More

    ದೆಹಲಿಯಲ್ಲಿ ಪೆಟ್ರೋಲ್​ ಮತ್ತು ಡೀಸೆಲ್​ ಮೇಲಿನ ವ್ಯಾಟ್​ ದರ ಹೆಚ್ಚಳ

    ನವದೆಹಲಿ: ಕರೊನಾ ಪಿಡುಗಿನಿಂದಾಗಿ ಆಗಿರುವ ಆರ್ಥಿಕ ನಷ್ಟವನ್ನು ತುಂಬಿಕೊಳ್ಳಲು ಸರ್ಕಾರಗಳು ಪೆಟ್ರೋಲ್​ ಮತ್ತು ಡೀಸೆಲ್​ ಮೇಲಿನ ಕರಗಳನ್ನು ಹೆಚ್ಚಿಸಲು ಮುಂದಾಗಿವೆ. ಸದ್ಯ ಜಾಗತಿಕವಾಗಿ ಕಚ್ಚಾ ತೈಲದ ಬೆಲೆ ಕುಸಿದಿರುವ ಕಾರಣ, ಆದಾಯ ಹೆಚ್ಚಿಸಿಕೊಳ್ಳಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಇದು ಬಹುದೊಡ್ಡ ಅವಕಾಶವಾಗಿ ಪರಿಣಮಿಸಿದೆ.

    ಈ ಅವಕಾಶವನ್ನು ಬಳಸಿಕೊಂಡು ದೆಹಲಿ ಸರ್ಕಾರ ಪೆಟ್ರೋಲ್​ ಮತ್ತು ಡೀಸೆಲ್​ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು (ವ್ಯಾಟ್​) ಶೇ.30 ಹೆಚ್ಚಳ ಮಾಡಿ ಮಂಗಳವಾರ ಆದೇಶ ಹೊರಡಿಸಿದೆ. ಇದರಿಂದಾಗಿ ಪೆಟ್ರೋಲ್​ ಬೆಲೆ ಲೀಟರ್​ಗೆ ರೂ.1.67 ಮತ್ತು ಡೀಸೆಲ್​ ಬೆಲೆ ಲೀಟರ್​ಗೆ ರೂ.7.10 ಹೆಚ್ಚಳವಾಗಿವೆ.

    ಇದನ್ನೂ ಓದಿ: ಯುವ ಪತ್ರಕರ್ತೆ ಆತ್ಮಹತ್ಯೆ…ರಾಜಕೀಯ ಮುಖಂಡ ಅರೆಸ್ಟ್​..

    ವ್ಯಾಟ್​ ಹೆಚ್ಚಳಕ್ಕೂ ಮುನ್ನ ದೆಹಲಿಯಲ್ಲಿ ಪೆಟ್ರೋಲ್​ ಲೀಟರ್​ಗೆ ರೂ.69.59ನಂತೆ ಮಾರಾಟವಾಗುತ್ತಿತ್ತು. ಈಗ ಅದು ರೂ.71.26 ಆಗಿದೆ. ಅದರಂತೆ ವ್ಯಾಟ್​ ಹೆಚ್ಚಳಕ್ಕೂ ಮುನ್ನ ಲೀಟರ್​ಗೆ ರೂ.62.29ರಂತೆ ಮಾರಾಟವಾಗುತ್ತಿದ್ದ ಡೀಸೆಲ್​ ಬೆಲೆ ಈಗ ರೂ.69.39ಕ್ಕೆ ತಲುಪಿದೆ.

    ಈ ಸುತ್ತಿನ ವ್ಯಾಟ್​ ಹೆಚ್ಚಳಕ್ಕೂ ಮುನ್ನ ದೆಹಲಿಯಲ್ಲಿ ಪೆಟ್ರೋಲ್​ ಮೇಲೆ ಶೇ.27 ಮತ್ತು ಡೀಸೆಲ್​ ಮೇಲೆ ಶೇ.16 ವ್ಯಾಟ್​ ಅನ್ನು ವಿಧಿಸಲಾಗುತ್ತಿತ್ತು. ಇದರ ಜತೆಗೆ ಪ್ರತಿ ಕಿಲೋಲೀಟರ್​ಗೆ 250 ರೂ. ಏರ್​ ಏಂಬಿಯೆನ್ಸ್​ ದರವನ್ನು ವಿಧಿಸಲಾಗುತ್ತಿತ್ತು ಎಂದು ದೆಹಲಿ ಸರ್ಕಾರದ ಪ್ರಕಟಣೆ ತಿಳಿಸಿದೆ.

    ಹೆಂಡಕ್ಕೆ ಡಬಲ್​ ರೇಟ್​- ಡೋಂಟ್​ ಕೇರ್​, ನಮ್ದು ದೇಶ ಸೇವೆ ಎಂದರು ಮದ್ಯ ಪ್ರೇಮಿಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts