ಜಿಲ್ಲೆಯಲ್ಲಿ ಯೂರಿಯಾ ಗೊಬ್ಬರಕ್ಕೆ ಪರದಾಟ *ಸಹಕಾರಿ ಸಂಘದಿಂದ ಕಾಳಸಂತೆಯಲ್ಲಿ ಮಾರಾಟ? * 4 ಅಂಗಡಿಗಳ ಪರವಾನಿಗೆ ರದ್ದು

raichur
raichur
Published on

ರಾಯಚೂರು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ರಾಸಾಯನಿಕ ಗೊಬ್ಬರದ ಕೊರತೆ ಹೆಚ್ಚಳವಾದರೆ ಜಿಲ್ಲೆಯಲ್ಲಿ ್ಲ ಯೂರಿಯಾ ಗೊಬ್ಬರ ಕೊರತೆಯಿಂದ ರೈತರು ಪರದಾಡುತ್ತಿದ್ದಾರೆ. ಸರ್ಕಾರದಿಂದ ಸಹಕಾರಿ ಸಂಘಗಳ ಮೂಲಕ ರೈತರಿಗೆ ನ್ಯಾಯಯೂತವಾಗಿ ಗೊಬ್ಬರ ವಿತರಿಸಬೇಕಿದ್ದ ಸಹಕಾರ ಸಂಘ ಕಾಳಸಂತೆಯಲ್ಲಿ ಗೊಬ್ಬರ ಮಾರಾಟ ಮಾಡುವುದು ಒಂದು ಕಡೆಯದಾರೆ, ಖಾಸಗಿ ಅಂಗಡಿಯಲ್ಲಿ ದುಪಟ್ಟು ದರಕ್ಕೆ ಮಾರಾಟ ಮಾಡಿ ರೈತರನ್ನು ವಂಚನೆ ಮಾಡುತ್ತಿರುವುದರಿಂದ ಯಾರನ್ನು ನಂಬಬೇಕು. ಯಾರನ್ನು ಬೀಡಬೇಕು ಎನ್ನುವ ಸ್ಥಿತಿ ಎದುರಾಗಿದೆ.

ಜಿಲ್ಲೆಯಲ್ಲಿ ಇತ್ತಿಚ್ಚಿಗೆ ಉತ್ತಮ ಮಳೆಯಾಗಿರುವುದರಿಂದ ರೈತರು ಬೆಳೆಗಳಿಗೆ ರಾಸಾಯನಿಕ ಗೊಬ್ಬರ ಹಾಕಲು ಮುಂದಾಗಿರುವುದರಿಂದ ಗೊಬ್ಬರ ಅದರಲ್ಲೂ ಯೂರಿಯಾ ಬೇಡಿಕೆ ಹೆಚ್ಚಾಗಿದೆ. ಗೊಬ್ಬರ ಸಿಗದೆ ರೈತರು ಹಲವೆಡೆ ಪರದಾಟ ನಡೆಸಿದ್ದಾರೆ . ಇಂತಹದ್ದರಲ್ಲಿ ಜಿಲ್ಲೆಯ ಸಿರವಾರ ತಾಲೂಕಿನ ಕಲ್ಲೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ, ಕಾರ್ಯದರ್ಶಿ ಯೂರಿಯಾ ಗೊಬ್ಬರ ಗೋಲ್‌ಮಾಲ್ ಮಾಡಿದ್ದು, ಜೂನ್ 19 ರಿಂದ ಜು.4 ರವರೆಗೆ ಒಟ್ಟು 79 ಟನ್ ( ಸುಮಾರು 2 ಸಾವಿರ ಚೀಲ) ಗೊಬ್ಬರವನ್ನು ಆರ್‌ಎಪಿಎಂಸಿ ಯಿಂದ ಪಡೆದು ಸಂಘದ ಗೋದಾಮಿಗೆ ಸಾಗಿಸದೆ ಕಾಳಸಂತೆಯಲ್ಲಿ ಮಾರಾಟ ಮಾಡಿರುವುದು ಬಯಲಾಗಿದೆ.

ಕಾಳ ಸಂತೆಯಲ್ಲಿ ಮಾರಾಟ?

ರೈತರು ಗೊಬ್ಬರ ಸಿಗದೆ ಆರ್‌ಎಪಿಎಂಸಿಯಲ್ಲಿ ವಿಚಾರಿಸಿದಾಗ ಈ ಅವ್ಯವಹಾರ ಬೆಳಕಿಗೆ ಬಂದಿದ್ದು, ಸಂಘದ ಅಧ್ಯಕ್ಷ ಗುಂಡಪ್ಪಗೌಡ, ಕಾರ್ಯದರ್ಶಿ ಶಿವನಗೌಡ ವಿರುದ್ಧ ರೈತರು ಹಾಗೂ ಸಂಘದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಡಳಿತ ಮಂಡಳಿಯನ್ನ ಸೂಪರ್‌ಸೀಡ್ ಮಾಡಿ ಆಡಳಿತಾಧಿಕಾರಿಯನ್ನು ನೇಮಿಸುವಂತೆ ರೈತರು ಹಾಗೂ ಸಂಘದ ಸದಸ್ಯರು ಹೋರಾಟ ನಡೆಸಿದ್ದು, ಸುಮಾರು 200 ರೈತರಿಗೆ ಸಿಗಬೇಕಿದ್ದ ಗೊಬ್ಬರ ಸಂಘದ ಸದಸ್ಯರಿಗೂ ಮಾಹಿತಿಯಿಲ್ಲದೆ ಕಾಳ ಸಂತೆಯಲ್ಲಿ ಮಾರಾಟವಾಗಿದೆ ಅಂತ ಆಕ್ರೋಶ ವ್ಯಕ್ತವಾಗಿದೆ.

