

ಸಿಡ್ನಿ: ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಆಸ್ಟ್ರೇಲಿಯಾದ ಬ್ರೇಕ್ ಡ್ಯಾನ್ಸರ್ ರಾಚೆಲ್ ರೇಗನ್ ಪ್ರದರ್ಶನ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆಕೆಯನ್ನು ಟ್ರೋಲ್ ಮಾಡಿ ಮೀಮ್ಸ್ ಮತ್ತು ಕಾಮೆಂಟ್ಗಳನ್ನು ಹಾಕುತ್ತಿರುವ ನೆಟಿಜನ್ಸ್ಗೆ ಆಕೆ ನೇರವಾಗಿ ವಿಡಿಯೋ ಬಿಡುಗಡೆ ಮಾಡಿ ಉತ್ತರ ನೀಡಿದ್ದಾರೆ.
ಆಸೀಸ್ ಪರ ಬ್ರೇಕ್ ಡ್ಯಾನ್ಸ್ ಮಾಡಿದ್ದ ರಾಚೆಲ್ ಯಾವುದೇ ಪದಕ ಗೆಲ್ಲಲಿಲ್ಲ. ಆದರೆ, ಆಕೆ ಮಾಡಿದ 'ಕಾಂಗರೂ' ಸ್ಟೆಪ್ಸ್ ಮಾತ್ರ ಹೈಲೈಟ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಮೀಮ್ಗಳು, ಜೋಕ್ಗಳು ಹರಿದಾಡುತ್ತಿವೆ. ಮತ್ತೊಂದೆಡೆ, ಇದೇನು ಡ್ಯಾನ್ಸ್ ಎಂದು ಕಾಮೆಂಟ್ಗಳು ಬರುತ್ತಿದ್ದು,ಆಕೆಯನ್ನು ಉಸಿರುಗಟ್ಟಿಸುವಂತೆ ಮಾಡಿದೆ. ಇದಕ್ಕೆ ಪ್ರತಿಕ್ರಿಯಿಸಿದ ರಾಚೆಲ್, ಮಾನಸಿಕವಾಗಿ ಹಿಂಸೆಯಾಗುತ್ತಿದ್ದು, ಇಂತಹ ಕಾಮೆಂಟ್ಗಳನ್ನು ನಿಲ್ಲಿಸುವಂತೆ ಮನವಿ ಮಾಡಿದ್ದಾರೆ.
ಆಕೆ ತನ್ನನ್ನು ಟೀಕೆ ಮಾಢದಂತೆ ಮನವಿ ಮಾಡಿಕೊಂಡಿರುವ ವೀಡಿಯೋದಲ್ಲಿ, "ಹಾಯ್, ನಾನು ರಾಚೆಲ್ ರೇಗನ್, ಮೊದಲನೆಯದಾಗಿ, ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು. ನನ್ನ ಡ್ಯಾನ್ಸ್ನಿಂದ ಕೆಲವರನ್ನು ಸಂತೋಷಪಡಿಸಿದ್ದೇನೆ ಎಂದು ನಾನು ಭಾವಿಸುತ್ತೇನೆ. ನಿಮ್ಮ ಜೀವನದಲ್ಲಿ ನೀವು ಸಂತೋಷವನ್ನು ಮುಂದುವರಿಸಬೇಕೆಂದು ನಾನು ಬಯಸುತ್ತೇನೆ. ಅದೇ ಸಮಯದಲ್ಲಿ, ನಾನು ಈ ಪರಿ ದ್ವೇಷವನ್ನು ನಿರೀಕ್ಷಿಸಿರಲಿಲ್ಲ. ನಾನು ಒಲಂಪಿಕ್ಸ್ಗಾಗಿ ಕಠಿಣ ಶ್ರಮವಹಿಸಿದೆ. ಆಸ್ಟರೇಲಿಯಾ ಟೀಮ್ನಲ್ಲಿ ಹೋಗಿದ್ದಕ್ಕೆ ಸಂತಸವಾಗಿದೆ. ನನ್ನನ್ನು ಟೀಕೆ ಮಾಡುವವರು ಒಮ್ಮೆ ಒಲಿಂಪಿಕ್ ಸಮಿತಿಯ ಸ್ಟೇಟ್ ಮೆಂಟ್ ಒಮ್ಮೆ ನೋಡಬೇಕು. ನನ್ನನ್ನು ನೀವೆಲ್ಲ ಟೀಕೆ ಮಾಡುವುದರಿಂದ ಪಾಯಿಂಟ್ಗಳೇನೂ ಬರಲ್ಲ. ಆದರೆ ವ್ಯಕ್ತಿಗತ ಟೀಕೆಗಳನ್ನು ಮಾಡಿ ಖಾಸಗಿತನಕ್ಕೆ ಧಕ್ಕೆ ತರಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.