ಇಂದೇ ಕಾರವಾರಕ್ಕೆ ಬರಲಿದೆ ವಂದೇ ಭಾರತ್ ರೈಲು

Vande bharat express train
Published on

ಕಾರವಾರ: ದೇಶದ ವೇದಗ ರೈಲು ವಂದೇ ಭಾರತ್ ಮಂಗಳವಾರ ಕಾರವಾರಕ್ಕೆ ಬರುವ ಸಾಧ್ಯತೆ ಇದೆ.
ಮಂಗಳೂರು ಸೆಂಟ್ರಲ್-ಮಡಗಾಂವ ವಂದೇ ಭಾರತ ರೈಲು ಸಂಚಾರಕ್ಕೆ ಸೇರಿ ಇತರ ಐದು ಯೋಜನೆಗಳಿವೆ ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ 30 ರಂದು ಒಂದೇ ಕಡೆಯಿಂದ ಚಾಲನೆ ನೀಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ರೈಲ್ವೆ ಡಿ.26 ರಂದು ರೈಲಿನ ಪ್ರಾಯೋಗಿಕ ಸಂಚಾರಕ್ಕೆ ಸಿದ್ಧತೆ ನಡೆಸಿದೆ. ಸೋಮವಾರವೇ ವಂದೇ ಭಾರತ ಕೋಚ್ ಮಂಗಳೂರು ಸೆಂಟ್ರಲ್‌ ನಿಲ್ದಾಣ ತಲುಪಿದೆ.

ತಾತ್ಕಲಿಕ ವೇಳಾಪಟ್ಟಿಯಂತೆ ರೈಲು ಬೆಳಗ್ಗೆ 8.30 ಕ್ಕೆ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣ ಬಿಟ್ಟು ಮಧ್ಯಾಹ್ನ 1.15 ಕ್ಕೆ ಮಡಗಾಂವ ತಲುಪಲಿದೆ. ನಂತರ ಸಾಯಂಕಾಲ 6.10 ಕ್ಕೆ ಮಡಗಾಂವ ಬಿಟ್ಟು ರಾತ್ರಿ 10.45 ಕ್ಕೆ ಮಂಗಳೂರು ತಲುಪಲಿದೆ.

ಎರಡೇ ಕಡೆ ನಿಲುಗಡೆ
ಮಂಗಳೂರು ಸೆಂಟ್ರಲ್ ನಿಂದ ಬಿಟ್ಟ ರೈಲಿಗೆ ಉಡುಪಿ ಹಾಗೂ ಕಾರವಾರದಲ್ಲಿ ಮಾತ್ರ ನಿಲುಗಡೆ ಇರಲಿದೆ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಮಂಗಳೂರಿನಿಂದ ಹೊರಡುವ ರೈಲು ಉಡುಪಿಗೆ ಬೆಳಗ್ಗೆ 9.50 ಕ್ಕೆ, ಕಾರವಾರಕ್ಕೆ ಮಧ್ಯಾಹ್ನ‌ 12.10 ಕ್ಕೆ ತಲುಪಲಿದೆ. ಮಡಗಾಂವದಿಂದ ಹೊರಡುವ ರೈಲು ಸಾಯಂಕಾಲ 6.57 ಕ್ಕೆ ಕಾರವಾರ, 9.14 ಕ್ಕೆ ಉಡುಪಿ ತಲುಪಲಿದೆ.
ಹೆಚ್ಚುವರಿ ನಿಲುಗಡೆ ಬೇಕು
ಗೋಕರ್ಣ ಹಾಗೂ ಮುರ್ಡೇಶ್ವರ ಪಾರಂಪರಿಕ ತಾಣಗಳಲ್ಲಿ ರೈಲು ನಿಲ್ಲಬೇಕು. ಮತ್ತು ಮುಂಬೈವರೆಗೂ ಇದೇ ವಂದೇ ಭಾರತ ರೈಲನ್ನು ವಿಸ್ತರಿಸಬೇಕು ಎಂದು ಒತ್ತಾಯಿಸಲಿದ್ದೇವೆ ಎಂದು ಉತ್ತರ ಕನ್ನಡ ಜಿಲ್ಲಾ ರೈಲ್ವೆ ಸೇವಾ ಸಮಿತಿಯ ಕಾರ್ಯದರ್ಶಿ ರಾಜೀವ ಗಾಂವಕರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net