ಯುವ ಪತ್ರಕರ್ತೆ ಆತ್ಮಹತ್ಯೆ...ರಾಜಕೀಯ ಮುಖಂಡ ಅರೆಸ್ಟ್​..

Suicide 5 may 20
Published on

ವಾರಾಣಸಿ: 28 ವರ್ಷದ ಪತ್ರಕರ್ತೆಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜಕೀಯ ಮುಖಂಡನೋರ್ವನ ಬಂಧನವಾಗಿದೆ.

ಉತ್ತರ ಪ್ರದೇಶದ ವಾರಾಣಸಿಯ ಹರ್ಪಲ್​ಪುರದಲ್ಲಿ ಘಟನೆ ನಡೆದಿದೆ. ರಿಝ್ವಾನ್​ ತಬ್ಸುಮ್​ ಎಂಬ ಪತ್ರಕರ್ತೆ ತನ್ನ ಕೋಣೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತನಿಖೆಗೆ ಧಾವಿಸಿದ ಪೊಲೀಸರಿಗೆ ತಬ್ಸುಮ್​ ಬರೆದಿಟ್ಟಿದ್ದ ಡೆತ್​ ನೋಟ್​ ಸಿಕ್ಕಿದ್ದು, ಅದರಲ್ಲಿ ಸಮಾಜವಾದಿ ಪಕ್ಷದ ನಾಯಕ ಶಮಿಮ್​ ನೊಮಾನಿಯವರೇ ನನ್ನ ಸಾವಿಗೆ ಕಾರಣ ಎಂದು ಬರೆದಿಟ್ಟಿದ್ದಾಳೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಡೆತ್​ ನೋಟ್​ನಲ್ಲಿ ಶಮೀಮ್​ ಹೆಸರು ಇರುವುದರಿಂದ ಅವರನ್ನು ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸಿದ್ದಾರೆಂದು ಎಸ್​ಎಸ್​ಪಿಯ ಪಿಆರ್​ಒ ಸಂಜಯ್​ ತ್ರಿಪಾಠಿ ತಿಳಿಸಿದ್ದಾರೆ.

ಶಮೀಮ್​ ಮತ್ತು ರಿಜ್ವಾನಾ ನಡುವೆ ತುಂಬ ದಿನಗಳಿಂದಲೂ ಸಹಜ ಗೆಳೆತನವಿತ್ತು. ಆದರೆ ಒಮ್ಮೆಲೇ ಏನಾಯಿತು ಗೊತ್ತಿಲ್ಲ ಎಂದಿದ್ದಾರೆ.

ಸೋಮವಾರ ರಿಜ್ವಾನಾ ತನ್ನ ಕೋಣೆಯಿಂದ ಹೊರಗೆ ಬರಲಿಲ್ಲ. ಎಷ್ಟು ಕರೆದರೂ ಮಾತನಾಡದಾಗ ಆತಂಕದಿಂದ ಬಾಗಿಲು ಒಡೆಯಲಾಯಿತು. ಒಳೆಗೆ ಹೋಗಿ ನೋಡಿದರೆ ಆಕೆ ನೇಣು ಬಿಗಿದ ಸ್ಥಿತಿಯಲ್ಲಿದ್ದಳು ಎಂದು ರಿಜ್ವಾನಾ ತಬ್ಸುಮ್​ ಕುಟುಂಬ ತಿಳಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net