ಹಾವೇರಿಯಲ್ಲಿ ವರುಣನ ಆರ್ಭಟ, ಹಿರೇಕೆರೂರಲ್ಲಿ ಬೈಕ್ ಮೇಲೆ ಮರ ಬಿದ್ದು ಹೆಸ್ಕಾಂ ಗುತ್ತಿಗೆ ನೌಕರರ ಸಾವು

HKR- incident
Published on

ಹಿರೇಕೆರೂರ: ಹಾವೇರಿಯಲ್ಲಿ ವರುಣನ ಆರ್ಭಟ ಮುಂದುವರಿದಿದೆ. ಮಳೆಯೊಂದಿಗೆ ರಭಸದ ಗಾಳಿಯಿಂದ ಮರ ಬಿದ್ದು ಇಬ್ಬರು ಮೃತಪಟ್ಟ ಘಟನೆ ಹಿರೇಕೆರೂರಿನ ಎಪಿಎಂಸಿ ಬಳಿ ನಡೆದಿದೆ.

ಹಿರೇಕೆರೂರಿನಲ್ಲಿ ಹೆಸ್ಕಾಂ ಗುತ್ತಿಗೆ ನೌಕರರಾಗಿದ್ದ ಮಂಜುನಾಥ (35) ಹನುಮಂತಪ್ಪ (25) ಮೃತಪಟ್ಟವರು.

ಮಧ್ಯಾಹ್ನ ಊಟ ಮುಗಿಸಿ ಬೈಕ್​ನಲ್ಲಿ ಮರಳಿ ಹೆಸ್ಕಾಂ ಕಚೇರಿಗೆ ತೆರಳುವಾಗ ಘಟನೆ ನಡೆದಿದೆ.

ಸ್ಥಳಕ್ಕೆ ಹಿರೇಕೆರೂರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಂಜುನಾಥ ಚಿನ್ನಮುಳುಗುಂದ ಗ್ರಾಮದ ನಿವಾಸಿಯಾಗಿದ್ದೆ, ಹನುಮಂತಪ್ಪ ಯತ್ತಿನಹಳ್ಳಿ ಗ್ರಾಮದವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net