ಕಾಪು ಹೊಸ ಮಾರಿಗುಡಿಯಲ್ಲಿ ವಾಗೀಶ್ವರಿ ಪೂಜೆ ಸಂಪನ್ನ

PDB (2)
Published on

ಪಡುಬಿದ್ರಿ: ಲೋಕ ಕಲ್ಯಾಣಾರ್ಥವಾಗಿ ಮತ್ತು ಸಾನಿಧ್ಯ ವೃದ್ಧಿಗಾಗಿ ಕಾಪು ಅಮ್ಮನ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ನವದುರ್ಗಾ ಲೇಖನ ಬರೆದು ಸಮರ್ಪಿಸಿದ ಪುಸ್ತಕಗಳಿಗೆ ಶರನ್ನವರಾತ್ರಿಯ ಮಹಾನವಮಿಯಂದು ದೇವಳ ಪ್ರಧಾನ ತಂತ್ರಿ ಕೊರಂಗ್ರಪಾಡಿ ಕೆ.ಪಿ.ಕುಮಾರಗುರು ತಂತ್ರಿ ನೇತೃತ್ವದಲ್ಲಿ ಮತ್ತು ಪ್ರಧಾನ ಅರ್ಚಕ ಕಲ್ಯ ಶ್ರೀನಿವಾಸ ತಂತ್ರಿ ಸಹಯೋಗದಲ್ಲಿ ‘ಪುಸ್ತಕಸ್ಥ ವಾಗ್ದೇವತಾ ಪೂಜನಮ್’ ವಾಗೀಶ್ವರಿ ಪೂಜೆ ನಡೆಯಿತು.

ಲೇಖನದೊಂದಿಗೆ ಶಾಶ್ವತ ಸೇವೆಯನ್ನು ಸಮರ್ಪಿಸಿದ ಭಕ್ತರು ಪೂಜೆಯ ಸಂಕಲ್ಪದಲ್ಲಿ ಭಾಗಿಯಾದರು, ಸಂಕಲ್ಪ ಪ್ರಸಾದವನ್ನು ಭಕ್ತರಿಗೆ ನೀಡಲಾಯಿತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ, ಕಾರ್ಯನಿರ್ವಹಣಾಧಿಕಾರಿ ರವಿಕಿರಣ್, ಅಭಿವೃದ್ಧಿ ಸಮಿತಿ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಆರ್ಥಿಕ ಸಮಿತಿ ಪ್ರಧಾನ ಸಂಚಾಲಕ ಉದಯ ಸುಂದರ್ ಶೆಟ್ಟಿ, ನವದುರ್ಗಾ ಲೇಖನ ಯಜ್ಞ ಸಮಿತಿ ಅಧ್ಯಕ್ಷ ಕೆ.ರಘುಪತಿ ಭಟ್ ಉಡುಪಿ, ಪ್ರಧಾನ ಕಾರ್ಯದರ್ಶಿ ಯೋಗೀಶ್ ವಿ.ಶೆಟ್ಟಿ, ಧಾರ್ಮಿಕ ಸಮಿತಿ ಪ್ರಧಾನ ಸಂಚಾಲಕ ಭಗವಾನ್ ದಾಸ್ ಶೆಟ್ಟಿಗಾರ್, ನವದುರ್ಗಾ ಲೇಖನ ಯಜ್ಞ ಸಮಿತಿ ಕೋಶಾಧಿಕಾರಿ ಕೆ.ವಿಶ್ವನಾಥ್, ಮಹಿಳಾ ಪ್ರಧಾನ ಸಂಚಾಲಕಿ ಸಾವಿತ್ರಿ ಗಣೇಶ್, ಗೀತಾಂಜಲಿ ಎಂ.ಸುವರ್ಣ, ಘಂಟಾನಾದ ಸೇವಾ ಸಮಿತಿ ಮಹಿಳಾ ಪ್ರಧಾನ ಸಂಚಾಲಕಿ ಬೀನಾ ವಿ.ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಭಕ್ತರು ಕಷ್ಟ ಕಾರ್ಪಣ್ಯಗಳ ನಿವಾರಣೆಗಾಗಿ ನವದುರ್ಗಾ ಲೇಖನ ಬರೆಯುತ್ತಿದ್ದು, ಈಗಾಗಲೇ 99,999 ಪುಸ್ತಕಗಳು ಮುದ್ರಣವಾಗಿದೆ. ನಾಡಿನಾದ್ಯಂತ ಬಹಳಷ್ಟು ಮಂದಿ ಬರೆದಿದ್ದಾರೆ. ಭಕ್ತರು ಈ ಸೇವೆ ನೀಡುವ ಮೂಲಕ ತಮ್ಮ ಕಷ್ಟ ಪರಿಹರಿಸಿಕೊಳ್ಳಬಹುದು. ಈ ಸೇವೆ 99,999 ಪುಸ್ತಕಗಳವರೆಗೆ ಮುಂದುವರಿಯುತ್ತದೆ. -ಕೆ.ವಾಸುದೇವ ಶೆಟ್ಟಿ, ಅಭಿವೃದ್ಧಿ ಸಮಿತಿ ಅಧ್ಯಕ್ಷ. https://www.vijayavani.net/ishapriya-swamiji-inaugurated-the-oath-taking-ceremony-of-the-students-union-at-poornaprajna-college-udupi https://www.vijayavani.net/birthday-celebration-at-venkataramana-group-educational-institution

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net