ಬೆಂಗಳೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬೆಂಗಳೂರು ನಗರ ಜಿಲ್ಲೆ ವತಿಯಿಂದ ಮಾ.7 ರಂದು ಬೆಳಿಗ್ಗೆ 9.00 ಗಂಟೆಗೆ ನಗರದ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಮಹಿಳಾ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ.
19 ರಿಂದ 45ರ ವಯೋಮಾನ ಮತ್ತು 45 ವರ್ಷ ಮೇಲ್ಪಟ್ಟ ಮಹಿಳೆಯರಿಗಾಗಿ ಪ್ರತ್ಯೇಕ ಮಹಿಳೆಯರಿಗಾಗಿ ಮೂರು ಕಾಲಿನ ಓಟ, ಲೆಮೆನ್ ಮತ್ತು ಸ್ಪೂನ್, ಗೋಣಿಚೀಲ ಓಟ, ಮಡಿಕೆ ಒಡೆಯುವುದು, ಮೆಮೋರಿಟೆಸ್ಟ್, ಮ್ಯೂಸಿಕಲ್ ಚೇರ್ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
ಗ್ರೂಪ್ ವಿಭಾಗದಲ್ಲಿ ಕಬ್ಬಡಿ, ಥ್ರೋಬಾಲ್, ಹಗ್ಗ ಜಗ್ಗಾಟ, ಆಟಗಳನ್ನು ಆಯೋಜಿಸಲಾಗಿದ್ದು ಇದಕ್ಕೆ ಯಾವುದೇ ವಯೋಮಿತಿ ಇರುವುದಿಲ್ಲ.
ನೋಂದಣಿ ಉಚಿತವಾಗಿದ್ದು, ಗೂಗಲ್ ಲಿಂಕ್: https://forms.gle/D2kQSK5jWaMJMgKB8
ಮೂಲಕ ಮಾ.6 ರ ಸಂಜೆ 5.00 ಗಂಟೆಯೊಳಗಾಗಿ ನೋಂದಾಯಿಸಿಕೊಳ್ಳಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕಂಠೀರವ ಕ್ರೀಡಾಂಗಣ, ಕಸ್ತೂರಬಾ ರಸ್ತೆ, ಗೇಟ್ ನಂ.12, ಕೊಠಡಿ ಸಂಖ್ಯೆ:17-18, ಬೆಂಗಳೂರು -560 001 ಗೆ ಅಥವಾ ದೂರವಾಣಿ ಸಂಖ್ಯೆ: 080-22239771 ಗೆ ಸಂಪರ್ಕಿಸಬಹುದು.