

ಮುಂಬೈ: ಭಾರತ ಮತ್ತು ಪಾಕ್ ನಡುವಿನ ಪಂದ್ಯ ವೀಕ್ಷಿಸಲು ಬಾಲಿವುಡ್ ನಟಿ ಊರ್ವಶಿ ರೌಟೇಲಾ ಅವರು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂಗೆ ಆಗಮನಿಸಿದ್ದರು. ಈ ವೇಳೆ ನಟಿ ದುಬಾರಿ ಬೆಲೆ ಬಾಳುವ ಮೊಬೈಲ್ ಕಳೆದುಕೊಂಡಿರುವುದಾಗಿ ಹೇಳಿಕೊಂಡಿದ್ದರು. ಆದರೆ ಇದೀಗ ಈ ಮೊಬೈಲ್ ವಾಪಸ್ ತಂದು ಕೊಟ್ಟರೆ ಭಾರಿ ಬಹುಮಾನ ಕೊಡುವುದಾಗಿ ನಟಿ ಹೇಳಿದ್ದಾರೆ.
ಅಕ್ಟೋಬರ್ 14ರಂದು ನಡೆದ ಭಾರತ- ಪಾಕಿಸ್ತಾನ ಕ್ರಿಕೆಟ್ (Cricket) ಪಂದ್ಯಾವಳಿ ನೋಡಲು ಹಲವು ಜನಪ್ರಿಯ ಸೆಲೆಬ್ರಿಟಿಗಳು ಆಗಮಿಸಿದ್ದರು. ಈ ವೇಳೆ 24 ಕ್ಯಾರೆಟ್ ಚಿನ್ನದ ಐ ಫೋನ್ ಕಳೆದು ಹೋಗಿದೆ ಎಂದು ಐರಾವತ ನಟಿ ಸೋಶಿಯಲ್ ಮೀಡಿಯಾ ಮೂಲಕವಾಗಿ ಅಳಲು ತೋಡಿಕೊಂಡಿದ್ದರು.
ನನ್ನ 24 ಕ್ಯಾರೆಟ್ ಚಿನ್ನದ ಐ ಫೋನ್ ಕಳೆದು ಹೋಗಿದೆ. ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಕಳೆದು ಹೋಗಿದೆ. ಯಾರಿಗಾದರೂ ಸಿಕ್ಕಿದ್ದರೆ, ದಯವಿಟ್ಟು ತಂದು ಕೊಡಿ, ಮೊಬೈಲ್ ನಿಮಗೆ ಸಿಕ್ಕಿದ್ದರೆ ನನ್ನ ಸಂಪರ್ಕಿಸಿ ಎಂದು ಮನವಿ ಮಾಡಿ ಟ್ವೀಟ್ ಮಾಡಿದ್ದರು. ಊರ್ವಶಿ ರೌಟೆಲ್ಲಾರ ಈ ಪೋಸ್ಟ್ ಅನ್ನು ಹಲವರು ಟ್ರೋಲ್ ಮಾಡಿದ್ದಾರೆ. ಆದರೆ ನಟಿ ಮಾತ್ರ ಈ ಮೊಬೈಲ್ ವಾಪಸ್ ಪಡೆಯುವ ಉದ್ದೇಶದಿಂದ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ.
ಮೊಬೈಲ್ ತಂದುಕೊಟ್ಟವರಿಗೆ ಬಹುಮಾನ ನೀಡುವುದಾಗಿ ಹೇಳಿರುವ ಊರ್ವಶಿ, ಆ ಬಹುಮಾನ ಯಾವುದು ಎನ್ನುವುದನ್ನು ತಿಳಿಸಿಲ್ಲ. ಮೊಬೈಲ್ ಕಳೆದುಕೊಂಡಿರುವ ಕುರಿತು ಪೊಲೀಸರು ಕೂಡ ಕಾಳಜಿ ವಹಿಸಿದ್ದು, ಊರ್ವಶಿ ಮೊಬೈಲ್ ಬೇಗ ಸಿಗಲಿ ಎಂದು ಹಾರೈಸಿದ್ದಾರೆ.