VIDEO| ಡೇಟಿಂಗ್​ ಮಾಡಲೆಂದೇ ಕೋಟಿ ರೂಪಾಯಿ ಖರ್ಚು ಮಾಡಿದ ಭೂಪ

US MAN
Published on

ಯುನೈಟೆಡ್​ ಸ್ಟೇಟ್ಸ್​​: ತಾನು ಕುಳ್ಳಗೆ ಇದ್ದೇನೆಂಬ ಕಾರಣಕ್ಕೆ ವ್ಯಕ್ತಿಯೊಬ್ಬ ಉದ್ದ ಆಗಲು 1.35 ಕೋಟಿ ರೂಪಾಯಿಯನ್ನು ಖರ್ಚು ಮಾಡಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿರುವ ಘಟನೆ ಯುನೈಟೆಡ್​ ಸ್ಟೇಟ್ಸ್​ನಲ್ಲಿ ನಡೆದಿದೆ.

ತಾನು ಕುಳ್ಳಗಿದ್ದೇನೆ ಎಂಬ ಕಾರಣಕ್ಕೆ ಯಾರು ತನ್ನ ಜೊತೆ ಡೇಟಿಂಗ್​ಗೆ ಬರುತ್ತಿರಲಿಲ್ಲ ಎಂದು ಮೊಸೆಸ್​ ಗಿಬ್ಸನ್​(41) ಎಂಬ ವ್ಯಕ್ತಿಯೂ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಚಿಕಿತ್ಸೆ ಪಡೆದವರು.

ವಿವಿಧ ಪ್ರಯೋಗ

ನಾನು ಎತ್ತರವಾಗಲು ವಿವಿಧ ರೀತಿಯ ಪ್ರಯೋಗಗಳನ್ನು ಮಾಡಿದೆ ಮತ್ತು ನಾಣು ಹೆಚ್ಚಾಗಿ ಈ ವಿಚಾರದ ಬಗ್ಗೆ ಚಿಂತಿಸುತ್ತಿದೆ. ನಾನು ಕುಳ್ಳಗಿದ್ದ ಕಾರಣ ಹುಡುಗಿಯರ ಜೊತೆ ಡೇಟಿಂಗ್​ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಕೆಲವೊಮ್ಮೆ ನಾನು ಎತ್ತರವಾಗಿ ಕಾಣಲು ಶೂ ಒಳಗೆ ವಸ್ತುಗಳನ್ನು ಇಡುತ್ತಿದ್ದೆ.

ನಾನು ಎತ್ತರ ಆಗುತ್ತೇನಂಬ ನಂಬಿಕೆಯೊಂದಿಗೆ ಹಲವು ಮಾತ್ರಗಳನ್ನು ಸೇವಿಸಿದೆ. ಆಧ್ಯಾತ್ಮಿಕ ಗುರುಗಳನ್ನು ಸಂಪರ್ಕಿಸಿದೆ. ಆದರೆ, ಇದ್ಯಾವುದು ಪ್ರಯೋಜನಕ್ಕೆ ಬರಲಿಲ್ಲ ಕೊನೆಗೆ ನನಗೆ ಈ ರೀತಿ ಮಾಡಬೇಕಾಯಿತು ಎಂದು ಹೇಳಿದ್ದಾರೆ.

ಉದ್ದ ಆಗಲು ಶಸ್ತ್ರಚಿಕಿತ್ಸೆ

ತಾನು ಉದ್ದ ಆಗಬೇಕೆಂಬ ಕಾರಣಕ್ಕೆ ಮೊಸೆಸ್​ ದುಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಲು ಮುಂದಾದರು ಇದಕ್ಕಾಗಿ ಅವರು ಸಾಫ್ಟವೇರ್​ ಉದ್ಯೋಗದೊಂದಿಗೆ ಉಬರ್​ ಕ್ಯಾಬ್​ ಚಾಲನೆ ಮಾಡುತ್ತಿದ್ದರು ಎಂದು ಹೇಳಿದ್ಧಾರೆ.

2016ರಲ್ಲಿ ಮೊದಲ ಬಾರಿಗೆ ಶಸ್ತ್ರಚಿಕಿತ್ಸೆಗ ಒಳಗಾದಾಗ ಅವರ 3 ಇಂಚ್​ನಷ್ಟು ಎತ್ತರವಾಗಿದ್ದರು. ನಂತರ ಎರಡನೇ ಬಾರಿ ಚಿಕಿತ್ಸೆಗೆ ಒಳಪಟ್ಟ ಸಂದರ್ಭದಲ್ಲಿ 2.5 ಇಂಚ್​ ಎತ್ತರವಾಗಿದ್ದು ತನಗೆ ಖುಷಿ ನೀಡಿದೆ ಎಂದು ಮೊಸೆಸ್​ ತಿಳಿಸಿದ್ಧಾರೆ.

ಶಸ್ತ್ರಚಿಕಿತ್ಸೆಯ ನಂತರ ನಾನು ಹುಡಿಗಿಯರೊಂದಿಗೆ ಈಗ ಆರಾಮಾಗಿ ಮಾತನಾಡುತ್ತೇನೆ ಮತ್ತು ಈಗ ನನಗೆ ಗರ್ಲ್​ಫ್ರೆಂಡ್​ ಕೂಡ ಇದ್ದಾಳೆ ಎಂದು ಮೊಸೆಸ್​ ಸಂತಸ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net