More

    ಹೆಂಡಕ್ಕೆ ಡಬಲ್​ ರೇಟ್​- ಡೋಂಟ್​ ಕೇರ್​, ನಮ್ದು ದೇಶ ಸೇವೆ ಎಂದರು ಮದ್ಯ ಪ್ರೇಮಿಗಳು!

    ನವದೆಹಲಿ: ಕರ್ನಾಟಕ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಈಗಾಗಲೇ ಮದ್ಯದಂಗಡಿ ತೆರೆದು ಆಗಿದೆ. ಖಾಲಿಯಾಗಿರುವ ಸರ್ಕಾರದ ಬೊಕ್ಕಸವನ್ನು ತುಂಬಿಸಲು ಸರ್ಕಾರಕ್ಕೆ ಉಳದಿರುವ ಈ ಮಾರ್ಗವನ್ನು ಬಹುತೇಕ ರಾಜ್ಯಗಳು ಅನುಸರಿಸಿಯಾಗಿವೆ.

    ಲಾಕ್​ಡೌನ್​ನಿಂದಾಗಿ 43 ದಿನಗಳವರೆಗೆ ಮುಚ್ಚಿರುವ ಮದ್ಯದಂಗಡಿಯಿಂದಾಗಿ ದೇಶಕ್ಕೆ ಸಹಸ್ರಾರು ಕೋಟಿ ರೂಪಾಯಿಗಳ ನಷ್ಟ ಉಂಟಾಗಿದೆ. ಇಷ್ಟು ದಿನಗಳವರೆಗೆ ಹೆಂಡ ಸಿಗದೇ ಕಂಗಾಲಾಗಿದ್ದ ಮದ್ಯಪ್ರಿಯರು, ಅಂಗಡಿ ತೆರೆದದ್ದೇ ಅಲ್ಲಿಗೆ ದೌಡಾಯಿಸಿ ಮದ್ಯ ಖರೀದಿ ಮಾಡಿದ್ದರೂ, ಸರ್ಕಾರಕ್ಕೆ ಒಂದೇ ದಿನದಲ್ಲಿ ಲಕ್ಷಾಂತರ ರೂಪಾಯಿ ಆದಾಯವಾಗಿದ್ದರೂ ಇಷ್ಟೂ ದಿನಗಳ ನಷ್ಟವನ್ನು ಭರಿಸುವುದು ಸುಲಭದ ಮಾತಲ್ಲ. ಏಕೆಂದರೆ ಮದ್ಯವೇ ಸರ್ಕಾರದ ಬೊಕ್ಕಸಕ್ಕೆ ಬಹು ದೊಡ್ಡ ಮಾಧ್ಯಮವಾಗಿದೆ.

    ಇದನ್ನೂ ಓದಿ: ನನ್ನ ಸಾವಿನ ಘೋಷಣೆಯೊಂದೇ ಬಾಕಿ ಇತ್ತು, ನಡೆಯಿತು ಪವಾಡ ಎಂದ ಪ್ರಧಾನಿ!|

    ಇದೇ ಹಿನ್ನೆಲೆಯಲ್ಲಿ, ಬೇರೆ ವಿಧಿಯಿಲ್ಲದೇ ಈಗ ಹಲವಾರು ರಾಜ್ಯಗಳು ಮದ್ಯದ ಮೇಲೆ ‘ಕರೊನಾ ಸುಂಕ’ ವಿಧಿಸಿವೆ. ಮದ್ಯದಂಗಡಿಯನ್ನು ತೆರೆಯುತ್ತಲೇ ದೆಹಲಿ ಸರ್ಕಾರ ಶೇ 70ರಷ್ಟು ಕರೊನಾ ಸುಂಕು ವಿಧಿಸಿದ್ದರೆ, ಆಂಧ್ರಪ್ರದೇಶ ಶೇ. 75ರಷ್ಟು ಹೆಚ್ಚಿನ ರೇಟನ್ನು ಮದ್ಯಕ್ಕೆ ಫಿಕ್ಸ್​ ಮಾಡಿದೆ. ಇದರ ಬೆನ್ನಲ್ಲೇ ಪಶ್ಚಿಮ ಬಂಗಾಳ ಶೇ.30ರಷ್ಟು ರೇಟು ಹೆಚ್ಚಿಸಿವೆ. ಇದೇ ರೀತಿ ಹಲವಾರು ರಾಜ್ಯಗಳು ಈಗಾಗಲೇ ಮದ್ಯದ ದರವನ್ನು ವಿಪರೀತ ಏರಿಸಿವೆ.

