

vaishnavi-gowda: ಕಿರುತೆರೆ ನಟಿ ವೈಷ್ಣವಿ ಗೌಡ ಮದುವೆ ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆದಿತ್ತು. ವೈಷ್ಣವಿ ಗೌಡ ನಟಿಸುತ್ತಿದ್ದ ಸೀರಿಯಲ್ ಸಹ ಮುಕ್ತಾಯಗೊಂಡಿದ್ದು, ಪತಿ ಅನುಕೂಲ್ ಮಿಶ್ರಾ ಜೊತೆ ತಮ್ಮ ಅಮೂಲ್ಯ ಸಮಯವನ್ನು ವೈಷ್ಣವಿ ಗೌಡ ಕಳೆಯುತಿದ್ದಾರೆ. ಇನ್ನೂ ವೈಷ್ಣವಿ ಗೌಡ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ವಿಡಿಯೋವೊಂದನ್ನು ಹಂಚಿಕೊಂಡಿದ್ದು, 117 ಅಡಿ ಎತ್ತರದಿಂದ ಗಂಡ ಅನುಕೂಲ್ ಜೊತೆಯಲ್ಲಿ ಪ್ರಪಾತಕ್ಕೆ ಧುಮುಕಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಾ ಇದೆ.
ಇತ್ತೀಚಿನ ದಿನಗಳಲ್ಲಿ ಈ ರೀತಿಯ ಸಾಹಸ ಕ್ರೀಡೆಗಳಲ್ಲಿ ಭಾಗಿಯಾಗುವ ಟ್ರೆಂಡ್ ಶುರುವಾಗಿದೆ. ಆದರೆ ಇಂತಹ ಸಾಹಸ ಚಟುವಟಿಕೆಯಲ್ಲಿ ಭಾಗಿಯಾಗುವ ಧೈರ್ಯ ಬೇಕಾಗುತ್ತದೆ.
ಉತ್ತರಾಖಂಡ ಋಷಿಕೇಶ ಬಳಿ ಇರುವ ಶಿವಪುರಿಯಲ್ಲಿ ಹಿಮಾಲಯನ್ ಬಂಗೀಯಲ್ಲಿ ದಂಪತಿ ಬಂಗೀ ಜಂಪ್ ಮಾಡಿ ಸಂಭ್ರಮಿಸಿದ್ದಾರೆ. ಹಿಮಾಲಯನ್ ಬಂಗೀ, ಹಿಮಾಲಯನ್ ಫ್ರೀಸ್ಟೈಲ್ ಬಂಗೀ, ಹಿಮಾಲಯನ್ ಜೋಡಿ ಬಂಗೀ ಹೆಸರಿನಲ್ಲಿ ಇಲ್ಲಿ ಜಂಪ್ ಮಾಡಬಹುದು.
ಮೇ 5ರ ತಡರಾತ್ರಿಯೇ ವೈಷ್ಣವಿ ಗೌಡ ಮತ್ತು ಅನುಕೂಲ್ ಮಿಶ್ರಾ ಮದುವೆ ನಡೆದಿತ್ತು. ಉತ್ತರ ಪ್ರದೇಶದಂತೆ ಅವರು ಕೆಂಪು ಬಣ್ಣದ ಲೆಹೆಂಗಾ ಧರಿಸಿ ಮಂಟಪಕ್ಕೆ ಆಗಮಿಸಿದ್ದರು. ಇನ್ನೂ ಅವರ ಹುಡುಗ ಅನುಕೂಲ್ ಮಿಶ್ರಾ ಬಿಳಿ ಬಣ್ಣದ ಶೇರ್ವಾನಿ ಧರಿಸಿದ್ದರು. ವೈಷ್ಣವಿ ಗೌಡ ಮದುವೆಯಲ್ಲಿ ಧಾರಾವಾಹಿಯ ಎಲ್ಲ ಕಲಾವಿದರು ಕೂಡ ಆಗಮಿಸಿ ನವ ಜೋಡಿಗಳಿಗೆ ಶುಭ ಹಾರೈಸಿದ್ದರು.