ನವದೆಹಲಿ: ನವೆಂಬರ್ 24-25ರಂದು ನಡೆದ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆಯಲ್ಲಿ 1.10 ಕೋಟಿ ರೂಪಾಯಿಗೆ ಬಿಕರಿಯಾಗುವ ಮೂಲಕ ಎಲ್ಲರ ಗಮನ ಸೆಳೆದಿದ್ದ 13 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ (Vaibhav Suryavanshi) ಟೂರ್ನಿಯ ಇತಿಹಾಸದಲ್ಲೇ ಕೋಟ್ಯಧಿಪತಿಯಾದ ಅತಿ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್ ಪಾಲಾದ ವೈಭವ್ ಕೋಚ್ ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನದಲ್ಲಿ ಆಡಲು ಉತ್ಸುಕರಾಗಿದ್ದು, ಈ ಬಗ್ಗೆ ಮಾತನಾಡಿದ್ಧಾರೆ.
ಎಎನ್ಐಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ವೈಭವ್ (vaibhav Suryavanshi), ನನಗೆ ಐಪಿಎಲ್ಗಿಂತ ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನದಲ್ಲಿ ಆಡಲು ಉತ್ಸುಕನಾಗಿದ್ದೇನೆ. ನಾನು ಐಪಿಎಲ್ಗಾಗಿ ವಿಶೇಷ ಯೋಜನೆಯನ್ನು ಹಾಕಿಕೊಂಡಿಲ್ಲ. ಆಡಲು ಅವಕಾಶ ಸಿಕ್ಕಿರುವುದಕ್ಕೆ ತುಂಬಾ ಸಂತಸಗೊಂಡಿದ್ದೇನೆ. ದ್ರಾವಿಡ್ ಸರ್ ಮಾರ್ಗದರ್ಶನದಲ್ಲಿ ಆಡಲು ಉತ್ಸುಕನಾಗಿದ್ದೇನೆ ಎಂದು ಯುವ ಆಟಗಾರ ವೈಭವ್ ಸೂರ್ಯವಂಶಿ ಹೇಳಿದ್ದಾರೆ.
18ನೇ ಆವೃತ್ತಿಯ ಐಪಿಎಲ್ಗೆ (IPl) ಸಂಬಂಧಿಸಿದ ಕೆಲಸಗಳು ಈಗಾಗಲೇ ಆರಂಭಗೊಂಡಿದ್ದು, ಮುನ್ನುಡಿ ಎಂಬಂತೆ ನವೆಂಬರ್ 24-25ರಂದು ನಡೆದ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಹಣದ ಹೊಳೆಯೇ ಹರಿದಿತ್ತು. ಮೊದಲಿಗೆ ಐಪಿಎಲ್ ಹರಾಜು ಪ್ರಕ್ರಿಯೆಗೆ ಬಾಲಕ ನೋಂದಾಯಿಸಿದ ಸುದ್ದಿ ಹೊರಬಿದ್ದಾಗ ಈತನನ್ನು ಯಾರು ಖರೀದಿಸುವುದಿಲ್ಲ ಎಂದು ಊಹಿಸಲಾಗಿತ್ತು. ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಹಾಗೂ ರಾಜಸ್ಥಾನ ರಾಯಲ್ಸ್ (Rajasthan Royals) ನಡುವೆ ನಡೆದ ಪೈಫೋಟಿಯಲ್ಲಿ ಈತನನ್ನು ಆರ್ಆರ್ (RR) ಫ್ರಾಂಚೈಸಿ 1.10 ಕೋಟಿ ರೂಪಾಯಿಗೆ ಬಿಡ್ ಮಾಡುವ ಮೂಲಕ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಂಡಿತು.
#WATCH | Patna | Youngest IPL Player Vaibhav Suryavanshi says, “I want to thank Bihar Cricket Association and Rakesh Kumar Tiwari sir for supporting me. More than being selected for the IPL, I am happy that I will get a chance to play under Rahul Dravid…. I want to play well,… pic.twitter.com/s1BIoW3bH3
— ANI (@ANI) December 12, 2024
ಐಪಿಎಲ್ (IPL) ಇತಿಹಾಸದಲ್ಲೇ ಮಾರಾಟವಾದ ಅತ್ಯಂತ ಕಿರಿಯ ಆಟಗಾರ ಎನ್ನುವ ಸಾಧನೆ ಮಾಡಿದ್ದಾರೆ. ರಾಜಸ್ಥಾನ ರಾಯಲ್ಸ್‌ಗೆ (Rajasthan Royals) ಮುಖ್ಯ ತರಬೇತುದಾರರಾಗಿ ಹಿಂದಿರುಗಿದ ರಾಹುಲ್ ದ್ರಾವಿಡ್ (Rahul Dravid) ವೈಭವ್ ಸೂರ್ಯವಂಶಿ (Vaibhav Suryavanshi) ಖರೀದಿಸಲು ಆಸಕ್ತಿ ತೋರಿದ್ದರಿಂದ ಅವರನ್ನು ರಾಜಸ್ಥಾನ ರಾಯಲ್ಸ್ 1.10 ಕೋಟಿ ರೂ. ಹಣ ನೀಡಿ ಖರೀದಿ ಮಾಡಿದೆ.
ಬಿಹಾರದ ಸಮಸ್ತಿಪುರದವನಾದ ಈ ಬಾಲಕ ಈಗಾಗಲೇ ಭಾರತ ಅಂಡರ್-19 ಪರ 2 ಯೂತ್ ಟೆಸ್ಟ್ ಹಾಗೂ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ತ್ರಿಶತಕ ಬಾರಿಸಿದ ಸಾಧನೆಯನ್ನೂ ಮಾಡಿದ್ದಾನೆ. ಇನ್ನೂ ಮೊದಲನೆಯ ಐಪಿಎಲ್ ಹರಾಜಿನಲ್ಲಿ (IPL Auction) ದಾಖಲೆಯ ಮೊತ್ತಕ್ಕೆ ಮಾರಾಟವಾಗುವ ಮೂಲಕ ಬಾಲಕ ಹೊಸ ಸಂಚಲನ ಸೃಷ್ಟಿಸಿದ್ದಾನೆ.
Champions Trophy ಸ್ವರೂಪದಲ್ಲಿ ಪ್ರಮುಖ ಬದಲಾವಣೆ? ಭಾರತ-ಪಾಕ್ ವಿವಾದದ ನಡುವೆಯೇ ಕೇಳಿ ಬಂತು ಹೊಸ ವಿಚಾರ