

ನವದೆಹಲಿ: ಭಾರತೀಯ ರೈಲ್ವೆಯಲ್ಲಿ ಕ್ರಾಂತಿಕಾರವೆನ್ನಿಸಿರುವ ಸೆಮಿ ಹೈಸ್ಪೀಡ್ ರೈಲು ವಂದೇ ಭಾರತ್ ಎಕ್ಸ್ಪ್ರೆಸ್, ಅದರ ಸಾಮರ್ಥ್ಯದಲ್ಲಿ ಅರ್ಧಕ್ಕಿಂತ ಕಡಿಮೆ ವೇಗದಲ್ಲಿ ಸಂಚುರಿಸುತ್ತಿದೆ. ಈ ರೈಲಿಗೆ ಗರಿಷ್ಠ ವೇಗದಲ್ಲಿ ಸಂಚರಿಸಲು ಹಳಿಗಳು ಪೂರಕವಾಗಿಲ್ಲದಿರುವುದು ಕಾರಣ ಎಂದು ಮಾಹಿತಿ ಹಕ್ಕು ಅರ್ಜಿ (ಆರ್ಟಿಐ)ಗೆ ನೀಡಿದ ಉತ್ತರದಿಂದ ತಿಳಿದುಬಂದಿದೆ. ಮಧ್ಯಪ್ರದೇಶದ ಚಂದ್ರಶೇಖರ್ ಗೌರ್ ಸಲ್ಲಿಸಿದ ಅರ್ಜಿಗೆ ರೈಲ್ವೆ ಇಲಾಖೆ ಈ ಪ್ರತಿಕ್ರಿಯೆ ನೀಡಿದೆ.