    ಆದರೆ ರೇಟು ಇಷ್ಟು ಹೆಚ್ಚು ಮಾಡಿದ್ದರೂ ಹಲವು ಕಡೆಗಳಲ್ಲಿ ಮದ್ಯಪ್ರೇಮಿಗಳು ತಲೆಯನ್ನೇ ಕೆಡಿಸಿಕೊಂಡಿಲ್ಲ. ಒಂದಲ್ಲ… ಎರಡಲ್ಲ… ಬರೋಬರಿ 43 ದಿನ ಮದ್ಯವಿಲ್ಲದೇ ಪಟ್ಟಿರುವ ಪರದಾಟವನ್ನು ನೋಡಿದ ಮೇಲೆ ಹೆಂಡದ ಬಾಟಲಿ ಸಿಕ್ಕ ಖುಷಿಗೆ ಡಬ್ಬಲ್​ ರೇಟಾದರೂ ಸರಿ, ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ ಕೆಲವರು.

    ಇದನ್ನೂ ಓದಿ: ತಪಾಸಣೆಗೆ ಬಂದ ಪೊಲೀಸ್​ನನ್ನೇ ಎಳೆದೊಯ್ದ ಭೂಪ! ಮಗನ ಜತೆ ಅಪ್ಪನೂ ಅರೆಸ್ಟ್​

    ಇದೇ ರೀತಿ ಮಾತನಾಡಿದ್ದಾರೆ ದೆಹಲಿಯ ಲಕ್ಷ್ಮೀನಗರದ ಬಾರ್​ನ ಗ್ರಾಹಕ. ‘ಇಷ್ಟು ದಿನಗಳ ಮೇಲೆ ಎಣ್ಣೆ ಬಾಟಲಿಯನ್ನು ನೋಡಿದ ನಂತರ ಮಾತೇ ಹೊರಳುತ್ತಿಲ್ಲ. ಇಲ್ಲಿ ಶೇ.70ರಷ್ಟು ಕರೊನಾ ಸುಂಕ ವಿಧಿಸಲಾಗಿದೆ. ಆದರೂ ನಮಗೇನೂ ಸಮಸ್ಯೆ ಇಲ್ಲ. ಇದು ನಾವು ದೇಶಕ್ಕಾಗಿ ಮಾಡುತ್ತಿರುವ ಸೇವೆ’ ಎಂದಿದ್ದಾರೆ!

    ಕುಡುಕರು ಬಿದ್ದರೆ ಯಾರೂ ಎತ್ತಲು ಬರಲ್ಲ, ಆದರೆ ದೇಶ ಬಿದ್ದಾಗ ಎತ್ತಲು ಕುಡುಕರೇ ಬೇಕಾಯಿತು ಎಂಬ ಜೋಕ್​ ಇದೀಗ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅದನ್ನೇ ಇಟ್ಟುಕೊಂಡು ಕೆಲವು ಮದ್ಯಪ್ರೇಮಿಗಳು ತಮ್ಮಿಂದಲೇ ದೇಶಕ್ಕೆ ಅನುಕೂಲ ಆಗುತ್ತಿದೆ ಎನ್ನುತ್ತಿದ್ದಾರೆ! (ಏಜೆನ್ಸೀಸ್​)

    ಇದನ್ನೂ ಓದಿ: 2 ಪ್ಯಾಕೆಟ್​ ಕುರುಂಕುರುಂ ತಿಂಡಿ ಕೇಳಿದ್ದಕ್ಕೆ 2 ಲಕ್ಷ ರೂಪಾಯಿ ಗುಳುಂ! ಆಗಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts