ಒಂದು ಸೂಪರ್​ ಹಿಟ್​, ಮತ್ತೊಂದು ಫ್ಲಾಪ್​! ಅದೃಷ್ಟ ಪರೀಕ್ಷೆಗಿಳಿದ 'ಬೇಬಿ' ವೈಷ್ಣವಿ ಚೈತನ್ಯ | Jack

ವಿಜಯವಾಣಿ - 2025-04-04T120217.517
Published on

Jack Release: ಕಳೆದ ವರ್ಷ ಜುಲೈ 14ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡು ಬ್ಲಾಕ್‌ಬಸ್ಟರ್ ಚಿತ್ರವಾಗಿ ಹೊರಹೊಮ್ಮಿದ ‘ಬೇಬಿ’, ತೆರೆಕಂಡ ಮೊದಲ ದಿನವೇ ಚಿತ್ರಪ್ರೇಮಿಗಳ ಪ್ರಶಂಸೆಗೆ ಪಾತ್ರವಾಯಿತು. ಕಡಿಮೆ ಬಜೆಟ್​ನಲ್ಲಿ ಅತ್ಯುತ್ತಮ ಚಿತ್ರ ಕೊಟ್ಟ ನಿರ್ದೇಶಕ ಸಾಯಿ ರಾಜೇಶ್, ತಮ್ಮ ಚಿತ್ರದಲ್ಲಿ ಅಭಿನಯಿಸಿದ ಬಹುತೇಕ ಕಲಾವಿದರಿಗೆ ಹೊಸ ಜೀವನವನ್ನೇ ಕಲ್ಪಿಸಿಕೊಟ್ಟಿದ್ದಾರೆ ಎಂದರೆ ಖಂಡಿತ ತಪ್ಪಾಗಲಾರದು. ಈ ಸಾಲಿನಲ್ಲಿ ನಟಿ ವೃಷ್ಣವಿ ಚೈತನ್ಯ ಮುಂಚೂಣಿಯಲ್ಲಿದ್ದಾರೆ.

ಅಲ್ಪಾವಧಿಯಲ್ಲೇ ಚಿತ್ರದ ಭರ್ಜರಿ ಯಶಸ್ಸನ್ನು ಕಂಡ 'ಬೇಬಿ' ಖ್ಯಾತಿಯ ನಟಿ ವೈಷ್ಣವಿ ಚೈತನ್ಯ, ಇದೊಂದು ಸೂಪರ್​ಹಿಟ್​ನಿಂದ ಹಲವು ದೊಡ್ಡ ಬ್ಯಾನರ್​ ಚಿತ್ರಗಳಲ್ಲಿ ನಟಿಸುವ ಸುವರ್ಣಾವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ. ಬೇಬಿ ಮೂಲಕ ಟಾಲಿವುಡ್​ಗೆ ಪದಾರ್ಪಣೆ ಮಾಡಿದ ವೈಷ್ಣವಿ ಅದೃಷ್ಟ ಈಗ ಸಂಪೂರ್ಣ ಬದಲಾಗಿದೆ. ಇದಕ್ಕೆ ಇತ್ತೀಚಿನ ಬೆಳವಣಿಗೆಗಳೇ ಸಾಕ್ಷಿ.

ತೆಲುಗು ಸಿನಿಮಾ ಬೇಬಿ ಚಿತ್ರದಲ್ಲಿ ನಟಿಸಿ ಸಂಚಲನ ಮೂಡಿಸಿದ ಹೊಸ ಪ್ರತಿಭೆ ವೈಷ್ಣವಿ ಚೈತನ್ಯ. ತಮ್ಮ ಎರಡನೇ ಚಿತ್ರಲ್ಲಿ ಆಶಿಶ್ ರೆಡ್ಡಿ ಜೊತೆ ತೆರೆ ಮೇಲೆ ಕಾಣಿಸಿಕೊಂಡರು. ಆದರೆ, ಈ ಸಿನಿಮಾ ನಿರೀಕ್ಷೆಗೆ ತಕ್ಕಂತೆ ಬಾಕ್ಸ್ ಆಫೀಸ್​ನಲ್ಲಿ ಕಮಾಲ್ ಮಾಡಲಿಲ್ಲ. ಇದು ಚಿತ್ರದ ಸೋಲಿಗೆ ಕಾರಣವಾಯಿತು. ಬೇಬಿ ನಂತರದಲ್ಲಿ ಬಂದ 'ಲವ್ ಮಿ' ಚಿತ್ರ ಫ್ಲಾಪ್ ಸಾಲಿಗೆ ಸೇರಿಕೊಂಡಿತು. ಇದು ವೈಷ್ಣವಿ ಸಿನಿ ಕರಿಯರ್​ನಲ್ಲಿ ಮಿಶ್ರ ಫಲಗಳನ್ನು ನೀಡಿದೆ.

ಇದೀಗ ತಮ್ಮ ಮೂರನೇ ಚಿತ್ರದ ಮೂಲಕ ಅದೃಷ್ಟ ಪರೀಕ್ಷೆಗಿಳಿದಿರುವ ವೈಷ್ಣವಿ, ತೆಲುಗು ನಟ ಸಿದ್ಧು ಜೊನ್ನಲಗಡ್ಡ ಜತೆಗೆ ಬಹುನಿರೀಕ್ಷಿತ 'ಜ್ಯಾಕ್‌' ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ತೆರೆಕಂಡಿದ್ದು, ಉತ್ತಮ ರೀತಿಯಲ್ಲಿ ಮೂಡಿಬಂದಿದೆ. ಚಿತ್ರ ಪ್ರೇಮಿಗಳಿಂದ ಟ್ರೇಲರ್​ಗೆ ಸಖತ್ ರೆಸ್ಪಾನ್ಸ್ ಕೂಡ ವ್ಯಕ್ತವಾಗಿದೆ. ನಟಿಯ ಮೂರನೇ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಗಳು ಮೂಡಿದ್ದು, ಚಿತ್ರ ಹೇಗೆ ಕಮಾಲ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net