ದೃಷ್ಟಿ ಹೀನರಿಗೆ ನೋಟು ಗುರುತಿಸಲು ಸಹಕಾರಿಯಾಗುವಂತಹ ಆ್ಯಪ್​ ಬಿಡುಗಡೆ ಮಾಡಿದ ಆರ್​ಬಿಐ

rbi
Published on

ನವದೆಹಲಿ: ದೃಷ್ಟಿ ಹೀನರಿಗೆ, ದೃಷ್ಟಿ ದೋಷ ಇರುವವರಿಗೆ ನೋಟುಗಳನ್ನು ಗುರುತಿಸಲು ಸಾಧ್ಯವಾಗುವಂತಹ ಮೊಬೈಲ್​ ಆ್ಯಪ್​ವೊಂದನ್ನು ಆರ್​ಬಿಐ ಇಂದು ಬಿಡುಗಡೆ ಮಾಡಿದೆ.

ಅಂದರೆ ದೃಷ್ಟಿ ಸರಿಯಾಗಿ ಇರದೆ ಇರುವವರು, ಭಾಗಶಃ ಕುರುಡು ಸಮಸ್ಯೆಯಿಂದ ಬಳಲುತ್ತಿರುವವರು ಈ ಆ್ಯಪ್​ನಿಂದ ಸುಲಭವಾಗಿ ನೋಟುಗಳನ್ನು ಗುರುತಿಸಬಹುದು.

ಒಂದು ಸಲ ಈ ಅಪ್ಲಿಕೇಶ್​ನ್ನು ಮೊಬೈಲ್​ನಲ್ಲಿ ಡೌನ್​ಲೋಡ್ ಮಾಡಿಕೊಂಡರೆ ಆಫ್​ಲೈನ್​ನಲ್ಲಿ ಕೂಡ ಇದು ಕೆಲಸ ಮಾಡುತ್ತದೆ ಎಂದು ಆರ್​ಬಿಐ ತಿಳಿಸಿದೆ.

ಈ ಆ್ಯಪ್​ ಹೆಸರು ಎಂಎಎನ್​ಐ (MANI-Mobile Aided Note Identifier) -ಮೊಬೈಲ್​ ಸಹಾಯದಿಂದ ನೋಟುಗಳನ್ನು ಗುರುತಿಸುವುದು ಎಂದು ಇದರ ಅರ್ಥ. ಈ ಆ್ಯಪ್​ನಲ್ಲಿರುವ ಕ್ಯಾಮರಾ ನೋಟನ್ನು ಸ್ಕ್ಯಾನ್​ ಮಾಡುತ್ತದೆ. ಬಳಿಕ ಅದು ಎಷ್ಟರ ಬೆಲೆಯ ನೋಟು ಎಂದು ಆಡಿಯೋದ ಮೂಲಕ ಹೇಳುತ್ತದೆ. ಈ ಆಡಿಯೋ ಇಂಗ್ಲಿಷ್​ ಅಥವಾ ಹಿಂದಿಯಲ್ಲಿ ಇರಲಿದೆ. ಇದರಿಂದ ದೃಷ್ಟಿದೋಷ ಇರುವವರಿಗೆ ತುಂಬ ಅನುಕೂಲ ಆಗಲಿದೆ ಎಂದು ಬ್ಯಾಂಕ್ ಮಾಹಿತಿ ನೀಡಿದೆ.

MANI ಆ್ಯಪ್​ ಆಂಡ್ರಾಯ್ಡ್​ ಮತ್ತು iOs ಆಪರೇಟಿಂಗ್​ ಸಿಸ್ಟಂಗಳೆರಡರಲ್ಲೂ ಲಭ್ಯವಿದೆ.

ಇಂದು ಆರ್​ಬಿಐ ಗವರ್ನರ್​ ಶಕ್ತಿಕಾಂತ್​ ದಾಸ್​ ಆ್ಯಪ್​ ಬಿಡುಗಡೆ ಮಾಡಿದ್ದಾರೆ. ( ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net