಮಾರಂಭದಲ್ಲಿ ವಿವೇಕಾನಂದ ಶಿಕ್ಷಣ ಮಹಾ ವಿದ್ಯಾಲಯದ ಪ್ರಾಂಶುಪಾಲೆ ಡಾ.ಶೊಭಿತಾ ಸತೀಶ್ ಮಾತನಾಡಿ, ಭಾರತೀಯ ಜ್ಞಾನ ಪರಂಪರೆಯನ್ನು ನಾವು ಒಂದಲ್ಲ ಒಂದು ರೀತಿಯಲ್ಲಿ ಮಕ್ಕಳಿಗೆ ಬೋಽಸುತ್ತಾ ಬಂದಿದ್ದೇವೆ. ಬದಲಾದ ಶೈಕ್ಷಣಿಕ ನೀತಿಯಲ್ಲಿ ಇದಕ್ಕೆ ಹೆಚ್ಚಿನ ಪ್ರಾಶಸ್ತ್ಯ ದೊರಕಿದ್ದು ಇದರ ಬಗ್ಗೆ ಹೆಚ್ಚು ಯೋಚಿಸುವಂತಾಗಿದೆ ಎಂದರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಕೋಶಾಽಕಾರಿ ಅಚ್ಯುತ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಡಾ.ಮನುಜೇಶ್ ಬಿ.ಜೆ., ಮೆಕ್ಯಾನಿಕಲ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ.ನವೀನ್ ಎಸ್.ಪಿ. ಉಪಸ್ಥಿತರಿದ್ದರು.

ಪ್ರಾಂಶುಪಾಲ ಡಾ.ಮಹೇಶ್‌ಪ್ರಸನ್ನ ಕೆ. ಸ್ವಾಗತಿಸಿದರು. ಇಲೆಕ್ಟ್ರಾನಿಕ್ಸ್ ವಿಭಾಗದ ಹಿರಿಯ ಪ್ರಯೋಗಾಲಯ ಬೋಧಕ ಸತೀಶ್ ಕೆ. ವಿವಿಧ ಜವಾಬ್ದಾರಿ ನಿರ್ವಹಿಸಿದರು. ಇಲೆಕ್ಟ್ರಾನಿಕ್ಸ್ ವಿಭಾಗದ ಪ್ರಯೋಗಾಲಯ ಮೇಲ್ವಿಚಾರಕ ಹರಿಪ್ರಸಾದ್ ಡಿ. ಕಾರ್ಯಕ್ರಮ ನಿರೂಪಿಸಿದರು.

Share This Article
blank

ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ರ ನಡುವೆ ಹೃದಯಾಘಾತಗಳು ಹೆಚ್ಚಾಗಿ ಸಂಭವಿಸುತ್ತವೆ! ಯಾಕೆ ಗೊತ್ತಾ? heart attacks

heart attacks: ಪ್ರಪಂಚದಾದ್ಯಂತ ಹೃದಯಾಘಾತ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಬೆಳಿಗ್ಗೆ 6 ರಿಂದ ಮಧ್ಯಾಹ್ನ 12…

ಕಾಲುಗಳಲ್ಲಿ ರಕ್ತನಾಳಗಳು ಗೋಚರಿಸಲು ಕಾರಣ ಏನು ಗೊತ್ತೆ?: ಅಪಾಯದ ಬಗ್ಗೆ ಅರಿವಿರಲಿ | Visible Veins

Visible Veins: ನಿಮ್ಮ ಕಾಲುಗಳಲ್ಲಿ ಅಥವಾ ನಮ್ಮ ಅಕ್ಕಪಕ್ಕದವರ ಮನೆಯಲ್ಲಿನ ಕೆಲವರಿಗೆ ಈ ರಕ್ತನಾಳಗಳು ಗೋಚರಿಸಿರುವುದು…

blank