ಉತ್ತರಪ್ರದೇಶ: ಪೋಲೀಸ್ ಅಂಕಲ್ ನಾವಿಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತೇವೆ.. ಮದುವೆಯಾಗಿ ಜೀವನಪೂರ್ತಿ ಒಟ್ಟಿಗೆ ಇರುತ್ತೇವೆ. ನಮ್ಮಿಬ್ಬರಿಗೆ ಮದುವೆ ಮಾಡಿಸಿ ಎಂದು ಉತ್ತರ ಪ್ರದೇಶದ ಇಬ್ಬರು ಅಪ್ರಾಪ್ತ ಬಾಲಕಿಯರು ಪೊಲೀಸ್ ಠಾಣೆಗೆ ಆಗಮಿಸಿ ತಮ್ಮ ಮದುವೆ ಮಾಡುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.
ನಡೆದಿದ್ದೇನು?: ದರ್ಗಾ ಹೋಗಿದ್ದ ವೇಳೆ ಹದಿಹರೆಯದ ಹುಡುಗಿಯರು ಭೇಟಿಯಾದರು. ಇಬ್ಬರೂ ಫೋನ್ ನಂಬರ್ ವಿನಿಮಯ ಮಾಡಿಕೊಂಡರು. ನಂತರ ಆಗಾಗ ಮೊಬೈಲ್‌ನಲ್ಲಿ ಮಾತನಾಡಲು ಆರಂಭಿಸಿದರು. ಅದರ ನಂತರ ಅವರು ಒಟ್ಟಿಗೆ ವಾಸಿಸಲು ನಿರ್ಧರಿಸಿದರು.
ಜೂನ್ 5 ರಂದು ಜ್ವಾಲಾಪುರ ನಿವಾಸಿಯಾಗಿರುವ 14 ಮತ್ತು 15ರ ಹರೆಯದ ಇಬ್ಬರು ಬಾಲಕಿಯರು ಕೈ ಹಿಡಿದುಕೊಂಡು ಠಾಣೆ ಪ್ರವೇಶಿಸಿದ್ದರು. ಠಾಣೆಗೆ ಬರಲು ಕಾರಣವೇನು ಎಂದು ಪೊಲೀಸರು ಕೇಳಿದಾಗ.. ಸಾರ್ ನಾವಿಬ್ಬರೂ ಪ್ರೀತಿಸುತ್ತಿದ್ದೇವೆ. ಮದುವೆಯಾಗಬೇಕೆಂದು ನಾವು ಬಯಸುತ್ತೇವೆ. ನಮ್ಮ ಮನೆಯವರು ನಮಗೆ ಮದುವೆ ಮಾಡಲು ಬಿಡುತ್ತಿಲ್ಲ. ಅದಕ್ಕಾಗಿಯೇ ನಾವು ನಿಮ್ಮ ಸಹಾಯವನ್ನು ಪಡೆಯಲು ಬಂದಿದ್ದೇವೆಂದು ಬಾಲಕಿಯರ ಹೇಳಿದ್ದಾರೆ. ಇದನ್ನು ಕೇಳಿದ ಪೊಲೀಸರು ಇದು ಸರಿಯಲ್ಲ ಎಂದು ಪೊಲೀಸರು ಮನವರಿಕೆ ಮಾಡಿಕೊಡಲು ಯತ್ನಿಸಿದರು. ಆದರೆ ಒಟ್ಟಿಗೆ ಬದುಕುತ್ತೇವೆ.. ಇಲ್ಲವೇ ಒಟ್ಟಿಗೆ ಸಾಯುತ್ತೇವೆ ಎಂದು ಹೇಳುತ್ತಲೇ ಇರುತ್ತಾರೆ. ನಂತರ ಪೊಲೀಸರು ಬಾಲಕಿಯರ ಪೋಷಕರನ್ನು ಠಾಣೆಗೆ ಕರೆದು ಬಾಲಕಿಯರಿಬ್ಬರಿಗೂ ಸಮಾಧಾನ ಹೇಳಿದ್ದಾರೆ. ಬಳಿಕ ಕುಟುಂಬ ಸದಸ್ಯರೊಂದಿಗೆ ವಾಪಸ್ ಕಳುಹಿಸಿದ್ದಾರೆ. ಆದರೆ ಇದೀಗ ಈ ವಿಷಯ ಆ ಪ್ರದೇಶದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಆಡಿದ್ದು 151 ಪಂದ್ಯ, 94 ಗೋಲು; ಕಣ್ಣೀರು ಹಾಕಿ ಆಟಕ್ಕೆ ವಿದಾಯ ಹೇಳಿದ ಫುಟ್ಬಾಲ್ ದಂತಕಥೆ ಸುನಿಲ್ ಛೆಟ್ರಿ