ತನ್ನನ್ನು ತಾನೇ ವಿವಾಹವಾದ 77ರ ವೃದ್ಧೆ..!

marriage
Published on

ಓಹಿಯೋ: ಇಂದಿನ ಆಧುನಿಕ ಯುಗದಲ್ಲಿ ಮದುವೆ ಎಂಬುದು ಜಗತ್ತಿನಾದ್ಯಂತ ಚರ್ಚೆಯನ್ನು ಹುಟ್ಟು ಹಾಕಿದೆ. ಕೆಲವೆಡೆ ಸಲಿಂಗ ವಿವಾಹದ ಕುರಿತಾಗಿ ಚರ್ಚೆಗಳು ನಡೆಯುತ್ತಿದ್ದರೆ. ಇನ್ನೂ ಕೆಲವೆಡೆ ಹಲವರು ತಮ್ಮ ಕಾರು, ಮೊಬೈಲ್​, ಗೊಂಬೆ ಹಾಗೂ ಇನ್ನೀತರ ವಸ್ತುಗಳ ಜತೆಗೆ ವಿವಾಹವಾಗಿದ್ದಾರೆ.

ಆದರೆ ಇಲ್ಲೊಬ್ಬ ಮಹಿಳೆಯ ವಿವಾಹವು ಎಲ್ಲರ ಹುಬ್ಬೆರಿಸುವಂತೆ ಮಾಡಿದೆ. ಯುನೈಟೆಡ್ ಸ್ಟೇಟ್ಸ್‌ನಲ್ಲಿ ಫಿಡೆಲಿ ಎಂಬುವಳು ತನ್ನನ್ನು ತಾನೇ ವಿವಾಹವಾಗಿ ಅಚ್ಚರಿಗೆ ಕಾರಣವಾಗಿದ್ದಾಳೆ. ಇದಕ್ಕಿಂತ ಆಶ್ಚರ್ಯಕರ ಸಂಗತಿ ಎಂದರೆ ಆಕೆಗೆ 77 ವರ್ಷ ವಯಸ್ಸಾಗಿದೆ. ಈ ಮದುವೆಯಲ್ಲಿ ಆಕೆಯ ಬಂಧುಗಳು, ನೆರೆಹೊರೆಯವರು, ಸ್ನೇಹಿತರು ನೆರೆದಿದ್ದರು.

ಫಿಡೆಲಿಯ ಮಗಳು ಡೊನ್ಹಾ ಪೆನ್ನಿಂಗ್ಟನ್ ಕೂಡ, ತನ್ನ ತಾಯಿಯ ಏಕವ್ಯಕ್ತಿ ವಿವಾಹವನ್ನು ಇಷ್ಟಪಟ್ಟಿದ್ದು, ಆಕೆಯೇ ಸ್ವತಃ ನಿಂತು ಎಲ್ಲ ಉಸ್ತುವಾರಿಯನ್ನು ನೋಡಿಕೊಂಡಿದ್ದಾಳೆ. ಅಲ್ಲದೇ, ತನ್ನ ಜೀವಿತಾವಧಿಯನ್ನು ಈ ಮೊದಲು ಇತರರಿಗೆ ಮೀಸಲಿಟ್ಟಿದೆ. ಸದ್ಯ ತನ್ನ ಸ್ವಂತ ಕನಸುಗಳನ್ನು ಅನುಸರಿಸುವತ್ತ ಗಮನಹರಿಸುವ ಸಲುವಾಗಿ ತನ್ನನ್ನು ತಾನೇ ವಿವಾಹವಾಗಿದ್ದಾಗಿ ಫಿಡೆಲಿ ತಿಳಿಸಿದ್ದಾಳೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net