ಗಂಡನ ಮರ್ಮಾಂಗವನ್ನೇ ಚಾಕುವಿನಿಂದ ಚುಚ್ಚಿದ ಹೆಂಡತಿ! ಇಬ್ಬರಲ್ಲಿ ಅಕ್ರಮ ಸಂಬಂಧ ಇದ್ದಿದ್ದು ಯಾರಿಗೆ?

asd
Published on

ಲಖನೌ: ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎನ್ನುತ್ತಾರೆ. ಆದರೆ ಈ ಗಂಡ ಹೆಂಡತಿಯ ಜಗಳ ಅದೆಷ್ಟರ ಮಟ್ಟಿಗೆ ಮುಂದುವರಿದಿತ್ತೆಂದರೆ, ಹೆಂಡತಿ ಗಂಡನ ಮರ್ಮಾಂಗದ ಮೇಲೇ ಚಾಕುವಿನಿಂದ ದಾಳಿ ಮಾಡಿಬಿಟ್ಟಿದ್ದಾಳೆ.

ಉತ್ತರಪ್ರದೇಶದ ಫಥೇಪುರ ಜಿಲ್ಲೆಯ ಲಾಲೌಲಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಆ ಗಂಡ ಹೆಂಡತಿ ಮಧ್ಯೆ ಜಗಳ ನಡೆಯುತ್ತಿರುತ್ತಂತೆ. ಆದರೆ ಇತ್ತೀಚೆಗೆ ಜಗಳ ತಾರಕಕ್ಕೇರಿದೆ. ಹೆಂಡತಿ ಸಿಟ್ಟಿನಿಂದ ಗಂಡನ ಮರ್ಮಾಂಗಕ್ಕೆ ಚಾಕುವಿನಿಂದ ಚುಚ್ಚಿದ್ದಾಳೆ. ಇದೀಗ ಆತನನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ನನ್ನ ಹೆಂಡತಿಗೆ ಬೇರೊಬ್ಬ ಹುಡುಗನೊಂದಿಗೆ ಅಕ್ರಮ ಸಂಬಂಧವಿದೆ. ಅದೇ ಕಾರಣಕ್ಕೆ ಆಕೆ ನನ್ನ ಮೇಲೆ ಈ ರೀತಿ ಹಲ್ಲೆ ಮಾಡಿದ್ದಾಳೆ ಎಂದು ಹಲ್ಲೆಗೊಳಗಾಗಿರುವ ಗಂಡ ಆರೋಪಿಸಿದ್ದಾನೆ. ಆದರೆ ಹೆಂಡತಿ ಈ ಆರೋಪವನ್ನು ತಳ್ಳಿ ಹಾಕಿದ್ದಾಳೆ. ನನ್ನ ಗಂಡನಿಗೆ ಬೇರೊಂದು ಹೆಂಗಸಿನ ಜತೆ ಅಕ್ರಮ ಸಂಬಂಧವಿದೆ. ಅದೇ ವಿಚಾರಕ್ಕೆ ಜಗಳ ಆಗಿತ್ತು. ನನ್ನನ್ನು ತಪ್ಪಿತಸ್ಥೆಯಂತೆ ತೋರಿಸುವ ಸಲುವಾಗಿ ಆತ ತಾನಾಗಿ ತಾನೇ ಹಲ್ಲೆ ಮಾಡಿಕೊಂಡು ಅದನ್ನು ನನ್ನ ಮೇಲೆ ಹಾಕಿದ್ದಾನೆ ಎಂದು ಆರೋಪಿ ಸ್ಥಾನದಲ್ಲಿರುವ ಪತ್ನಿ ಹೇಳಿದ್ದಾಳೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯ ನಂತರ ನಿಜಾಂಶ ಹೊರಬರಬೇಕಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net