ನಟಿ ಊರ್ವಶಿ ರೌಟೇಲಾಗೆ ಇಮೇಲ್ ಕಳುಹಿಸಿದ ಕಳ್ಳ…ಐಫೋನ್ ಹಿಂದಿರುಗಿಸುವುದಕ್ಕೆ ಪ್ರತಿಯಾಗಿ ಇಟ್ಟ ಬೇಡಿಕೆಯೇನು ಗೊತ್ತಾ?

Urvashi
Published on

ಮುಂಬೈ: ಕಳೆದ ಶನಿವಾರ, ಅಂದರೆ ಅಕ್ಟೋಬರ್ 14 ರಂದು ಪಾಕಿಸ್ತಾನ ಮತ್ತು ಭಾರತದ ನಡುವೆ ಕಿಕೆಟ್ ​​​ಪಂದ್ಯ ನಡೆಯಿತು. ಇದರಲ್ಲಿ ಭಾರತ ಗೆಲುವು ಸಾಧಿಸಿತು. ಕಳೆದ ಶನಿವಾರ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆದಿತ್ತು. ಈ ಪಂದ್ಯ ವೀಕ್ಷಿಸಲು ಲಕ್ಷಾಂತರ ಜನರು ಆಗಮಿಸಿದ್ದರು. ಇವರಲ್ಲಿ ನಟಿ ಊರ್ವಶಿ ರೌಟೇಲಾ ಕೂಡ ಒಬ್ಬರು.

ಈ ಸಮಯದಲ್ಲಿ, ಅವರು ಭಾರತವನ್ನು ಹುರುಪಿನಿಂದ ಹುರಿದುಂಬಿಸಿದರು. ಆದರೆ ಪಂದ್ಯದ ಅಂತ್ಯದ ವೇಳೆಗೆ, ನಟಿಯ ಮುಖದಲ್ಲಿನ ಸಂತೋಷವು ದುಃಖಕ್ಕೆ ತಿರುಗಿತು. ಏಕೆಂದರೆ ಅವರ 24 ಕ್ಯಾರೆಟ್ ಚಿನ್ನದ ಐಫೋನ್ ಕಾಣೆಯಾಗಿತ್ತು. ಈ ಬಗ್ಗೆ ಸ್ವತಃ ನಟಿಯೇ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದರು. ಈಗ ಐದು ದಿನಗಳ ನಂತರ, ಊರ್ವಶಿ ರೌಟೇಲಾ ತನ್ನ ಫೋನ್‌ಗೆ ಸಂಬಂಧಿಸಿದ ಅಪ್​​​ಡೇಟ್​​ ಹಂಚಿಕೊಂಡಿದ್ದಾರೆ.

ಕಳ್ಳನಿಂದ ಇ-ಮೇಲ್ ಸ್ವೀಕರಿಸಿದ ಊರ್ವಶಿ
ಕಳೆದುಹೋದ ಫೋನ್ ಬಗ್ಗೆ ಊರ್ವಶಿ ರೌಟೇಲಾ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದು, ಫೋನ್ ಕದ್ದವರಿಂದ ನನಗೆ ಇಮೇಲ್ ಬಂದಿದೆ. ಫೋನ್ ಕದ್ದವರು ಬೇಡಿಕೆ ಇಟ್ಟಿದ್ದು, ತಮ್ಮ ಬೇಡಿಕೆ ಈಡೇರಿಸಿದರೆ ವಾಪಸ್ ಕೊಡುವುದಾಗಿ ಹೇಳಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಊರ್ವಶಿ ರೌಟೇಲಾ ಅವರು ಗ್ರೋವ್ ಟ್ರೇಡರ್ಸ್ ಹೆಸರಿನಲ್ಲಿ ಮೇಲ್ ಅನ್ನು ಸ್ವೀಕರಿಸಿದ್ದಾರೆ, ಅದರ ಸ್ಕ್ರೀನ್‌ಶಾಟ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.. ಇಮೇಲ್​​​​ನಲ್ಲಿ "ನಿಮ್ಮ ಫೋನ್ ನನ್ನ ಬಳಿ ಇದೆ, ನೀವು ಅದನ್ನು ಮರಳಿ ಪಡೆಯಲು ಬಯಸಿದರೆ ನನಗೆ ಸಹಾಯ ಮಾಡಬೇಕು. ನನ್ನ ಸಹೋದರನಿಗೆ ಕ್ಯಾನ್ಸರ್ ಇದೆ. ಅವನಿಗೆ ಚಿಕಿತ್ಸೆಗೆ ಹಣ ಬೇಕು'' ಎಂದು ಕೇಳಿದ್ದಾರೆ. ಅದಕ್ಕೆ ಊರ್ವಶಿ ಈ ಪೋಸ್ಟ್‌ನಲ್ಲಿ ಥಂಪ್ಸ್-ಅಪ್ ಸೈನ್ ಮಾಡಿದ್ದಾರೆ. ಇದು ಊರ್ವಶಿ ಅವರಿಗೆ ಸಹಾಯ ಮಾಡಬಹುದು ಎಂಬುದನ್ನು ತೋರಿಸುತ್ತದೆ.

ಐಫೋನ್ 24 ಕ್ಯಾರೆಟ್ ಚಿನ್ನದ್ದಾಗಿತ್ತು!
ಊರ್ವಶಿ ರೌಟೇಲಾ ಅವರ ಈ ಐಫೋನ್ ತುಂಬಾ ವಿಶೇಷವಾಗಿತ್ತು. ಇದು 24 ಕ್ಯಾರೆಟ್ ಚಿನ್ನದ ಐಫೋನ್ ಆಗಿತ್ತು. ಆಕೆ ತನ್ನ ಫೋನ್‌ನೊಂದಿಗೆ ಸೆಲ್ಫಿಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಕೆಲಸದ ಬಗ್ಗೆ ಮಾತನಾಡುವುದಾದರೆ ಊರ್ವಶಿ ಬಿಗ್ ಬಾಸ್ ಒಟಿಟಿ 2 ವಿಜೇತ ಎಲ್ವಿಶ್ ಯಾದವ್ ಅವರೊಂದಿಗೆ ಮ್ಯೂಸಿಕ್ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ನಟಿ ಶೀಘ್ರದಲ್ಲೇ ಅನೇಕ ದೊಡ್ಡ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net