ಮೂಢನಂಬಿಕೆಗೆ 2ನೇ ತರಗತಿ ಬಾಲಕನ ನರಬಲಿ; ಐವರು ಆರೋಪಿಗಳ ಬಂಧನ

Untitled-design-2024-09-27T163136.250
Published on

ಲಖನೌ: ಉತ್ತರ ಪ್ರದೇಶ(Uttar Pradesh)ದ ಹತ್ರಾಸ್​​ ಜಿಲ್ಲೆಯಲ್ಲಿ ಶಿಕ್ಷಣ ಸಂಸ್ಥೆಯ ಏಳಿಗಾಗಿ 2ನೇ ತರಗತಿ ಓದುತ್ತಿದ್ದ ಬಾಲಕನನ್ನು ಹತ್ಯೆ ಮಾಡಿದರು ಘಟನೆ ಬೆಳಕಿಗೆ ಬಂದಿದೆ. ಕ್ಷುದ್ರಪೂಜೆಗೆ ನರಬಲಿ ನೀಡಿ ಬಾಲಕನ ಪ್ರಾಣ ತೆಗೆಯಲಾಗಿದೆ. ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಕೃತಾರ್ಥ್​ ಎಂಬ ಹುಡುಗನನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿದ್ದಾರೆ.

ಎರಡನೇ ತರಗತಿ ವಿದ್ಯಾರ್ಥಿ ಕೃತಾರ್ಥ್ ಕುಶ್ವಾಹನನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. ಶಾಲಾ ವ್ಯವಸ್ಥಾಪಕರ ಕಾರಿನಲ್ಲಿ ವಿದ್ಯಾರ್ಥಿಯ ಮೃತದೇಹ ಪತ್ತೆಯಾಗಿದೆ. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

Arested Accused

ಮೃತನ ತಂದೆ ಕೃಷ್ಣಕುಮಾರ್ ಅವರು ಸೆ.23 ರಂದು ಸಹಪೌ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಅದರ ಆಧಾರದ ಮೇಲೆ ಕೊಲೆ ಪ್ರಕರಣ ದಾಖಲಾಗಿತ್ತು. ಆರೋಪಿಗಳೆಲ್ಲರೂ ಬೇರೆ ಬೇರೆ ಗ್ರಾಮದ ನಿವಾಸಿಗಳು. ಬ್ಲ್ಯಾಕ್​​ಮ್ಯಾಜಿಕ್​ ಮಾಡುತ್ತಿದ್ದ ಶಾಲೆಯ ಮ್ಯಾನೇಜರ್ ದಿನೇಶ್ ಬಘೇಲ್ ಅವರ ತಂದೆ ಜಶೋಧನ್ ಸಿಂಗ್ ಈ ಘಟನೆಗೆ ಮೂಲವಾಗಿದ್ದಾರೆ. ಮಗುವನ್ನು ನರಬಲಿ ನೀಡಿದರೆ ತಮ್ಮ ಶಾಲೆ ಮತ್ತು ಕೆಲಸ ಚೆನ್ನಾಗಿ ನಡೆಯುತ್ತದೆ ಎಂದು ನಂಬಿದ್ದು, ಶಾಲೆಯ ಮ್ಯಾನೇಜರ್ ಮತ್ತು ಅವನ ತಂದೆ ಸೇರಿ ಬಾಲಕನನ್ನು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಕೃತಾರ್ಥ್​​​ಗೆ ಆರೋಗ್ಯ ಚೆನ್ನಾಗಿಲ್ಲದ ಕಾರಣ ಬಘೇಲ್ ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿರುವುದಾಗಿ ಬಾಲಕನ ಪಾಲಕರಿಗೆ ತಿಳಿಸಿದ್ದಾರೆ. ಆದರೆ ಮಗುವಿನ ಕುಟುಂಬಸ್ಥರು ಕಾರನ್ನು ಮಧ್ಯದಲ್ಲಿ ನಿಲ್ಲಿಸಿ ನೋಡಿದಾಗ ಮಗನ ಸಾವಿನ ಸುದ್ದಿ ತಿಳಿದಿದೆ. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಐವರ ಬಂಧನ:

ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲಾ ಮಾಲೀಕ ಜಸೋಧನ್ ಸಿಂಗ್, ನಿರ್ದೇಶಕ ದಿನೇಶ್ ಬಾಘೇಲ್, ಪ್ರಾಂಶುಪಾಲ ಲಕ್ಷ್ಮಣ್ ಸಿಂಗ್ ಮತ್ತು ಇತರ ಇಬ್ಬರು ಶಿಕ್ಷಕರಾದ ರಾಮಪ್ರಕಾಶ್ ಸೋಲಂಕಿ ಮತ್ತು ವೀರಪಾಲ್ ಸಿಂಗ್ ಎಂಬ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಉತ್ತರ ಪ್ರದೇಶದಿಂದ ನರಬಲಿ ನೀಡುತ್ತಿರುವ ಅಮಾನವೀಯ ಕೃತ್ಯ ಹೊರಬರುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮುನ್ನ ಮೇ ತಿಂಗಳಲ್ಲಿ ಮುಜಾಫರ್‌ನಗರದಲ್ಲಿ 4 ಮತ್ತು 7 ವರ್ಷದ ಇಬ್ಬರು ಮಕ್ಕಳನ್ನು ನರಬಲಿ ನೀಡಿದ್ದು ತಾಯಿ-ಮಗಳ ಜೋಡಿಯನ್ನು ಬಂಧಿಸಲಾಗಿತ್ತು.(ಏಜೆನ್ಸೀಸ್​)

#Delhi #Supremecourt #CJIDYChandrachud #Pakistan #

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net