ರೈತರು ಹಾಗೂ ಸಂಘದ ಇತರೆ ಸದಸ್ಯರ ದೂರಿನ ಮೇರೆಗೆ ಮಾನ್ವಿ ಸಹಾಯಕ ಕೃಷಿ ನಿರ್ದೇಶಕರು ಸಂಘದ ಗೋದಾಮಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಗೋದಾಮಿನಲ್ಲಿ ದಾಸ್ತಾನು ಇಲ್ಲಾ, ಆರ್‌ಎಪಿಎಂಸಿಯಿಂದ ಪಡೆದ ಗೊಬ್ಬರ ಮಾರಾಟದ ದಾಖಲೆಗಳು ಇಲ್ಲ. ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದ್ದು ರಸಗೊಬ್ಬರ ಮಾರಾಟ ಪರವಾನಗಿ ರದ್ದು ಪಡಿಸುವ ಬಗ್ಗೆ ಕೃಷಿ ಇಲಾಖೆಯಿಂದ ನೋಟೀಸ್ ಜಾರಿ ಮಾಡಲಾಗಿದೆ.

ಜಿಲ್ಲೆಯಲ್ಲಿ ಎಷ್ಟು ರಸಗೊಬ್ಬರ ?

2025-26 ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ರಾಯಚೂರು ಹಾಗೂ ಸಹಕಾರ ಸಂಘಗಳಲ್ಲಿ 11250 ಮೆಟ್ರಿನ್ ಟನ್ ಹಾಗೂ ಖಾಸಗಿ ಮಾರಾಟಗಾರರಲ್ಲಿ 97052 ಮೆಟ್ರಿಕ್ ಟನ ಸೇರಿದಂತೆ ಒಟ್ಟು 1,08,302 ಮೆಟ್ರಿಕ್ ಟನ್ ರಸಗೊಬ್ಬರ ಇಲ್ಲಿಯವರೆಗೆ ಪೂರೈಸಲಾಗಿದೆ. ಕಾಪು ದಾಸ್ತಾನು 1,888.29 ಮೆಟ್ರಿಕ್ ಟನ್ ಹಾಗೂ ಖಾಸಗಿ ಮಳಿಗೆಗಳಲ್ಲಿ 53,127.90 ಮೆಟ್ರಿಕ್ ಟನ್ ಸೇರಿ ಒಟ್ಟು ಜಿಲ್ಲೆಯಲ್ಲಿ 5,5016.237 ಟನ್ ನಷ್ಟು ದಾಸ್ತಾನು ಸಧ್ಯ ಲಭ್ಯವಿದೆಂದು ಕೃಷಿ ಇಲಾಖೆ ಮಾಹಿತಿ ನೀಡಲಾಗಿದ್ದು, ಆದರೆ ಸರಿಯಾಗಿ ಗೊಬ್ಬರ ದೊರೆಯುತ್ತಿಲ್ಲವೆಂದು ರೈತರು ಆರೋಪ ಮಾಡುತ್ತಿದ್ದಾರೆ.

ಕಾಳಸಂತೆಯಲ್ಲಿ ಸಹಕಾರಿ ಸಂಘದಿಂದ ಪಡೆದು ಮಾರಾಟ ಮಾಡಿದ ಅಂಗಡಿ ಹಾಗೂ ಖಾಸಗಿ ರಸಗೊಬ್ಬರ ಅಂಗಡಿ ಮಾಲೀಕರು ರೈತರಿಗೆ ದುಪಟ್ಟು ಹಣಕ್ಕೆ ಮಾರಾಟ ಮಾಡಿದರ ಕುರಿತು ಕಲ್ಲೂರು ಗ್ರಾಮದ ಸಹಕಾರಿ ಸಂಘಕ್ಕೆ ಹಾಗೂ ಮುದಗಲ್‌ನ ಬಾಲಜಿ ಕೃಷಿ ಕೇಂದ್ರ ತಲಾ ಒಂದು ನೋಟಿಸ್ ನೀಡಲಾಗಿದ್ದು, ಸೇರಿದಂತೆ ಒಟ್ಟು 04 ಅಂಗಡಿಗಳಿಗೆ ಪರವಾನಿಗೆ ರದ್ದು ಮಾಡಲಾಗಿದೆ. ಪ್ರಕಾಶ ಚೌಹಣ ಜಂಟಿ ನಿರ್ದೇಶಕ ಕೃಷಿ ಇಲಾಖೆ ರಾಯಚೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net