ಕೋಟ: ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ, ಕೋಟ ಘಟಕ ಮತ್ತು ಮಹಿಳಾ ಸಂಘಟನೆ ನೇತೃತ್ವದಲ್ಲಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಉಡುಪಿ, ಗೀತಾನಂದ ಫೌಂಡೇಶನ್ ಮಣೂರು ಪಡುಕರೆ, ಎಂಪಿಎಂಸಿ ಉಡುಪಿ, ಕೋಟ ಸಂತೆ ಮಾರುಕಟ್ಟೆ ವಿಭಾಗ ಸಹಯೋಗದೊಂದಿಗೆ ಕೋಟ ಗ್ರಾಪಂ ಸಹಕಾರದೊಂದಿಗೆ ಭಾನುವಾರ ವನಮಹೋತ್ಸವ ನಡೆಯಿತು.
ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ.ಕುಂದರ್ ಸಸಿ ನಟ್ಟು, ಸಸಿ ವಿತರಣೆ ಮಾಡಿ ಅದರ ಮಹತ್ವ ತಿಳಿಸಿದರು. ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ ಮಾಜಿ ಅಧ್ಯಕ್ಷ ಎಂ.ಎಸ್ ಸಂಜೀವ ಕೋಟ, ಶಿವರಾಮ ಕೆ.ಎಂ., ಉಪಾಧ್ಯಕ್ಷ ಅಶೋಕ ತೆಕ್ಕಟ್ಟೆ, ಗೌರವ ಸಲಹೆಗಾರ ರಮೇಶ್ ವಿ.ಕುಂದರ್, ಕೋಟ ಘಟಕ ಅಧ್ಯಕ್ಷ ರಂಜಿತ್ ಕುಮಾರ್, ಮಾಜಿ ಅಧ್ಯಕ್ಷ ಸುರೇಶ್ ಕೆ., ಕಾರ್ಯದರ್ಶಿ ಪ್ರವೀಣ್ ಕುಂದರ್, ಮಹಿಳಾ ಘಟಕ ಅಧ್ಯಕ್ಷೆ ಲಲಿತಾ ಭಾಸ್ಕರ್, ಮಾಜಿ ಅಧ್ಯಕ್ಷೆ ಗುಲಾಬಿ ದೇವದಾಸ್ ಬಂಗೇರ, ಕೋಟ ಘಟಕ ಪ್ರಮುಖರಾದ ಸುರೇಶ್ ಕಾಂಚನ್ ಬಾರಿಕೆರೆ, ದೇವದಾಸ್ ಕಾಂಚನ್, ಕೃಷ್ಣ ಪುತ್ರನ್, ಲಕ್ಷಣ ಕಾಂಚನ್, ಅಶೋಕ್ ವಿ.ಕುಂದರ್, ಕೋಟ ಗ್ರಾಪಂ ಅಧ್ಯಕ್ಷೆ ಜ್ಯೋತಿ ಭರತ್‌ಕುಮಾರ್ ಶೆಟ್ಟಿ, ಉಪಾಧ್ಯಕ್ಷ ಪಾಂಡು ಪೂಜಾರಿ, ಸದಸ್ಯರಾದ ಚಂದ್ರ ಆಚಾರ್ ಕೋಟ, ಕೋಟತಟ್ಟು ಗ್ರಾಪಂ ಅಧ್ಯಕ್ಷ ಸತೀಶ್ ಕುಂದರ್ ಬಾರಿಕೆರೆ, ಕೋಟ ಸಿ.ಎ ಬ್ಯಾಂಕ್ ಅಧ್ಯಕ್ಷ ಕೃಷ್ಣ ಕಾಂಚನ್ ಕೋಡಿ, ಮಣೂರು ಮಹಾಲಿಂಗೇಶ್ವರ ದೇವಸ್ಥಾನ ಅಧ್ಯಕ್ಷ ಸತೀಶ್ ಎಚ್.ಕುಂದರ್, ಎಪಿಎಂಸಿ ಉಡುಪಿ ಉಪಾಧ್ಯಕ್ಷ ಕೃಷ್ಣ ಪೂಜಾರಿ ಕೋಡಿ, ಗೀತಾನಂದ ಫೌಂಡೇಶನ್ ಪ್ರಮುಖರಾದ ಶ್ರೀನಿವಾಸ ಕುಂದರ್, ರವಿಕಿರಣ್ ಮತ್ತು ಸದಸ್ಯರು ಉಪಸ್ಥಿತರಿದ್ದರು.