'ಥ್ಯಾಂಕ್ಯೂ ಸರ್​' ಎಂದಿದ್ದಕ್ಕೆ ವಿಮಾನದಿಂದಲೇ ಕೆಳಗಿಳಿಸಿದ ಸಿಬ್ಬಂದಿ!

us lady
Published on

ವಾಷಿಂಗ್ಟನ್​: ವಿಮಾನ ಟೇಕ್​ಅಪ್​ಗೆ ಸಿದ್ಧವಾಗಿದ್ದ ಸಂದರ್ಭದಲ್ಲಿ ಮಹಿಳಾ ಪ್ರಯಾಣಿಕರೊಬ್ಬರಿಗೆ ಕಹಿ ಅನುಭವವಾಗಿದೆ. ಮಹಿಳಾ ಸಿಬ್ಬಂದಿಗೆ ‘ಸರ್’ ಎಂದಿದ್ದಕ್ಕೆ ಆಕೆಯನ್ನು ವಿಮಾನದಿಂದ ಕೆಳಗಿಳಿಸಲಾಗಿದೆ. ಯುನೈಟೆಡ್ ಏರ್‌ಲೈನ್ಸ್ ವಿಮಾನದಲ್ಲಿ ಈ ಘಟನೆ ನಡೆದಿದೆ.

ಸ್ಯಾನ್ ಫ್ರಾನ್ಸಿಸ್ಕೋದಿಂದ ಅಮೆರಿಕಾದ ಆಸ್ಟಿನ್ ಗೆ ವಿಮಾನ ಟೇಕ್ ಆಫ್ ಆಗಲು ಸಿದ್ಧವಾಗಿದೆ. ಟೆಕ್ಸಾಸ್‌ನ ಜೆನ್ನಾ ಲಾಂಗೋರಿಯಾ ತನ್ನ ತಾಯಿ ಮತ್ತು 16 ತಿಂಗಳ ಮಗುವಿನೊಂದಿಗೆ ವಿಮಾನ ಹತ್ತುವಾಗ ಮಹಿಳಾ ಆರೋಗ್ಯ ತಜ್ಞರು, ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡುವಾಗ ಬಾಯಿತಪ್ಪಿ'ಧನ್ಯವಾದಗಳು ಸರ್' ಎಂದು ಬಳಸಿದ್ದಾರೆ. ಬಳಿಕ ಸಾರಿ ಎಂದು ಕ್ಷಮೆಯಾಚಿಸಿದ್ದಾರೆ. ಆದರೆ ಆಕೆಯನ್ನು ಪುರುಷ ಎಂದು ತಪ್ಪಾಗಿ ಗ್ರಹಿಸಿದ ಸಿಬ್ಬಂದಿ ಇದರಿಂದ ಕೋಪಗೊಂಡು ಜೆನ್ನಾ ಮತ್ತು ಆಕೆಯ ತಾಯಿ, ಮಗುವನ್ನು ವಿಮಾನದಿಂದ ಕೆಳಗೆ ಇಳಿಸಿದ್ದಾರೆ.

ಅದೇ ಸಮಯದಲ್ಲಿ, ಜೆನ್ನಾ ಸಹಾಯಕ್ಕಾಗಿ ಇನ್ನೊಬ್ಬ ಪುರುಷ ಫ್ಲೈಟ್ ಅಟೆಂಡೆಂಟ್ ಅನ್ನು ಕೇಳಿಕೊಂಡಿದ್ದಾರೆ. ಆದರೆ ಆತನೂ ತನ್ನ ತಾಯಿ ಮತ್ತು ಮಗನನ್ನು ಗೇಟ್ ಬಳಿ ನಿಲ್ಲಿಸಿದ್ದಾಗಿ ಜೆನ್ನಾ ಎಕ್ಸ್​ ಖಾತೆಯಲ್ಲಿ ಹಾಕಿರುವ ಪೋಸ್ಟ್ ನಲ್ಲಿ ದೂರಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net